ಶನಿವಾರ, ಫೆಬ್ರವರಿ 27, 2021
19 °C

3 ಮಹಾನಗರ ಪಾಲಿಕೆ, 102 ನಗರ ಸ್ಥಳೀಯ ಸಂಸ್ಥೆ: ಮತ ಎಣಿಕೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೂರು ಮಹಾನಗರ ಪಾಲಿಕೆಗಳು ಮತ್ತು 102  ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗಿದೆ. 

2019ರ ಲೋಕಸಭಾ ಚುನಾವಣೆಗೆ ಈ ಚುನಾವಣೆಯ ಫಲಿತಾಂಶ ದಿಕ್ಸೂಚಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮತದಾರರು ನೀಡಿರುವ ತೀರ್ಪಿನ ಆಧಾರದಲ್ಲಿ ಲೋಕಸಭಾ ಚುನಾವಣೆಗೆ ತಂತ್ರಗಳನ್ನು ರೂಪಿಸಲು ರಾಜಕೀಯ ಪಕ್ಷಗಳು ಯೋಜಿಸುತ್ತಿವೆ. 

ಮೈಸೂರು, ತುಮಕೂರು, ಶಿವಮೊಗ್ಗ ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆದಿದೆ. 

(ಶಿರಸಿಯಲ್ಲಿ ಸ್ಟ್ರಾಂಗ್ ರೂಮ್ ಬಾಗಿಲು ತೆಗೆದು ಇವಿಎಂ ಕೊಂಡೊಯ್ಯುತ್ತಿರುವ ಸಿಬ್ಬಂದಿ)

11 ಗಂಟೆಗೆ ಫಲಿತಾಂಶ

ಶಿವಮೊಗ್ಗ: ಶಿವಮೊಗ್ಗ ಪಾಲಿಕೆ ಮೇಯರ್, ಜೆಡಿಎಸ್‌ನ ನಾಗರಾಜ ಕಂಕಾರಿ ಗೆಲುವು ಸಾಧಿಸಿದ್ದಾರೆ. 

ಶಿರಸಿ: ಇಲ್ಲಿನ ನಗರಸಭೆಯ 31 ವಾರ್ಡ್‌ಗಳಿಗೆ ನಡೆದ ಚುನಾವಣೆಯ ಮತ ಎಣಿಕೆಗೆ ಆರಂಭವಾಗಿದ್ದು, ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆದಿದೆ. ಒಟ್ಟು 120 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

18ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಖಾದರ್ ಆನವಟ್ಟಿ ಗೆಲುವು. ಯಲ್ಲಾಪುರ ಪಟ್ಟಣ ಪಂಚಾಯ್ತಿಯಲ್ಲಿ 2 ಬಿಜೆಪಿ, 2 ಕಾಂಗ್ರೆಸ್,  ಒಬ್ಬರು ಜೆಡಿಎಸ್ ಅಭ್ಯರ್ಥಿ ಗೆಲುವು.

ನಗರಸಭೆಯ ಮೊದಲ ಹಂತದ ಫಲಿತಾಂಶ: 3 ಬಿಜೆಪಿ, 3 ಕಾಂಗ್ರೆಸ್, 1 ಪಕ್ಷೇತರ ಅಭ್ಯರ್ಥಿ ಗೆಲುವು.

ಚಾಮರಾಜನಗರ: ಚಾಮರಾಜನಗರ, ಕೊಳ್ಳೇಗಾಲ ನಗರಸಭೆಗಳ ಮತ ಎಣಿಕೆ 8 ಗಂಟೆಯಿಂದ ಆರಂಭವಾಗಿದ್ದು, 11 ಗಂಟೆ ಪೂರ್ಣ ಫಲಿತಾಂಶ ಹೊರ ಬರುವ ನಿರೀಕ್ಷೆಯಿದೆ. 

ಚಾಮರಾಜನಗರ ನಗರಸಭೆಗೆ‌ 9 ಬಾರಿ ಆಯ್ಕೆಯಾಗಿದ್ದ, ಕಾಂಗ್ರೆಸ್‌ನ ನಂಜುಂಡಸ್ವಾಮಿ ಸೋಲು ಅನುಭವಿಸಿದ್ದಾರೆ. ಎಸ್ಡಿಪಿಐ ಮಹೇಶ್ ಗೆಲುವು ಪಡೆದಿದ್ದಾರೆ. 

ಚಾಮರಾಜನಗರ ನಗರ ನಾಲ್ಕು ವಾರ್ಡ್ ಗಳ ಫಲಿತಾಂಶ ಪ್ರಕಟ: ಬಿಜೆಪಿ 1; ಕಾಂಗ್ರೆಸ್ 1, ಎಸ್‌ಡಿಪಿ ಐ 1; ಪಕ್ಷೇತರ 1

ಕೊಳ್ಳೇಗಾಲ ನಗರಸಭೆ 8 ವಾರ್ಡ್‌ಗಳ ಫಲಿತಾಂಶ ಪ್ರಕಟ– ಬಿಎಸ್‌ಪಿ 2,  ಕಾಂಗ್ರೆಸ್ 2, ಬಿಜೆಪಿ 1, ಪಕ್ಷೇತರ 3

ಯಾದಗಿರಿ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಗರ ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಮೊದಲ ಸುತ್ತಿನಲ್ಲಿ 1, 7,13 ವಾರ್ಡ್‌ಗಳ ಮತ ಎಣಿಕೆ ನಡೆಯುತ್ತಿದೆ. 

ಮೊದಲ ಸುತ್ತಿನ ಮತ ಎಣಿಕೆಯಲ್ಲಿ 7ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಬಿಗೇರಿ ವಿಜೇತರಾಗಿದ್ದಾರೆ. 1ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಗೌಸಾಬೇಗಂ 620 ಮತ ಪಡೆದು ಗೆಲುವು ಸಾಧಿಸಿದ್ದಾರೆ.

ಗುರುಮಠಕಲ್ ಪುರಸಭೆ ಪ್ರಥಮ ಹಂತದ ಮತ ಏಣಿಕೆ ಮುಕ್ತಾಯವಾಗಿದೆ. ವಾರ್ಡ್ ನಂ.1- ಜೆಡಿಎಸ್, ವಾರ್ಡ್ ನಂ.9– ಜೆಡಿಎಸ್, ವಾರ್ಡ್ ನಂ.17-ಕಾಂಗ್ರೆಸ್ ಗೆಲುವು ಪಡೆದಿದೆ. 

(ಯಾದಗಿರಿಯಲ್ಲಿ ಮತ ಎಣಿಕೆ ಕೇಂದ್ರದ ಮುಂದೆ ಸೇರಿರುವ ಜನ)

ಬಳ್ಳಾರಿ: ಕುಡುತಿನಿ ಪಟ್ಟಣ ಪಂಚಾಯ್ತಿಯ 1ನೇ ವಾರ್ಡ್‌ನಿಂದ ಕಾಂಗ್ರೆಸ್ ಅಭ್ಯರ್ಥಿ ಯು.ದೇವಮ್ನ, 11ನೇ ವಾರ್ಡ್‌ನಲ್ಲಿ ಬಿಜೆಪಿಯ ಜಿ.ಎಸ್‌.ವೆಂಕಟರಮಣ ಗೆಲುವು ಪಡೆದಿದ್ದಾರೆ. 

ಬಳ್ಳಾರಿ ಒಂದನೇ ವಾರ್ಡನ ಬಿಜೆಪಿ ಅಭ್ಯರ್ಥಿ ಹೆಚ್.ವಿನಯ್ ಕುಮಾರ್ ಗೆಲುವು ಪಡೆದಿದ್ದಾರೆ.  ಕೊಟ್ಟೂರು ಪಟ್ಟಣ ಪಂಚಾಯ್ತಿ 2ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ವಿಶಾಲಾಕ್ಷಿ , ಕುಡುತಿನಿ ಪಟ್ಟಣ ಪಂಚಾಯ್ತಿ 2ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ವಿ ರಾಜಶೇಖರ್, 22ನೇ ವಾರ್ಡ್‌ನಲ್ಲಿ ಆರ್.ಸುಜಾತಾ ಗೆಲುವು

ಕಾರವಾರ: ನಗರಸಭೆಯ 31 ವಾರ್ಡ್ಗಳಿಗೆ ನಡೆದ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಾರ್ಡ್‌ಗೆ ತಲಾ ಎರಡು ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಫಲಿತಾಂಶದ ಕುತೂಹಲ ತಿಳಿಯಲು ನೂರಾರು ಜನರು ಸೇರಿದ್ದಾರೆ.

ಕುಮಟಾ ಪುರಸಭೆ: ವಾರ್ಡ್ ನಂಬರ್ 1, 9, 10ರಲ್ಲಿ ಬಿಜೆಪಿ, 17ರಲ್ಲಿ ಕಾಂಗ್ರೆಸ್ ಗೆಲುವು. ಕಾರವಾರ ನಗರಸಭೆ: ವಾರ್ಡ್ ನಂಬರ್ 2ರಲ್ಲಿ ಕಾಂಗ್ರೆಸ್, 18ರಲ್ಲಿ ಬಿಜೆಪಿ, 17ರಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು.

(ಬಳ್ಳಾರಿಯ ಮತ ಎಣಿಕೆ ಕೇಂದ್ರದಲ್ಲಿ ಫಲಿತಾಂಶ ಕ್ಜೆ‌ ಕಾದಿರುವ ಜನ)

ಚಿತ್ರದುರ್ಗ: ಚಿತ್ರದುರ್ಗ ನಗರಸಭೆಯ ಮತ ಎಣಿಕೆ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ, ಚಳ್ಳಕೆರೆ ನಗರಸಭೆ ಮತ್ತು ಹೊಸದುರ್ಗ ಪುರಸಭೆ ಮತ ಎಣಿಕೆ ಆಯಾ ತಾಲ್ಲೂಕು ಕಚೇರಿಗಳಲ್ಲಿ ನಡೆಯುತ್ತಿದೆ.

ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ ಹಾಗೂ ತಹಶೀಲ್ದಾರ್ ಸಮ್ಮುಖದಲ್ಲಿ ಭದ್ರತಾ ಕೊಠಡಿ ತೆರೆಯಲಾಯಿತು. ಅಂಚೆ ಮತ ಎಣಿಕೆ ಪ್ರಕ್ರಿಯೆ ಈಗಷ್ಟೇ ಮುಗಿದಿದ್ದು, ವಿದ್ಯುನ್ಮಾನ ಮತಯಂತ್ರ ತೆರೆಯಲಾಗಿದೆ.

ಚಿತ್ರದುರ್ಗ ನಗರಸಭೆಯ 35, ಚಳ್ಳಕೆರೆ ನಗರಸಭೆಯ 30 ಹಾಗೂ ಹೊಸದುರ್ಗ ಪುರಸಭೆಯ 23 ವಾರ್ಡ್ ಗಳಿಗೆ ಮತದಾನ ನಡೆದಿತ್ತು. ಚಳ್ಳಕೆರೆ 19ನೇ ವಾರ್ಡ್ ಗೆ ಅವಿರೋಧ ಅಯ್ಕೆ ಆಗಿದೆ.

1, 16 ಹಾಗೂ 22ನೇ ವಾರ್ಡ್‌ನಲ್ಲಿಯೂ ಬಿಜೆಪಿ ಜಯಭೇರಿ.

(ಕಾರವಾರದಲ್ಲಿ ಮತ ಎಣಿಕೆ ಪ್ರಕ್ರಿಯೆ)

ಕಲಬುರ್ಗಿ: ಚಿಂಚೋಳಿಯಲ್ಲಿ ವಾರ್ಡ್ 1 ಪಕ್ಷೇತರ, ವಾರ್ಡ್ 2 ಕಾಂಗ್ರೆಸ್, ವಾರ್ಡ್ 3 ಬಿಜೆಪಿ, ವಾರ್ಡ್ 4 ಕಾಂಗ್ರೆಸ್, ವಾರ್ಡ್ 9 ಕಾಂಗ್ರೆಸ್, ವಾರ್ಡ್ 10 ಬಿಜೆಪಿ, ವಾರ್ಡ್ 11, 12 ಬಿಜೆಪಿ, ವಾರ್ಡ್ 17 ಬಿಎಸ್ ಪಿ, ವಾರ್ಡ್ 18 ಕಾಂಗ್ರೆಸ್, ವಾರ್ಡ್ 20 ಪಕ್ಷೇತರ, ವಾರ್ಡ್ 21 ಕಾಂಗ್ರೆಸ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು