ವಿಟ್ಲ: ಪುಣಚ ಚರ್ಚ್‌ ಗ್ರೊಟ್ಟೊಗೆ ಹಾನಿ

ಮಂಗಳವಾರ, ಜೂನ್ 18, 2019
24 °C

ವಿಟ್ಲ: ಪುಣಚ ಚರ್ಚ್‌ ಗ್ರೊಟ್ಟೊಗೆ ಹಾನಿ

Published:
Updated:
Prajavani

ವಿಟ್ಲ: ಪುಣಚ ಗ್ರಾಮದ ಮನೆಲ ಚರ್ಚ್‌ಗೆ ಸೇರಿರುವ ಗ್ರೊಟ್ಟೊಗೆ ಶನಿವಾರ ಬೆಳಿಗ್ಗೆ ಕಿಡಿಗೇಡಿಗಳು ಕಲ್ಲು ಎಸೆದು ಹಾನಿ ಮಾಡಿದ್ದಾರೆ.

ಪುಣಚ - ತೋರಣಕಟ್ಟೆ ರಸ್ತೆಯ ಮನೆಲ ಕ್ರಿಸ್ತರಾಜ ಚರ್ಚ್‌ಗೆ ಸೇರಿದ ಗ್ರೊಟ್ಟೊ ಇದಾಗಿದ್ದು, ಹಾನಿಯಾಗಿರುವುದು ಬೆಳಿಗ್ಗೆ ಗೊತ್ತಾಗಿದೆ. ‘ಕಲ್ಲು ಎಸೆತದಿಂದ ಗ್ರೊಟ್ಟೊದ ಗಾಜು ಪುಡಿಯಾಗಿದ್ದು, ತನಿಖೆ ನಡೆಸಿ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಚರ್ಚ್‌ನ ಧರ್ಮಗುರು ಪ್ರಕಾಶ್ ಡಿಸೋಜ ವಿಟ್ಲ ಠಾಣೆಗೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ವಿಟ್ಲ ಪಿಎಸ್‌ಐ ಯಲ್ಲಪ್ಪ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಂಟ್ವಾಳ ಪೊಲೀಸ್ ಇನ್‌ಸ್ಪೆಕ್ಟರ್ ಶರಣ ಗೌಡ, ವಿಟ್ಲ ಎಸ್‌ಐ ಯಲ್ಲಪ್ಪ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಸ್ಥಳಕ್ಕೆ ಎಸ್‌ಪಿ ಟಿ.ಎಂ. ಲಕ್ಷ್ಮೀ ಪ್ರಸಾದ್ ಭೇಟಿ ನೀಡಿ ಪರಿಶೀಲಿಸಿದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !