ಭಾನುವಾರ, ಸೆಪ್ಟೆಂಬರ್ 19, 2021
24 °C

ಪಾಕ್‌ ಪ್ರಧಾನಿ ಜತೆ ಬಿರಿಯಾನಿ ತಿನ್ನುವವರು ನೀವು: ಬಿಜೆಪಿಗೆ ತಿವಿದ ಯು.ಟಿ.ಖಾದರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಿಮಗೆ ದೇಶಪ್ರೇಮೆ, ಜನರ ಮೇಲೆ ಹಾಗೂ ಸಂವಿಧಾನದ ಮೇಲೆ ವಿಶ್ವಾಸವಿದ್ದರೆ ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವವರಿಗೆ ಯಾವುದೇ ಸ್ಥಾನ ಕೊಡಬೇಡಿ’ ಎಂದು ಸಚಿವ ಯು.ಟಿ.ಖಾದರ್‌ ಬಿಜೆಪಿಗೆ ಸವಾಲು ಹಾಕಿದರು.

ರಾಜಕಾರಣದ ತಾಜಾ ಅಪ್‌ಡೇಟ್ಸ್‌ಗೆ http://bit.ly/2yf5kax ಲಿಂಕ್ ಕ್ಲಿಕ್ ಮಾಡಿ

ಸದನದಲ್ಲಿ ಮಾತನಾಡುವಾಗ ಬಿಜೆಪಿಯನ್ನು ಹಿಗ್ಗಾಮುಗ್ಗಾ ಟೀಕಿಸಿದ ಖಾದರ್, ನಮ್ಮ ಶಾಸಕರನ್ನು ಕೋಟೆಯಲ್ಲಿ ಕೂಡಿ ಹಾಕಿದ್ದೀರಿ. ನಮ್ಮ ಸಚಿವರು ಅಲ್ಲಿಗೆ ಹೋದಾಗ ಪೊಲಿಸ್‌ ಬಳಸಿ ತಡೆಯುತ್ತೀರಿ’ ಎಂದು ಆಕ್ಷೇಪಿಸಿದರು.

‘ನಮ್ಮ ದೇಶದ ಮೇಲೆ ದಾಳಿ ಮಾಡಿದವರಿಗೆ ಕೆಂಪು ಹಾಸು ಹಾಸುತ್ತೀರಿ. ಪಾಕ್‌ ಪ್ರಧಾನಿಯ ಜೊತೆಗೆ ಬಿರಿಯಾನಿ ಊಟ ಮಾಡುತ್ತೀರಿ. ಆದರೆ ನಮಗೆ ಮಾತ್ರ ನಮ್ಮವರ ಜತೆ ಮತನಾಡಲು ಅವಕಾಶ ಕೊಡದೆ ತಡೆಯುತ್ತೀರಿ. ಅಧಿಕಾರಕ್ಕಾಗಿ ಏನೆಲ್ಲಾ ಮಾಡುತ್ತಿದ್ದೀರಿ. ಇಂದು ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಿ’ ಎಂದು ಖಾದರ್ ತಿರುಗೇಟು ನೀಡಿದರು.

‘ಮುಂಬೈನಲ್ಲಿರುವವರನ್ನು ಅತೃಪ್ತರು ಎಂದು ಬಿಂಬಿಸಿ ಮಾಧ್ಯಮದವರು ತಪ್ಪು ಮಾಡುತ್ತಿದ್ದಾರೆ. ವಾಸ್ತವವಾಗಿ ಅವರೆಲ್ಲರೂ ತೃಪ್ತರು. ಅವರು ಬೆಂಗಳೂರಿಗೆ ವಾಪಸ್ ಬಂದ ಮೇಲೆ ಎಲ್ಲವೂ ಬಯಲಾಗುತ್ತದೆ’ ಎಂದು ಛೇಡಿಸಿದರು.

‘ನಮ್ಮ ಶಾಸಕರಿಗೆ ಬಂದೂಕು ತೋರಿಸಿ ಬೆದರಿಸುತ್ತಿದ್ದೀರಿ. ಬಿಜೆಪಿಯ ರಾಜ್ಯ ಮತ್ತು ಕೇಂದ್ರ ನಾಯಕರು ಇದರಲ್ಲಿ ಶಾಮೀಲಾಗಿದ್ದಾರೆ. ಅನುಭವಿ ವಕೀಲರಿಂದ ಅವರಿಗೆ ಮಾರ್ಗದರ್ಶನ ನೀಡಿ, ಆಮಿಷ ಒಡ್ಡಿ ಬೇರೆಡೆಗೆ ಕಳುಹಿಸಿದ್ದೀರಿ’ ಎಂದು ಆರೀಪಿಸಿದರು.

‘ಸುಪ್ರೀಂಕೋರ್ಟ್‌ನಲ್ಲಿರುವ ವಿಚಾರವನ್ನು ಇಲ್ಲಿ ಚರ್ಚಿಸಬೇಡಿ. ಶಾಸಕರನ್ನು ಕರೆತರುವುದು, ಇಟ್ಟುಕೊಳ್ಳುವುದು ನಿಮಗೆ ಬಿಟ್ಟದ್ದು. ಕಲಾಪವನ್ನು ಏಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಿ. ಈಗ ನಡೆದಿರುವುದು ನಿಮ್ಮ ಪಾರ್ಟಿಯ ಒಳ ಪ್ಯಾಪಾರ’ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಆಕ್ಷೇಪಿಸಿದರು.

ಜೆಡಿಎಸ್ ಶಾಸಕ ಶಿವಲಿಂಗೇಗೌಡ ಮಾತನಾಡಿ, ‘ನಮ್ಮ ಪಕ್ಷದ ಚಿಹ್ನೆಯ ಅಡಿ ಗೆದ್ದವರನ್ನು ವಾಮಮಾರ್ಗದಲ್ಲಿ ಅಪಹರಿಸಿದ್ದೀರಿ. ರಾಜೀನಾಮೆ ನೀಡಿದವರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ. ಅವರಿಗೆ ಮಂತ್ರಿ ಸ್ಥಾನ ನೀಡುವುದಿಲ್ಲ ಎಂದು ನಿಮ್ಮ ರಾಜ್ಯ, ರಾಷ್ಟ್ರ ನಾಯಕರಿಂದ ಹೇಳಿಸಿ. ಈಗಲೇ, ಈ ಕ್ಷಣಕ್ಕೆ ಸಿಎಂ ಕರೆತಂದು ವಿಶ್ವಾಸಮತ ಯಾಚಿಸುತ್ತೇವೆ, ನಿರ್ಣಯ ಮಾಡುತ್ತೇವೆ. ಯಾಕೆ ಗುಟ್ಟು ಮುಚ್ಚಿಡುತ್ತಿದ್ದೀರಿ. ಯಾಕೆ ನಾಟಕ ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದರು.

‘ಪ್ರಜಾವಾಣಿ’ ಸುದ್ದಿ, ಬರಹಗಳಲ್ಲಿ ರಾಜಕೀಯ ಬೆಳವಣಿಗೆಗಳ ಸಮಗ್ರ ನೋಟ...   

ಅತೃಪ್ತ ಶಾಸಕರ ಪರ ಸ್ಪೀಕರ್‌ ಭೇಟಿಯಾದ ವಕೀಲ ಅಶೋಕ್ ಹಾರನಹಳ್ಳಿ

ವಿಶ್ವಾಸಮತ: ಕಲಾಪದಲ್ಲಿ ಭಾಗವಹಿಸಲು ಆಡಳಿತ ಪಕ್ಷದ ನಿರಾಸಕ್ತಿ?

ವಿಧಾನಸಭೆ ಕಲಾಪ ಆರಂಭ: ಸದನಕ್ಕೆ ಬಂದ ಸ್ಪೀಕರ್, ಬಿಜೆಪಿ ಶಾಸಕರು, ಮೈತ್ರಿ ನಾಪತ್ತೆ

ಸಿಎಂ ಕುಮಾರಸ್ವಾಮಿ ರಾಜೀನಾಮೆ ಪತ್ರ ನಕಲಿ? ಚರ್ಚೆಗೆ ಗ್ರಾಸ 

ರಾಜೀನಾಮೆ ಕೊಡಲು ಹೇಳ್ರಿ: ಸಿಎಂ ವಿರುದ್ಧ ಸಿದ್ದರಾಮಯ್ಯ ಪರೋಕ್ಷ ಸಿಡಿ ಮಿಡಿ 

ದೋಸ್ತಿಗೆ ಇನ್ನೂ ಸಿಗದ ‘ವಿಶ್ವಾಸ’; ಮತಕ್ಕೆ ಹಾಕಲು ಮಂಗಳವಾರ ಸಂಜೆ 6ರ ಗಡುವು 

ಕಾಯುವುದಷ್ಟೇ ಬಿಜೆಪಿ ಕಾಯಕ 

ಬಿರಿಯಾನಿ ತಿನ್ನದಿದ್ದರೆ ಹೇಗೆ: ಮುಖ್ಯಮಂತ್ರಿಗೆ ಸಭಾಧ್ಯಕ್ಷರ ಪ್ರಶ್ನೆ 

ರಾಜೀನಾಮೆ ಕೊಟ್ಟವರಿಗೂ ವಿಪ್‌ ಅನ್ವಯ; ಸ್ಪೀಕರ್ ರೂಲಿಂಗ್ 

‘ಬಿಜೆಪಿ ಕೈಯಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆಯ ರಕ್ತ’ 

ಇಂದು ವಿಚಾರಣೆಗೆ ಬರಲು ಸಾಧ್ಯವಿಲ್ಲ: ಅತೃಪ್ತ ‌ಶಾಸಕರಿಂದ ಸ್ಪೀಕರ್‌ಗೆ ಪತ್ರ 

ದೇವರ ವರ: ಇಬ್ಬರು ಮುಖ್ಯಮಂತ್ರಿ– ಎಚ್‌ಡಿಕೆ–ಬಿಎಸ್‌ವೈಗೆ ದೇವರ ಹೂ ಪ್ರಸಾದ 

ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೊ: ಸದನದಲ್ಲಿ ಕಣ್ಣೀರಿಟ್ಟ ಲಿಂಬಾವಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.