ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗೆ ಶೇ. 33% ರಷ್ಟು ಮೀಸಲಾತಿ ನೀಡಬೇಕು: ಪುಷ್ಪ ಅಮರನಾಥ್‌

Last Updated 24 ಫೆಬ್ರುವರಿ 2019, 10:33 IST
ಅಕ್ಷರ ಗಾತ್ರ

ಬೆಂಗಳೂರು:ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲುಮಹಿಳಾ ಅಭ್ಯರ್ಥಿಗಳಿಂದ ಈಗಾಗಲೇ ಅರ್ಜಿಗಳನ್ನು ಕರೆದಿದ್ದು, ಯಾರಿಗೆ ಆಸಕ್ತಿ ಇದೆಯೋ ಅವರು ಸೋಮವಾರದವರೆಗೂ ಅರ್ಜಿ ಹಾಕಲು ಅವಕಾಶ ಇದೆ ಎಂದುಕೆಪಿಸಿಸಿ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಹೇಳಿದರು.

ಮಂಗಳೂರಿನಿಂದ ಮಮತಾ ಗಟ್ಟಿ, ವಿಜಯಪುರದಿಂದ ಕಾಂತಾ ನಾಯ್ಕ್, ವೀಣಾ ಕಾಶಪ್ಪನವರ್‌, ಎಚ್. ವೈ ಮೇಟಿ ಅವರ ಮಗಳು, ರೂಪ ಶಶಿಧರ್, ವಸಂತ ಕವಿತಾ, ಈಶ್ವರ್ ಖಂಡ್ರೆ ಅವರ ಪತ್ನಿ ಗೀತಾ ಖಂಡ್ರೆ ಅವರುಟಿಕೆಟ್‌ ಕೇಳುತ್ತಿದ್ದಾರೆ.ಶೇ 33% ರಷ್ಟು ಮೀಸಲಾತಿ ನೀಡಬೇಕು ಎಂದು ಪಕ್ಷವನ್ನು ಕೇಳಿದ್ದೇನೆ ಎಂದು ಅವರು ಹೇಳಿದರು.

ಬಿಜೆಪಿ ಸರ್ಕಾರ ಕೂಡ ಈ ಬಗ್ಗೆ ಗಮನ‌ ಹರಿಸಿ ಮೀಸಲಾತಿ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದರು.

ದಿನೇಶ್ ಗುಂಡೂರಾವ್ ಅವರ ಪತ್ನಿ ಸ್ಪರ್ಧೆ ಮಾಡುವುದು ಸುಳ್ಳು. ಅವರು ಸ್ಪರ್ಧೆ ಮಾಡುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿಗೆ ಆಗ್ರಹಿಸಿಕೆಪಿಸಿಸಿ ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ಫೆಬ್ರವರಿ 26 ರಂದು ಚಲೋ ಮಂಗಳೂರು ಮಹಿಳಾಯಾತ್ರೆ ನಡೆಯಲಿದೆ ಎಂದರು.

ಅಪ್ಸರಾ ರೆಡ್ಡಿ ಹೇಳಿಕೆ...

ಬೇಟಿ ಪಡಾವೋ ಬೇಟಿ ಬಚಾವೋ ಯೋಜನೆ ಒಂದು ವಿಫಲ ಯೋಜನೆ. ಮಹಿಳೆಯರ ಸಬಲೀಕರಣ ಕಾಂಗ್ರೆಸ್ ನಲ್ಲಿ ಮಾತ್ರ ಸಾಧ್ಯ ಎಂದು ಎಐಸಿಸಿ ಮಹಿಳಾ ಕಾರ್ಯದರ್ಶಿ ಅಪ್ಸರಾ ರೆಡ್ಡಿ ಹೇಳಿದರು.

ಮಹಿಳೆಯರಿಗೆ ಶೇ.33 ರ ಬದಲಾಗಿ ಶೇ. 50 ರಷ್ಟು ಪ್ರಾತಿನಿಧ್ಯತೆ ದೊರೆಯುವಂತಾಗಬೇಕು. ರಾಜ್ಯದಲ್ಲಿ ಮಹಿಳೆಯರಿಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ನೀಡುತ್ತಿರುವುದು ಸ್ವಾಗತಾರ್ಹ, ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚು ಹೆಚ್ಚು ಟಿಕೆಟ್‌ಗಳನ್ನು ಕೊಡುವಂತಾಗಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT