'ಮುಸ್ಲಿಮರಿಗೆ ಟಿಕೆಟ್ ಕೊಡಲ್ಲ, ಯಾಕೆಂದರೆ ಅವರಿಗೆ ನಮ್ಮ ಮೇಲೆ ನಂಬಿಕೆ ಇಲ್ಲ'

ಶುಕ್ರವಾರ, ಏಪ್ರಿಲ್ 26, 2019
36 °C

'ಮುಸ್ಲಿಮರಿಗೆ ಟಿಕೆಟ್ ಕೊಡಲ್ಲ, ಯಾಕೆಂದರೆ ಅವರಿಗೆ ನಮ್ಮ ಮೇಲೆ ನಂಬಿಕೆ ಇಲ್ಲ'

Published:
Updated:

ಬೆಂಗಳೂರು: ಸೋಮವಾರ ಕೊಪ್ಪಳದಲ್ಲಿ ಕುರುಬ ಮತ್ತು ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನುದ್ದೇಶಿಸಿ ಮಾತನಾಡಿದ  ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ, ಕಾಂಗ್ರೆಸ್ ನಿಮ್ಮನ್ನು ಮತ ಬ್ಯಾಂಕ್ ಆಗಿ ಬಳಸುತ್ತದೆ. ಕರ್ನಾಟಕದಲ್ಲಿ ನಾವು ಮಸ್ಲಿಮರಿಗೆ ಟಿಕೆಟ್ ಕೊಡಲ್ಲ, ಯಾಕೆಂದರೆ ನಿಮಗೆ ನಮ್ಮ ಮೇಲೆ ನಂಬಿಕೆ ಇಲ್ಲ. ನೀವು ನಮ್ಮನ್ನು ನಂಬಿ, ನಾವು ಟಿಕೆಟ್ ನೀಡುತ್ತೇವೆ. ಇನ್ನಿತರ ಕಾರ್ಯಗಳನ್ನೂ ಮಾಡಿಕೊಡುತ್ತೇವೆ ಎಂದಿದ್ದಾರೆ.

ಅಂದಹಾಗೆ ಈಶ್ವರಪ್ಪ ಈ ರೀತಿ ಹೇಳಿಕೆ ನೀಡಿರುವುದು ಮೊದಲೇನೂ ಅಲ್ಲ. ಕಳೆದ ವರ್ಷ ಜನವರಿಯಲ್ಲಿ ಇದೇ ರೀತಿಯ ಹೇಳಿಕೆ ನೀಡಿ ಈಶ್ವರಪ್ಪ ವಿವಾದ ಸೃಷ್ಟಿಸಿದ್ದರು.

ಕಾಂಗ್ರೆಸ್ ಜತೆಗಿರುವ ಮುಸ್ಲಿಮರೆಲ್ಲರೂ ಕೊಲೆಗಾರರು, ಬಿಜೆಪಿ ಜತೆ ಇರುವವರೆಲ್ಲರೂ ಒಳ್ಳೆಯ ಮುಸ್ಲಿಮರು. ಆರ್‌ಎಸ್‍ಎಸ್‌ ಮತ್ತು ಬಿಜೆಪಿಯ 22 ಕಾರ್ಯಕರ್ತರನ್ನು ಕೊಲೆಮಾಡಿದವರು ಕಾಂಗ್ರೆಸ್‍ನಲ್ಲಿದ್ದಾರೆ. ಒಳ್ಳೆ ಮುಸ್ಲಿಮರು ಮಾತ್ರ ಬಿಜೆಪಿ ಜತೆ ಇದ್ದಾರೆ. ಕೊಲೆ ಮಾಡುವ ಮುಸ್ಲಿಮರು ಕಾಂಗ್ರೆಸ್ ಜತೆಗೆ ಇದ್ದಾರೆ ಎಂದು ಹೇಳಿದ್ದರು,

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.
 

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 1

  Sad
 • 1

  Frustrated
 • 22

  Angry

Comments:

0 comments

Write the first review for this !