ಗುರುವಾರ , ಆಗಸ್ಟ್ 13, 2020
29 °C

ಅಟ್ಲಾಂಟಾ ಪ್ರತಿಭಟನೆ: 8 ವರ್ಷದ ಬಾಲಕಿ ಗುಂಡಿಗೆ ಬಲಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಅಟ್ಲಾಂಟಾ (ಅಮೆರಿಕ): ಇಲ್ಲಿ ರೇಶರ್ಡ್‌ ಬ್ರೂಕ್ಸ್‌ ಸಾವು ಖಂಡಿಸಿ ನಡೆದ ಪ್ರತಿಭಟನೆ ವೇಳೆ ಹತ್ತಿರದಲ್ಲಿ ಸಾಗುತ್ತಿದ್ದ ಕಾರಿಗೆ ಪ್ರತಿಭಟನಕಾರರಿಬ್ಬರು ಗುಂಡು ಹಾರಿಸಿದ ಪರಿಣಾಮ 8 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.

ಬಾಲಕಿಯನ್ನು ಸೆಕೋರಿಯಾ ಟರ್ನರ್ ಎಂದು ಗುರುತಿಸಲಾಗಿದೆ. ಸುದ್ದಿ ವಾಹಿನಿಯೊಂದರಲ್ಲಿ ಬಾಲಕಿಯ ತಾಯಿಯ ಜೊತೆಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅಟ್ಲಾಂಟಾ ಮೇಯರ್‌ ಕಿಶಾ ಲ್ಯಾನ್ಸ್‌ ಬಾಟಮ್ಸ್‌, ಸೆಕೋರಿಯಾಗೆ ನ್ಯಾಯ ಸಿಗಬೇಕು ಎಂದು ಹೇಳಿದರು.

ಪ್ರತಿಭಟನಾ ಸ್ಥಳದಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ದಾಟಿ  ಕಾರನ್ನು ಓಡಿಸಲು ಸೆಕೋರಿಯಾ ತಾಯಿ ಪ್ರಯತ್ನಿಸಿದ್ದಾರೆ. ಈ ವೇಳೆ ಪ್ರತಿಭಟನಕಾರರಲ್ಲಿ ಇಬ್ಬರು ಕಾರಿನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಜೂ.12 ರಂದು ವೆಂಡೀಸ್‌ ರೆಸ್ಟೋರೆಂಟ್‌ ಬಳಿ ಆಫ್ರಿಕನ್‌ ಅಮೆರಿಕನ್‌ ಪ್ರಜೆ ರೇಶರ್ಡ್‌ ಬ್ರೂಕ್ಸ್ , ಪೊಲೀಸರ ದೌರ್ಜನ್ಯಕ್ಕೆ  ಬಲಿಯಾಗಿದ್ದರು. ಈ ಬಳಿಕ ರೇಶರ್ಡ್‌ ಬ್ರೂಕ್ಸ್ ಹತ್ಯೆ ಖಂಡಿಸಿ ವೆಂಡೀಸ್‌ ರೆಸ್ಟೋರೆಂಟ್‌ ಬಳಿ ಸತತ ಪ್ರತಿಭಟನೆಗಳು ನಡೆಯುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು