ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ದಿನ: ರಂಗೋಲಿ ಸ್ಪರ್ಧೆ, ಯೋಜನಾ ಪ್ರದರ್ಶನ

Last Updated 7 ಮಾರ್ಚ್ 2020, 15:13 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದ ಶರಣಬಸವ ವಿಶ್ವವಿದ್ಯಾಲಯದ ಆವರಣದಲ್ಲಿ ವಿಶ್ವ ಮಹಿಳಾ ದಿನದ ಅಂಗವಾಗಿ ಎಲೆಕ್ಟ್ರಾನಿಕ್ ವಿಭಾಗದಿಂದ ಆಯೋಜಿಸಿದ್ದ ‘ಯೋಜನೆಗಳ ಪ್ರದರ್ಶನ’ ಗಮನ ಸೆಳೆಯಿತು.

ಶರಣಬಸವ ವಿಶ್ವವಿದ್ಯಾಲಯದ ಎಂಎಸ್‌ಸಿ, ಎಂಜಿನಿಯರಿಂಗ್, ಆರ್ಕಿಟೆಕ್ಚರ್ ಮತ್ತು ಕಲಾ ವಿಭಾಗ ಸೇರಿದಂತೆ ವಿವಿಧ ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದ ವಿಜ್ಞಾನ, ತಂತ್ರಜ್ಞಾನ, ಗಣಿತ, ಕಲೆ, ಶಿಲ್ಪಕಲೆ ಮತ್ತು ಇನ್ನಿತರ ಯೋಜನೆಗಳನ್ನು ವಿದ್ಯಾರ್ಥಿಗಳು ಹಾಗೂ ಮಾರ್ಗದರ್ಶಕರು ವೀಕ್ಷಿಸಿ, ಮಾಹಿತಿ ಪ‍ಡೆದರು.

ಒಟ್ಟು 26 ತಂಡಗಳು ಪ್ರದರ್ಶನದಲ್ಲಿ ಭಾಗವಹಿಸಿ ನೋಡುಗರ ಗಮನ ಸೆಳೆದವು. ಈ ಸಂಧರ್ಬದಲ್ಲಿ ಎಮ.ಸಿ.ಎ ವಿಭಾಗದ ಡೀನ ಕಿರಣ ಮಾಕಾ , ಪ್ರೊ. ಶಿವಗಂಗಾ ಪಾಟೀಲ ಸೇರಿದಂತೆ ವಿವಿಧ ವಿಭಾಗದ ಮುಖ್ಯಸ್ಥರು ಹಾಜರಿದ್ದರು.ಇದಕ್ಕೂ ಮುನ್ನಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ರಿಬ್ಬನ್ ಕತ್ತರಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಇನ್ನೊಂದೆಡೆ, ವಿಶ್ವವಿದ್ಯಾಲಯದ ಮುಖ್ಯ ಕಟ್ಟಡದಲ್ಲಿ ಏರ್ಪಡಿಸಿದ ರಂಗೋಲಿ ಸ್ಫರ್ಧೆಯಲ್ಲಿ 64 ವಿದ್ಯಾರ್ಥಿನಿಯರು ಪಾಲ್ಗೊಂಡರು. ‘ಸೇವ್ ದಿ ಗರ್ಲ್’, ‘ವುಮೇನ್ ರೈಟ್ಸ್ ಆರ್‌ ಹ್ಯೂಮನ್ ರೈಟ್ಸ್‌’, ‘ಭೇಟಿ ಬಚಾವೋ ಭೇಟಿ ಪಡಾವೋ’ ಮುಂತಾದ ಅಡಿಬರಹಗಳ ಮೂಲಕ ರಂಗೋಲಿಯಲ್ಲೇ ಸಾಮಾಜಿಕ ಸಮಸ್ಯೆಗಳಿಗೆ ಕನ್ನಡಿ ಹಿಡಿದರು.

ಎಂಎಸ್‌ಸಿ ವಿಭಾಗದ ವಿದ್ಯಾರ್ಥಿನಿ ಪ್ರೀತಿ ಪ್ರಥಮ ಸ್ಥಾನ ಪಡೆದರೆ ಇನ್ನುಳಿದ ಸ್ಥಾನಗಳನ್ನು ಎಂ.ಕಾಂ.ನ ರಾಗಿಣಿ ಹಾಗೂ ಗಣಿತ ಸಂಶೋಧನಾ ವಿದ್ಯಾರ್ಥಿನಿ ಅಶ್ವಿನಿ ಪಡೆದರು.‌

ವಿವಿಧ ವಿಭಾಗದಲ್ಲಿ ಪೇಪರ್ ಪ್ರಸಂಟೇಷನ್, ಚರ್ಚಾ ಸ್ಪರ್ಧೆ, ಕ್ವಿಜ್, ಪೇಂಟಿಂಗ್‌ ಮತ್ತು ಛಾಯಾಚಿತ್ರ ಸೇರಿ ಅನೇಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT