ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಬಲ್ಡನ್‌ ಶ್ರೇಯಾಂಕ: ನಡಾಲ್‌ ಅಸಮಾಧಾನ

Last Updated 25 ಜೂನ್ 2019, 20:15 IST
ಅಕ್ಷರ ಗಾತ್ರ

ಲಂಡನ್‌ (ರಾಯಿಟರ್ಸ್):ಸ್ಪೇನ್‌ ಆಟಗಾರ ರಫೆಲ್‌ ನಡಾಲ್‌ವಿಂಬಲ್ಡನ್‌ ಟೂರ್ನಿಯ ಶ್ರೇಯಾಂಕ ಪದ್ಧತಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರಿಗೆ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ಅವಕಾಶಕ್ಕೆ ಈ ಪದ್ಧತಿ ತೊಡಕಾಗುವ ಸಾಧ್ಯತೆಯಿದೆ. ಸೋಮವಾರ ಈ ಟೂರ್ನಿಯು ಆರಂಭವಾಗಲಿದೆ.

ಇತರ ಮೂರು ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳ ಹಾಗೆ ವಿಂಬಲ್ಡನ್‌ನಲ್ಲಿ ಎಟಿಪಿ ಹಾಗೂ ಡಬ್ಲ್ಯುಟಿಎ ಕ್ರಮಾಂಕಗಳಿಗೆ ಅಂಟಿಕೊಂಡು ಶ್ರೇಯಾಂಕ ನೀಡಲಾಗುವುದಿಲ್ಲ. ಅಂದರೆ ಗ್ರಾಸ್‌ಕೋರ್ಟ್‌ನಲ್ಲಿ ಆಟಗಾರರ ಈ ಹಿಂದೆ ತೋರಿದ ಪ್ರದರ್ಶನದ ಮೇಲೆ ಶ್ರೇಯಾಂಕಗಳಲ್ಲಿ ಬದಲಾವಣೆ ಮಾಡಬಹುದಾಗಿದೆ.

ಬುಧವಾರ ವಿಂಬಲ್ಡನ್‌ ಟೂರ್ನಿಯ ಶ್ರೇಯಾಂಕಗಳು ಪ್ರಕಟವಾಗಲಿದ್ದು, ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ನಡಾಲ್‌ ಅವರಿಗೆ ಮೂರನೇ ಸ್ಥಾನ ಸಿಗುವ ಸಾಧ್ಯತೆಯಿದೆ. ಹಾಲಿ ಚಾಂಪಿಯನ್‌ ನೊವಾಕ್‌ ಜೊಕೊವಿಚ್‌ಗೆ ಮೊದಲ ಹಾಗೂ ವಿಂಬ ಲ್ಡನ್‌ನಲ್ಲಿ ಎಂಟು ಬಾರಿ ಚಾಂಪಿಯನ್‌ ಆಗಿರುವ ಫೆಡರರ್‌ ಅವರಿಗೆ ಎರಡನೇ ಶ್ರೇಯಾಂಕ ದೊರೆಯುವ ಸಂಭವವಿದೆ. ವಿಶ್ವ ಕ್ರಮಾಂಕದಲ್ಲಿ ಫೆಡರರ್‌ ಸದ್ಯ ಮೂರನೇ ಸ್ಥಾನದಲ್ಲಿರುವರು.

‘ವಿಶ್ವ ಕ್ರಮಾಂಕವನ್ನು ಅನುಸರಿಸದ ಏಕೈಕ ಟೂರ್ನಿ ವಿಂಬಲ್ಡನ್‌ ಆಗಿದೆ. ಇದು ಅವರ ಆಯ್ಕೆ. ಎರಡನೇ ಅಥವಾ ಮೂರನೇ ಶ್ರೇಯಾಂಕವಾಗಿರಲಿ, ನಾನು ಬಯಸಿದ ಮಟ್ಟದಲ್ಲೇ ಆಡುತ್ತೇನೆ. ಮೂರಕ್ಕಿಂತ ಎರಡನೇ ಶ್ರೇಯಾಂಕ ನೀಡಿದರೆ ಉತ್ತಮ. ನನ್ನನ್ನು ಮೂರನೇ ಶ್ರೇಯಾಂಕಕ್ಕೆ ಪರಿಗಣಿಸಿದರೆ ಅದನ್ನು ಸ್ವೀಕರಿಸುತ್ತೇನೆ’ ಎಂದು ಸ್ಪ್ಯಾನಿಶ್‌ ಟಿವಿ ಸ್ಟೇಷನ್‌ನೊಂದಿಗೆ ಮಂಗಳವಾರ ಮಾತನಾಡಿದ ನಡಾಲ್‌ ಹೇಳಿದರು.

‘ವಿಂಬಲ್ಡನ್‌ ತನ್ನದೇ ವಿಶಿಷ್ಟ ಶ್ರೇಯಾಂಕ ಪದ್ಧತಿ ಹೊಂದಿರುವ ಏಕೈಕ ಟೂರ್ನಿಯಾಗಿದ್ದು ಇದು ನನಗೆ ಸರಿ ಕಾಣುತ್ತಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ವಿಂಬಲ್ಡನ್‌ ಟೂರ್ನಿಯಲ್ಲಿ ಆಡಬಯಸುವ ಎಟಿಪಿ ಕ್ರಮಾಂಕ ಪಟ್ಟಿಯಲ್ಲಿರುವ ಮೊದಲ 32 ಆಟಗಾರರಿಗೆ ಶ್ರೇಯಾಂಕ ನೀಡಲಾಗುತ್ತದೆ. ಆದರೆ ಹೋದ 24 ತಿಂಗಳಲ್ಲಿ ಗ್ರಾಸ್‌ಕೋರ್ಟ್‌ನಲ್ಲಿ ಅವರ ಫಲಿತಾಂಶವನ್ನು ಗಮನಿಸಿ ಶ್ರೇಯಾಂಕ ಶ್ರೇಣಿಯಲ್ಲಿ ಬದಲಾವಣೆಯಾಗಬಹುದು. ಶ್ರೇಯಾಂಕ ಲೆಕ್ಕಾಚಾರ ಅದೇ ರೀತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT