ಬುಧವಾರ, ಮಾರ್ಚ್ 3, 2021
23 °C
ಟ್ರೆಂಡ್‌

ಚಳಿಗಾಲಕ್ಕೆ ಒಗ್ಗುವ ಬ್ಯಾಗ್‌ಗಳಿವು

ಶಶಿಕುಮಾರ್‌ ಸಿ. Updated:

ಅಕ್ಷರ ಗಾತ್ರ : | |

Deccan Herald

ಕಾಲಕ್ಕೆ ತಕ್ಕಂತೆ, ಋತುವಿಗೆ ತಕ್ಕಂತೆ ನಮ್ಮನ್ನು ನಾವು ಚೆನ್ನಾಗಿ ತೋರಿಸಿಕೊಳ್ಳಲು ಹೊಸ ಟ್ರೆಂಡಿಂಗ್‌ನ ಬಟ್ಟೆಗಳನ್ನು ಖರೀದಿಸುತ್ತೇವೆ. ಆದರೆ, ಬ್ಯಾಗ್‌ಗಳ ವಿಷಯಕ್ಕೆ ಬಂದರೆ ಈ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಆಯಾ ಋತುವಿಗೆ ತಕ್ಕಂತೆ ಬ್ಯಾಗ್‌ ಬಳಕೆ ನಮ್ಮನ್ನು ನಾವು ಚೆನ್ನಾಗಿ ತೋರಿಸಿಕೊಳ್ಳಲು ನೆರವಾಗುತ್ತವೆ. ಈಚೆಗೆ ವೂನಿಕ್ ಬ್ರ್ಯಾಂಡ್‌ನ ಬ್ಯಾಗ್‌ಗಳು ಸಹ ಟ್ರೆಂಡಿಂಗ್ ಆಗುತ್ತಿವೆ.

ಚಳಿಗಾಲಕ್ಕೆ ಮಾರುಕಟ್ಟೆಗೆ ವಿಶೇಷವಾದ ಬ್ಯಾಗ್‌ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಮೆಟಾಲಿಕ್ ಬಾಲ್ ಚೈನ್ ಇರುವಂತಹ, ಮಲ್ಟಿ ಲೇಯರ್ಡ್ ಚೈನ್ ಇರುವಂತಹ ಬ್ಯಾಗ್‌ಗಳು ಮಾರುಕಟ್ಟೆಯಲ್ಲಿ ಮಿಂಚುತ್ತಿವೆ. ಕ್ಯಾಮೆಲ್, ಹಂಟರ್ ಗ್ರೀನ್ ಮತ್ತು ಕೊಬಾಲ್ಟ್ ಬ್ಯೂ ಬಣ್ಣದ ಬ್ಯಾಗ್‌ಗಳು ಹೆಚ್ಚು ಆಕರ್ಷಿಸುತ್ತವೆ. ಇನ್‌ಸ್ಟಾಗ್ರಾಂನಲ್ಲಿ ಹಾಗೂ ಮಾರುಕಟ್ಟೆಯಲ್ಲಿ ಹೆಚ್ಚು ಟ್ರೆಂಡಿಂಗ್‌ನಲ್ಲಿರುವ ಕೆಲವು ಬ್ಯಾಗ್‌ಗಳ ಬಗ್ಗೆ ಇಲ್ಲಿ ನೋಡೋಣ.

ಕ್ಲಿಯರ್ ಹ್ಯಾಂಡ್ ಬ್ಯಾಗ್ಸ್: ಹಲವು ವರ್ಷಗಳಿಂದ ಪಿವಿಸಿ ಬ್ಯಾಗ್‌ಗಳನ್ನು ತೋರಿಸಲಾಗುತ್ತಿದೆ. ಈಗ ಅವುಗಳಿಗೆ ಬ್ರ್ಯಾಂಡ್ ಮೌಲ್ಯದ ಸ್ಪರ್ಶ ಸಿಗುತ್ತಿದ್ದು, ಸಾಮಾನ್ಯ ಟ್ರೆಂಡ್ ಆಗಿದ್ದ ಈ ವಿಷಯ ಹಾಗೂ ಫ್ಯಾಷನ್ ಟ್ರೆಂಡ್ ಆಗಿದೆ. ಒಂದೇ ನೋಟಕ್ಕೆ ಈ ಬ್ಯಾಗ್‌ಗಳು ಆಕರ್ಷಿಸುತ್ತವೆ.

ಮೊಕ್ ಕ್ರೊಕ್: ಈ ಮೋಕ್ ಕ್ರೊಕ್ ಬ್ಯಾಗ್ ಈ ಋತುವಿನಲ್ಲಿ ಹೆಚ್ಚು ಗಮನ ಸೆಳೆಯುತ್ತವೆ. ಇದರ ಕಲರ್ ಪ್ಯಾಲೆಟ್‌ಗಳು ನೋಡಲು ಆಕರ್ಷಕ ಮತ್ತು ಮಹಿಳಾ ಸ್ನೇಹಿಯಂತೆ ಕಾಣುವಂತಿದೆ. ವಾರ್ಡ್‌ ರೋಬ್‌ಗಳಲ್ಲಿ ಈ ಬ್ಯಾಗ್‌ಗಳನ್ನು ಅಲಂಕಾರಕ್ಕೆ ಇಡಬಹುದಾಗಿದೆ.

ಎಕ್ಸ್ಎಕ್ಸ್ಎಲ್ ಟೊಟೊಸ್ ಮತ್ತು ಓವರ್ ಸೈಜ್ಡ್ ಹೊಬೊಸ್: ದೊಡ್ಡ ಗಾತ್ರದ ಬ್ಯಾಗ್‌ಗಳು ಮಾರುಕಟ್ಟೆಯಲ್ಲಿ ಟ್ರೆಂಡಿಂಗ್ ಸದ್ದು ಮಾಡುತ್ತಿವೆ. ಈ ಬ್ಯಾಗ್‌ಗಳನ್ನು ವಿವಿಧ ಕೆಲಸಗಳಿಗೆ ಬಳಸಬಹುದಾಗಿದೆ. ಮಹಿಳಾ ಸ್ನೇಹಿಯಾಗಿರುವ ಈ ಬ್ಯಾಗ್‌ಗಳು ಫ್ಯಾಷನ್ ಲೋಕದಲ್ಲಿ ತನ್ನದೇ ಛಾಪು ಮೂಡಿಸುತ್ತಿವೆ. ನಿಮಗಿಷ್ಟವಾಗುವ ಬಣ್ಣದ ಟೊಟೊ ಬ್ಯಾಗ್‌ಗಳನ್ನು ಮತ್ತು ಬೇರೆ ಬೇರೆ ಕೆಲಸ ಕಾರ್ಯಗಳಿಗೆ ನೆರವಾಗಬಲ್ಲ ಹೊಬೊಸ್ ಬ್ಯಾಗ್‌ಗಳನ್ನು ಬಳಸುವುದು ಸೂಕ್ತ.

ಮೈಕ್ರೊ: ಬಹುತೇಕ ಗಣ್ಯರು, ತಾರೆಗಳು ಮೈಕ್ರೊ ಬ್ಯಾಗ್‌ಗಳನ್ನು ಹೆಚ್ಚಿನ ವೇಳೆ ಕೈಯಲ್ಲಿಡಿದಿರುತ್ತಾರೆ. ಇವು ಸಹ ಫ್ಯಾಷನ್ ಲೋಕದಲ್ಲಿ ಟ್ರೆಂಡ್ ಆಗಿವೆ. ಧರಿಸುವ ಬಟ್ಟೆಗಳಿಗೆ ಹೊಸ ಮೆರಗು ಇವು ತಂದು ಕೊಡುತ್ತವೆ.

ಬೀಡೆಡ್: ಬೀಡೆಡ್ ಬ್ಯಾಗ್‌ಗಳು ಆಭರಣಗಳನ್ನು ಧರಿಸಿದಂತಹ ನೋಟವನ್ನು ಕಟ್ಟಿಕೊಡುತ್ತವೆ. ಹತ್ತಾರು ಮಂದಿಯ ನಮ್ಮನ್ನು ಈ ಬ್ಯಾಗ್‌ಗಳು ವಿಶೇಷವಾಗಿ ಕಾಣಿಸುವಂತೆ ಮಾಡುತ್ತವೆ.

ಬಕೆಟ್: ಈ ಬಕೆಟ್‌ ಬ್ಯಾಗ್‌ಗಳು ವಸಂತ ಋತುವಿಗೆ ತಕ್ಕಂತೆ ಆರಂಭವಾದರೂ ಚಳಿಗಾಲದ ಋತುವಿಗೂ ತಕ್ಕಂತೆ ಗಮನ ಸೆಳೆಯುತ್ತವೆ. ಇವುಗಳನ್ನು ಊಟಕ್ಕೆ ಹೊರಗಡೆ ಹೋದಾಗ, ಕೆಲಸದ ವೇಳೆ ಹಾಗೂ ವಾರಂತ್ಯ ವ್ಯವಹಾರಗಳಿಗೆ ಹೋಗುವಾಗ ಬಳಸಲು ಅನುಕೂಲವಾಗುತ್ತವೆ.

ಟಾಸೆಲ್/ ಫ್ರಿಂಗ್ಸ್: ಚಳಿಗಾಲದಲ್ಲಿ ಅತಿ ಹೆಚ್ಚು ಬೇಡಿಕೆಯುಳ್ಳ ಬ್ಯಾಗ್‌ಗಳೆಂದರೆ ಟಾಸೆಲ್/ ಫ್ರಿಂಗ್ಸ್ ಬ್ಯಾಗ್‌ಗಳು. ಮಾರುಕಟ್ಟೆಯಲ್ಲಿ ನಾನಾ ಬಗೆಯ ಬ್ಯಾಗ್‌ಗಳು ಲಭ್ಯವಿವೆ. ಇವುಗಳಲ್ಲಿ ಹ್ಯಾಂಡಲ್‌ ಬ್ಯಾಗ್‌ಗಳು, ಕ್ರಾಸ್ ಬಾಡಿ ಬ್ಯಾಗ್‌ಗಳು ಹಾಗೂ ಬಕೆಟ್ ಬ್ಯಾಗ್‌ಗಳು ಹೆಚ್ಚು ಆಕರ್ಷಕ.

ಇವು ವೂನಿಕ್ ಮಳಿಗೆಗಳಲ್ಲಿ ಹಾಗೂ ಅಮೆಜಾನ್.ಇಂಡಿಯಾ, ಫ್ಲಿಪ್‌ಕಾರ್ಟ್.ಕಾಮ್, ಮೈಂತ್ರಾ.ಕಾಮ್‌ ಆನ್‌ಲೈನ್ ಮಾರುಕಟ್ಟೆಗಳಲ್ಲಿ ಲಭ್ಯ.


ಬಕೆಟ್‌ ಬ್ಯಾಗ್‌ 

(ಮಾಹಿತಿ– ಭವ್ಯಾ ಚಾವ್ಲಾ ವೂನಿಕ್ ಪ್ರಧಾನ ಸ್ಟೈಲಿಷ್)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.