ಶನಿವಾರ, ಡಿಸೆಂಬರ್ 14, 2019
22 °C
ಸುಮ್ಮನಿರಲು ಬಿಡಿ: ಜಿ.ಟಿ.ದೇವೇಗೌಡ

ಜಿ.ಟಿ.ದೇವೇಗೌಡ ಬೆಂಬಲ ಕೋರಿದ ವಿಶ್ವನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಅವರನ್ನು ಮಂಗಳವಾರ ಭೇಟಿಯಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್‌, ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ಜಿ.ಟಿ.ದೇವೇಗೌಡ, ಸದ್ಯಕ್ಕೆ ತಟಸ್ಥ ನಿಲುವು ತೆಗೆದುಕೊಂಡಿದ್ದು, ಯಾವ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ ಎಂದು ಇತ್ತೀಚೆಗೆ ಹೇಳಿದ್ದರು. ಆದರೆ, ಬಿಜೆಪಿ ಪರ ಮೃದು ಧೋರಣೆ ತಳೆದಿರುವ ಅವರ ಬೆಂಬಲ ಗಿಟ್ಟಿಸಲು ವಿಶ್ವನಾಥ್‌ ಹಾಗೂ ಪಕ್ಷದ ಇತರ ಮುಖಂಡರು ಪ್ರಯತ್ನಿಸಿದ್ದಾರೆ.

‘ಜಿಟಿಡಿ ಹಾಗೂ ಅವರ ಪುತ್ರ ಹರೀಶ್‌ ಗೌಡ ಅವರನ್ನು ಭೇಟಿ ಮಾಡಿ, ಹುಣಸೂರು ಉಪಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದ್ದೇನೆ. ಅವರ ನೆರವು ಸಿಗುವ ವಿಶ್ವಾಸವಿದೆ’ ಎಂದು ಭೇಟಿಯ ಬಳಿಕ ವಿಶ್ವನಾಥ್‌ ಪ್ರತಿಕ್ರಿಯಿಸಿದರು.

ಜಿ.ಟಿ.ದೇವೇಗೌಡ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದು, ‘ನಾನು ಯಾವುದಕ್ಕೂ ಪ್ರತಿಕ್ರಿಯಿಸುವುದಿಲ್ಲ. ನನ್ನಲ್ಲಿ ಏನನ್ನೂ ಕೇಳಬೇಡಿ. ಸುಮ್ಮನೆ ಇರಲು ಬಿಡಿ’ ಎಂದಿದ್ದಾರೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು