ಗುರುವಾರ , ನವೆಂಬರ್ 14, 2019
19 °C

ಬೆಳಗಾವಿ: ಬತ್ತಿದ ಕೊಳವೆ ಬಾವಿಯಲ್ಲಿ ಚಿಮ್ಮಿದ ನೀರು

Published:
Updated:
Prajavani

ರಾಮದುರ್ಗ(ಬೆಳಗಾವಿ): ತಾಲ್ಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ, ಬತ್ತಿ ಹೋಗಿದ್ದ ಕೊಳವೆ ಬಾವಿಯೊಂದ
ರಲ್ಲಿ ನೀರು ಕಾರಂಜಿಯಂತೆ ಆಗಸದೆತ್ತರಕ್ಕೆ ಚಿಮ್ಮುವ ಮೂಲಕ ಸಾರ್ವಜನಿಕರನ್ನು ಆಕರ್ಷಿಸಿತು.

ಎರಡು ವರ್ಷದ ಹಿಂದೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೊಳವೆಬಾವಿ ಕೊರೆಸಲಾಗಿತ್ತು. ಈಚೆಗೆ ನೀರಿಲ್ಲದೇ ಬತ್ತಿ ಹೋಗಿತ್ತು. ಸದ್ಯ ಮಳೆ ಕಡಿಮೆಯಾಗಿದ್ದರಿಂದ, ನೀರು ಚಿಮ್ಮುವುದು ನಿಂತಿದೆ.

ಪ್ರತಿಕ್ರಿಯಿಸಿ (+)