ಬುಧವಾರ, ಜನವರಿ 29, 2020
30 °C

ಯಡಿಯೂರಪ್ಪರನ್ನು ಪದಚ್ಯುತಿಗೊಳಿಸುವ ಹುಚ್ಚು ಸಾಹಸ ಮಾಡಲಾರರು: ಯತ್ನಾಳ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ‘ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನನಾಯಕ ಎನ್ನುವುದು ವರಿಷ್ಠರಿಗೆಗೊತ್ತಾಗಿದೆ. ಸ್ಥಳೀಯ ನಾಯಕತ್ವಕ್ಕೆ ಗೌರವ ಕೊಡ ಬೇಕೆನ್ನುವ ಸಂಗತಿಯು ಮಹಾರಾಷ್ಟ್ರ, ಹರಿಯಾಣ ಚುನಾವಣೆಯ ನಂತರದ ಅನುಭವ ಮೇಲೆ ಕುಳಿತವರಲ್ಲಿ ಅರಿವು ಮೂಡಿಸಿದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.

ಕೇಂದ್ರದ ಪ್ರಮುಖರ ಹೆಸರು ಉಲ್ಲೇಖಿಸದೇ ಮಾತನಾಡಿದ ಅವರು, ‘ಉಪ ಚುನಾವಣೆ ಫಲಿತಾಂಶ ನೋಡಿದ ಮೇಲೆ ಇನ್ನು ದಿಢೀರ್ ಆಗಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸುವ, ಅವರ ಬೆಂಬಲಿಗರನ್ನು ಕಡೆಗಣಿಸುವ ಹುಚ್ಚು ಸಾಹಸ ಮಾಡಲಾರರು’ ಎಂದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು