ಉಡುಪಿ: ಮತ್ತೆ ಐದು ಮಂಗಗಳ ಶವ ಪತ್ತೆ

7

ಉಡುಪಿ: ಮತ್ತೆ ಐದು ಮಂಗಗಳ ಶವ ಪತ್ತೆ

Published:
Updated:

ಉಡುಪಿ: ಅಜೆಕಾರು, ಬೈಲೂರು, ಪೇತ್ರಿ, ಬೈಂದೂರು ಸೇರಿದಂತೆ ಒಟ್ಟು ಐದು ಕಡೆಗಳಲ್ಲಿ ಮಂಗನ ಶವ ಪತ್ತೆಯಾಗಿದೆ. ಈ ಪೈಕಿ ಎರಡು ಮಂಗಗಳ ಮೃತ ದೇಹದ ಮಾದರಿಗಳನ್ನು ಪರೀಕ್ಷೆಗೆ ಪುಣೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಕಾರ್ಕಳ ತಾಲ್ಲೂಕಿನ ಅಜೆಕಾರು, ಇರ್ವತ್ತೂರು, ಬೈಲೂರಿನಲ್ಲಿ ತಲಾ 1, ಉಡುಪಿ ತಾಲ್ಲೂಕಿನ ಪೇತ್ರಿಯಲ್ಲಿ 1, ಬೈಂದೂರಿನಲ್ಲಿ 1 ಮಂಗನ ಶವ ಪತ್ತೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 63 ಮಂಗಗಳು ಸಾವನ್ನಪ್ಪಿದ್ದು, 26 ಮಂಗಗಳ ಮೃತ ದೇಹದ ಅಂಗಾಂಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇವುಗಳಲ್ಲಿ 19 ಮಂಗಗಳ ಮರಣೋತ್ತರ ಪರೀಕ್ಷೆ ವರದಿ ಬಂದಿದೆ. 12 ಮಂಗಗಳಲ್ಲಿ ಕಾಯಿಲೆ ಇರುವುದು ದೃಢಪಟ್ಟಿದೆ. 7 ಮಂಗಗಳಲ್ಲಿ ಸೋಂಕು ಪತ್ತೆಯಾಗಿಲ್ಲ.

ಜಿಲ್ಲಾಸ್ಪತ್ರೆಯಿಂದ ಐವರು ಹಾಗೂ ಖಾಸಗಿ ಆಸ್ಪತ್ರೆಯಿಂದ ಒಬ್ಬ ಜ್ವರ ಪೀಡಿತನ ರಕ್ತ ಮಾದರಿಯನ್ನು ಶಿವಮೊಗ್ಗಕ್ಕೆ ಕಳುಹಿಸಲಾಗಿದ್ದು, 5 ಮಂದಿಯಲ್ಲಿ ಶೋಂಕು ಇಲ್ಲ(ನೆಗೆಟಿವ್‌) ಎಂಬ ವರದಿ ಬಂದಿದೆ. ಇನ್ನೊಂದು ವರದಿ ಬಗ್ಗೆ ನಿರೀಕ್ಷಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ 45 ರೋಗಿಗಳಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ಇದುವರೆಗೂ 114 ಜನರು ಚಿಕಿತ್ಸೆ ಪಡೆದಿದ್ದು, 45 ರೋಗಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. 85 ಜನ ಗುಣಮುಖರಾಗಿ ಮನೆಗೆ ಮರಳಿದ್ದಾರೆ. 32 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !