ಬುಧವಾರ, ನವೆಂಬರ್ 13, 2019
23 °C

ಸಿದ್ದರಾಮಯ್ಯ ಅವಧಿಯ ಅಕ್ರಮಕ್ಕೆ ಶೀಘ್ರದಲ್ಲೇ ಕ್ರಮ: ಸಚಿವ ಸೋಮಣ್ಣ

Published:
Updated:
Prajavani

ಚಿತ್ರದುರ್ಗ: ‘ಈ ಹಿಂದೆ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದಾಗ ಅವರ ಜೊತೆ ನಾನೂ ಸಚಿವನಾಗಿ ಕೆಲಸ ಮಾಡಿದ್ದೇನೆ. ವಸತಿ ಯೋಜನೆಯಡಿ ಎಲ್ಲೆಲ್ಲಿ ಅಕ್ರಮ ಆಗಿದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಿದ್ದೇನೆ’ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ‘ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದಾಗ ಭಾನುವಾರ ಸರ್ಕಾರಿ ರಜೆ ಇದ್ದರೂ ವಿಧಾನಸೌಧದಲ್ಲಿ ನನ್ನ ಕಚೇರಿ ತೆರೆದಿತ್ತು. ಪ್ರಮುಖ ಕಡತಕ್ಕೆ ಸಹಿ ಹಾಕಲಾಗಿದೆ. ಅಕ್ರಮ ದಲ್ಲಿ ಭಾಗಿಯಾದವರ ವಿರುದ್ಧ 15-20 ದಿನಗಳಲ್ಲೇ ಕಾನೂನು ಕ್ರಮ ಜರುಗಿಸುತ್ತೇನೆ’ ಎಂದು ಹೇಳಿದರು.

ನಕಲಿ ಆಡಿಯೊ: ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅನರ್ಹ ರೊಂದಿಗೆ ಮಾತನಾಡಿದ್ದಾರೆ ಎಂಬ ಆಡಿಯೊವನ್ನು ಕಾಂಗ್ರೆಸ್‌ ಮುಖಂಡರು ತಿರುಚಿದ್ದಾರೆ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)