ಗುರುವಾರ , ನವೆಂಬರ್ 14, 2019
22 °C
ಎರಡು ವರ್ಷದ ಮಗುವನ್ನು ಕೊಂದ ಆರೋಪದಲ್ಲಿ ಸೆರೆಯಾದ ತಾಯಿ, ತಂದೆ; ಮತ್ತೊಂದು ಮಗು ಅನಾಥ!

ದೆವ್ವ ಬಿಡಿಸಲು ಹೊಡೆದ ಏಟಿಗೆ ಬಲಿಯಾದ ಕಂದಮ್ಮ!

Published:
Updated:

ಮೈಸೂರು: ದೆವ್ವ ಮೆಟ್ಟಿಕೊಂಡಿದೆ ಎಂದು ಭಾವಿಸಿದ ಪೋಷಕರು ತಮ್ಮ ಮಗುವಿಗೆ ತೆಂಗಿನ ಹೊಂಬಾಳೆಯಿಂದ ಹೊಡೆದಿದ್ದು, ಆ ಏಟಿಗೆ ಎರಡು ವರ್ಷದ ಕುಶಾಲ್‌ ಗುರುವಾರ ಮೃತಪಟ್ಟಿದ್ದಾನೆ. ‌ಹುಣಸೂರು ತಾಲ್ಲೂಕಿನ ಅಸ್ವಾಳ್‌ ಗ್ರಾಮದವರಾದ, ಕುಶಾಲ್‌ ತಾಯಿ ಪರಿಮಳಾ, ತಂದೆ ಶಶಿಕುಮಾರ್‌ ರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ದಂಪತಿಯ ಮಗು ಕುಶಾಲ್, ಮೂರ್ಛೆರೋಗದಿಂದ ಬಳಲುತ್ತಿತ್ತು. ಮೂರು ವರ್ಷದ ಹಿಂದೆ ಮೃತಪಟ್ಟ ತನ್ನ ತಾಯಿಯ ಆತ್ಮವೇ ಇದಕ್ಕೆ ಕಾರಣ ಎಂದು ಭಾವಿಸಿದ ಮಗುವಿನ ತಾಯಿ ಪರಿಮಳಾ, ದೆವ್ವ ಬಿಡಿಸಲು ಈ ಕೃತ್ಯ ನಡೆಸಿದ್ದಾರೆ.

ಪ್ರತಿಕ್ರಿಯಿಸಿ (+)