ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಜಿಸಿ ‘ಪರಾಮರ್ಶ್‌’ ಯೋಜನೆಗೆ ರಾಜ್ಯದ 17 ಕಾಲೇಜು ಆಯ್ಕೆ

Last Updated 8 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಆರಂಭಿಸಿರುವ ‘ಪರಾಮರ್ಶ್‌’ ಯೋಜನೆಗೆ ರಾಜ್ಯದ 17 ಕಾಲೇಜುಗಳು ಆಯ್ಕೆಯಾಗಿವೆ.

ಹೀಗೆ ಆಯ್ಕೆಯಾದ ಕಾಲೇಜುಗಳು ತಮ್ಮ ಆಯ್ಕೆಯ 5 ಕಾಲೇಜುಗಳನ್ನು 2022ರೊಳಗೆ ಕನಿಷ್ಠ 2.5 ಸಿಜಿಪಿಎ ಅಂಕದೊಂದಿಗೆ ‘ನ್ಯಾಕ್‌’ ಮಾನ್ಯತೆ ಪಡೆಯಲು ನೆರವು ನೀಡುವ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಬೇಕು. ಇದಕ್ಕಾಗಿ ಪ್ರತಿಯೊಂದು ಕಾಲೇಜಿಗೆ ₹ 30 ಲಕ್ಷ ಧನಸಹಾಯ ನೀಡಲಾಗುತ್ತದೆ.

ಈಗಾಗಲೇ ‘ನ್ಯಾಕ್‌’ ಮಾನ್ಯತೆಯನ್ನು ಪಡೆದು 3.5 ಸಿಎಜಿಪಿ ಅಂಕ ಗಳಿಸಿದ ದೇಶ 167 ಕಾಲೇಜುಗಳನ್ನು ಇದಕ್ಕೆ ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಮೂರು ಸರ್ಕಾರಿ ಕಾಲೇಜುಗಳು ಸೇರಿವೆ. ಆ ಪೈಕಿ ಬೆಂಗಳೂರಿನ ವಿಜ್ಞಾನ ಕಾಲೇಜು ಸಹ ಒಂದು.

ಕಾಲೇಜುಗಳು:ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜು, ಮೌಂಟ್‌ ಕಾರ್ಮೆಲ್‌ ಕಾಲೇಜು, ಸೇಂಟ್‌ ಜೋಸೆಫ್‌ ಕಾಮರ್ಸ್‌ ಕಾಲೇಜು, ಸೇಂಟ್‌ ಜೋಸೆಫ್‌ ಕಾಲೇಜು, ಲಾಲ್‌ಬಾಗ್‌ ರಸ್ತೆ, ಇಂಡಿಯನ್‌ ಅಕಾಡೆಮಿ ಡಿಗ್ರಿ ಕಾಲೇಜು, ಮಂಗಳೂರಿನ ಸೇಂಟ್‌ ಅಲೋಶಿಯಸ್‌ ಕಾಲೇಜು, ಸೇಂಟ್‌ ಆಗ್ನೆಸ್ ಕಾಲೇಜು,ಉಜಿರೆಯ ಎಸ್‌ಡಿಎಂ ಕಾಲೇಜು, ಬಂಟ್ವಾಳ ಎಸ್‌ವಿಎಸ್‌ ಕಾಲೇಜು, ಧಾರವಾಡ ಜೆ.ಜಿ.ಕಾಮರ್ಸ್‌ ಕಾಲೇಜು, ಹುಬ್ಬಳ್ಳಿ ಪಿ.ಸಿ.ಜಬಿನ್‌ ಸೈನ್ಸ್‌ ಕಾಲೇಜು, ಬಳ್ಳಾರಿಯ ಕೊಟ್ಟೂರೇಶ್ವರ ಕಾಲೇಜು, ಜಮಖಂಡಿಯ ಬಿಡಿಯಾ ಕಾಮರ್ಸ್‌ಬಿಎಚ್‌ಎಸ್‌, ಆರ್ಟ್ಸ್‌, ಟಿಜಿಪಿ ಸೈನ್ಸ್‌ ಕಾಲೇಜು, ಬಾಗಲಕೋಟೆ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು, ಮೈಸೂರಿನ ಜೆಎಸ್‌ಎಸ್‌ ಮಹಿಳಾ ಕಾಲೇಜು, ಚಿಕ್ಕೋಡಿಯ ಕೆಎಲ್‌ಇ ಸೊಸೈಟಿಯ ಬಸವ‍ಪ್ರಭು ಕೋರೆ ಆರ್ಟ್ಸ್‌, ಸೈನ್ಸ್‌, ಕಾಮರ್ಸ್‌ ಕಾಲೇಜು, ನಿಪ್ಪಾಣಿಯ ಕೆಎಲ್‌ಇ ಸೊಸೈಟಿಯ ಜಿಐಬಿ ಆರ್ಟ್‌, ಸೈನ್ಸ್‌, ಕಾಮರ್ಸ್‌ ಕಾಲೇಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT