ಮೋದಿ ಕೆಣಕಿದ ರಮ್ಯಾಗೆ ಟ್ವೀಟಿಗರ ಕುಟುಕು

ಗುರುವಾರ , ಮಾರ್ಚ್ 21, 2019
25 °C

ಮೋದಿ ಕೆಣಕಿದ ರಮ್ಯಾಗೆ ಟ್ವೀಟಿಗರ ಕುಟುಕು

Published:
Updated:
Prajavani

ಬೆಂಗಳೂರು: ‘ಭಯೋತ್ಪಾದನೆ ರೋಗದ ಬೇರುಗಳು ನೆರೆಯ ರಾಷ್ಟ್ರದಲ್ಲಿದ್ದು, ಅದಕ್ಕೆ ಚಿಕಿತ್ಸೆ ನೀಡುತ್ತೇವೆ. ಉಗ್ರರ ಮನೆಯೊಳಗೆ ನುಗ್ಗಿ ಹೊಡೆಯುತ್ತೇವೆ’ ಎಂದು ಎಚ್ಚರಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್‌ ಸಂವಹನ ವಿಭಾಗದ ಮುಖ್ಯಸ್ಥೆ ರಮ್ಯಾ ಕೆಣಕಿದ್ದಾರೆ. ಇದಕ್ಕೆ ಟ್ವೀಟಿಗರು ರಮ್ಯಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

‘ಭಯೋತ್ಪಾದನೆಯ ಮುಂದೆ ಬಾಗುವುದಿಲ್ಲ ಎಂದು 2014ರ ಚುನಾವಣೆಗೂ ಮುನ್ನಾ ನೀವು (ಮೋದಿ) ಹೇಳಿದ್ದಿರಿ. ಆದರೆ, ಚುನಾವಣೆ ಬಳಿಕ ಪಾಕಿಸ್ತಾನಕ್ಕೆ ಹೋಗಿ ನವಾಜ್‌ ಷರೀಫ್‌ ಅವರನ್ನು ಅಪ್ಪಿಕೊಂಡು, ಬಿರಿಯಾನಿ ತಿಂದು ಹಿಂದಿರುಗಿದಿರಿ. ಈಗ ನಾವು ಏಕೆ ನಿಮ್ಮನ್ನು ನಂಬಬೇಕು? ನೋಟು ರದ್ದತಿಯಿಂದ ಭಯೋತ್ಪಾದನೆ ನಿಲ್ಲುತ್ತದೆ ಎಂದು ಹೇಳಿದ್ದಿರಿ. ಅದೂ ಆಗಲಿಲ್ಲ. ಈಗ ದಾಳಿ ನಡೆಸಿ ಕೊಂದಿದ್ದೀರಿ ಎಂದರೆ ನಂಬುವುದು ಹೇಗೆ?’ ಎಂದು ರಮ್ಯಾ ಟ್ವೀಟ್ ಮಾಡಿದ್ದರು. 

‘ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಅನಿರೀಕ್ಷಿತ ಭೇಟಿ ನೀಡಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು ಗೊತ್ತು. ಇಡೀ ಜಗತ್ತೇ ಪಾಕಿಸ್ತಾನವೆಂದರೆ ನರಕ ಇದ್ದಂತೆ ಎನ್ನುತ್ತಿರುವಾಗ, ರಮ್ಯಾ ಮೇಡಂ ಅವರೇ ನೀವು ಪಾಕಿಸ್ತಾನದಲ್ಲಿ ಅದ್ಯಾವ ಸ್ವರ್ಗ ಕಂಡಿದ್ದೀರೋ ಗೊತ್ತಿಲ್ಲ’ ಎಂದು ಅಶೋಕ್ ರಾಥೋಡ್ ಎಂಬುವರು ಟ್ವಿಟರ್‌ನಲ್ಲಿ ಕುಟುಕಿದ್ದಾರೆ. 

‘ಮೇಡಂ ನೀವು ಒಬ್ಬರಿಗೆ ಒಂದು ಬೆರಳು ತೋರಿಸ್ತಾಯಿದ್ದೀರಿ, ನಿಮ್ಮ ಮಿಕ್ಕ ಬೆರಳುಗಳು ನಿಮ್ಮ ಕಡೆಗೇ ಇವೆ.  ದೇಶದ ಆರ್ಮಿ ವಿಷಯದಲ್ಲೂ ಪಾಲಿಟಿಕ್ಸ್ ಮಾಡ್ತೀರಲ್ಲಾ’ ಎಂದು ಅಶ್ವಿನಿ ಎನ್‌.ಕೆ. ಮಡಿವಾಳ ಎಂಬುವರು ಪ್ರಶ್ನಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 38

  Happy
 • 7

  Amused
 • 1

  Sad
 • 1

  Frustrated
 • 34

  Angry

Comments:

0 comments

Write the first review for this !