ಶುಕ್ರವಾರ, ಆಗಸ್ಟ್ 7, 2020
28 °C

ರಾಷ್ಟ್ರದ ಹೀರೋಗಳಿಗೆ ಉದ್ಯಾನ: ಟ್ರಂಪ್‌ ಯೋಜನೆ

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌ : ಡೊನಾಲ್ಡ್‌ ಟ್ರಂಪ್‌ ಅವರು ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದರೆ, ಅಮೆರಿಕದ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿರುವ ‘ರಾಷ್ಟ್ರದ ಹೀರೊಗಳ ಉದ್ಯಾನ’ವನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಉದ್ದೇಶವನ್ನು ಹೊಂದಿದ್ದಾರೆ.

ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶ್ವೇತಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಸೆಲ್ಯುಟ್‌ ಟು ಅಮೆರಿಕ’ ಕಾರ್ಯಕ್ರಮನದಲ್ಲಿ ಈ ವಿಷಯವನ್ನು ಅವರು ಜನರ ಮುಂದಿಟ್ಟಿದ್ದಾರೆ. ಜತೆಗೆ ಈ ಕುರಿತ ಕಾರ್ಯಕಾರಿ ಆದೇಶವೊಂದನ್ನೂ ಹೊರಡಿಸಿದ್ದು, ‘ಹಿಂದಿನ ಕೆಲವು ಅಧ್ಯಕ್ಷರೂ ಸೇರಿದಂತೆ ಗುಲಾಮಗಿರಿ ಹಾಗೂ ವರ್ಣಭೇದ ನೀತಿಗಳಿಂದ ಲಾಭ ಪಡೆದವರನ್ನು ಗೌರವಿಸುವುದು, ಅವರ ಹೆಸರಿನ ಸ್ಮಾರಕಗಳನ್ನು ನಿರ್ಮಿಸುವುದು ಅಥವಾ ಅಂಥವರ ಹೆಸರುಗಳನ್ನು ರಸ್ತೆ, ಕಟ್ಟಡಗಳಿಗೆ ಇಡುವುದನ್ನು ಮುಂದುವರಿಸಬೇಕೇ’ ಎಂದು ಪ್ರಶ್ನಿಸಿದ್ದಾರೆ.

ಟ್ರಂಪ್‌ ಅವರು ತಯಾರಿಸಿರುವ 30ಕ್ಕೂ ಹೆಚ್ಚು ಮಂದಿ ಹೀರೊಗಳ ಪಟ್ಟಿಯಲ್ಲಿ ಕೆಲವರ ಹೆಸರುಗಳು ಕಾಣೆಯಾಗಿದ್ದು, ಪಟ್ಟಿ ತಯಾರಿಕಾ ಪ್ರಕ್ರಿಯೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಶ್ವೇತಭವನದ ಅಧಿಕಾರಿಗಳು ನಿರಾಕರಿಸಿದ್ದಾರೆ.

‘ತಾವು ತಯಾರಿಸಿರುವ ಪಟ್ಟಿಯನ್ನು ‘ಅತುಲ್ಯ ಗುಂಪು’ ಎಂದಿರುವ ಟ್ರಂಪ್‌, ಇದರಲ್ಲಿ ಕೆಲವು ಬದಲವಾಣೆ ಮಾಡಲು ಸಿದ್ಧ. ಆದರೆ ಪಟ್ಟಿ ಅಂತಿಮಗೊಂಡರೆ ಈ ಶ್ರೇಷ್ಠರ ಹೆಸರುಗಳು ಉನ್ನತ ಸ್ಥಾನದಲ್ಲಿ ಇರುತ್ತವೆ ಮತ್ತು ಎಂದೆಂದಿಗೂ ಕೆಳಗೆ ಬರಲಾರವು’ ಎಂದು ಟ್ರಂಪ್‌ ಹೇಳಿದರು. ಆದರೆ ನವೆಂಬರ್‌ ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಟ್ರಂಪ್‌ಗೆ ಗೆಲುವು ಸಿಗದಿದ್ದರೆ, ಈ ಯೋಜನೆ ಕಾರ್ಯಗತವಾಗಲಾರದು ಎಂದು ಹೇಳಲಾಗಿದೆ.

ವರ್ಣಭೇದ ನೀತಿಯನ್ನು ವಿರೋಧಿಸಿ ಅಮೆರಿಕದಲ್ಲಿ ಹಲವು ದಿನಗಳಿಂದ ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿರುವವರು, ಕೆಲವು ಪ್ರತಿಮೆಗಳನ್ನು ಹಾನಿ ಮಾಡಿರುವುದಕ್ಕೆ ಟ್ರಂಪ್‌ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.

‘ನಾವು ಅಮೆರಿಕದ ಮುಂದಿನ ದೇಶಭಕ್ತ ತಲೆಮಾರನ್ನು ಸೃಷ್ಟಿಸುತ್ತೇವೆ. ಅಮೆರಿಕದ ಇತಿಹಾಸದ ಮುಂದಿನ ರೋಮಾಂಚಕ ಅಧ್ಯಾಯವನ್ನು ನಾವು ಬರೆಯುತ್ತೇವೆ. ಶ್ರೇಷ್ಠ ವ್ಯಕ್ತಿಗಳು ಆಗಿಹೋದ ನಾಡಿನಲ್ಲಿ ನೀವು  ವಾಸಿಸುತ್ತಿರುವಿರಿ ಎಂದು ನಾವು ಮಕ್ಕಳಿಗೆ ತಿಳಿಹೇಳುತ್ತೇವೆ’ ಎಂದು ಟ್ರಂಪ್‌ ಅವರು ಭಾಷಣದಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು