ಭಾನುವಾರ, ಜೂಲೈ 5, 2020
22 °C

ಮಾವು ಖರೀದಿಸಿ, ಲ್ಯಾಂಬೋರ್ಗಿನಿ ಕಾರಲ್ಲಿ ಸುತ್ತಾಡಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಹಿ, ಸಿಹಿಯಾದ ಮಾವಿನ ಹಣ್ಣುಗಳನ್ನು ಖರೀದಿಸಿ, ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನಲ್ಲಿ ದುಬೈ ಸಿಟಿ ಸುತ್ತಾಡಿ!!!

– ಇದು ದುಬೈನಲ್ಲಿರುವ ಪಾಕಿಸ್ತಾನದ ಸೂಪರ್‌ ಮಾರ್ಕೆಟ್‌ವೊಂದು ಮಾವು ಮಾರಾಟಕ್ಕಾಗಿ ಕಂಡುಕೊಂಡ ಹೊಸ ಮಾರುಕಟ್ಟೆ ತಂತ್ರ. ಈ ಹೊಸ ಮಾರುಕಟ್ಟೆ ತಂತ್ರ ನಿರೀಕ್ಷೆ ಮೀರಿ ಫಲ ನೀಡಿದೆ. ಲ್ಯಾಂಬೋರ್ಗಿನಿಯಲ್ಲಿ ಗತ್ತನಿಂದ ಸುತ್ತಾಡುವ ಆಸೆಗಾದರೂ ಗ್ರಾಹಕರು ಮುಗಿಬಿದ್ದು ಮಾವು ಖರೀದಿಸುತ್ತಿದ್ದಾರೆ. ಇಲ್ಲಿ ಮಾವು ಸವಿಯುವುದಕ್ಕಿಂತ ಐಷಾರಾಮಿ ಕಾರಲ್ಲಿ ಕೂತು ಸಿಟಿ ರೌಂಡ್‌ ಹೊಡೆಯುವುದು ಅವರಿಗೆ ಥ್ರಿಲ್‌ ನೀಡುತ್ತಿದೆ.   

ಪಾಕಿಸ್ತಾನ ಸೂಪರ್‌ ಮಾರ್ಕೆಟ್‌ನಲ್ಲಿ ನೀವು ಮಾವು ಖರೀದಿಸಿದರೆ ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಕಾರಲ್ಲಿ ಮಾವಿನ ಹಣ್ಣುಗಳ ಜತೆ ನಿಮ್ಮನ್ನೂ ಮನೆಗೆ ಡ್ರಾಪ್‌ ಮಾಡಲಾಗುತ್ತದೆ. ಒಂದು ವೇಳೆ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದರೆ,  ಸ್ವತಃ ಸೂಪರ್‌ ಮಾರ್ಕೆಟ್‌ ನಿರ್ದೇಶಕ ಮೊಹಮ್ಮದ್‌ ಜನಾಬ್ ತಮ್ಮ ಹಸಿರು ಬಣ್ಣದ ಲ್ಯಾಂಬೊರ್ಗಿನಿಯಲ್ಲಿ ಮನೆ ಬಾಗಿಲಿಗೆ ಮಾವಿನ ಹಣ್ಣು ತಲುಪಿಸುತ್ತಾರೆ. ನಂತರ ಗ್ರಾಹಕರನ್ನು ಕಾರಿನಲ್ಲಿ ಕೂರಿಸಿಕೊಂಡು ಸಣ್ಣದೊಂದು ಜಾಲಿರೈಡ್‌‌ ಹೊಡೆದು ಮನೆಗೆ ವಾಪಸ್‌ ಬಿಡುತ್ತಾರೆ.  

ಸೂಪರ್‌ ಮಾರ್ಕೆಟ್‌ ತನ್ನ ಫೇಸ್‌ಬುಕ್‌ ಪುಟದಲ್ಲಿ ಮಾವಿನ ಬಾಕ್ಸ್‌ಗಳನ್ನು ಮನೆಗೆ ತಲುಪಿಸುವ ಹಾಗೂ ಕಾರಿನಲ್ಲಿ ಗ್ರಾಹಕರ ಸುತ್ತಾಟದ ಫೋಟೊಗಳನ್ನು ಹಂಚಿಕೊಂಡಿದೆ. ‌ಗ್ರಾಹಕರು ಜಾಲಿರೈಡ್‌ ಅನುಭವ, ಸುತ್ತಾಟದ ವಿಡಿಯೊ, ಫೋಟೊಗಳನ್ನು ಹಂಚಿಕೊಂಡಿದ್ದಾರೆ.  

‘ಹೊಸ ಡೆಲಿವೆರಿ ವೆಹಿಕಲ್‌’ ಎಂದು ಅಂಗಡಿ ಮುಂದೆ ನಿಂತ ಲ್ಯಾಂಬೊರ್ಗಿನಿ ಕಾರಿನ ಫೋಟೊ ಹಾಕಿದೆ. ‘ಮಾವು ಆರ್ಡರ್‌ ಮಾಡಿ, ಉಚಿತ ಜಾಲಿರೈಡ್‌ ಎಂಜಾಯ್‌ ಮಾಡಿ’ ಎಂದು ಫೋಸ್ಟ್‌ ಹಾಕಿದೆ. ಈ ಸುದ್ದಿ ಈಗ ವೈರಲ್‌ ಆದಾಗಿನಿಂದ ಪಾಕಿಸ್ತಾನ ಸೂಪರ್‌ ಮಾರ್ಕೆಟ್‌ನ ಮಾವುಗಳಿಗೆ ಬೇಡಿಕೆ‌ ಹೆಚ್ಚಾಗಿದೆಯಂತೆ. 

ಆದರೆ, ಲ್ಯಾಂಬೋರ್ಗಿನಿಯಲ್ಲಿ ಮಾವು ಮನೆಗೆ ತಲುಪಿಸಲು ಸೂಪರ್‌ ಮಾರ್ಕೆಟ್‌ ಒಂದು ಷರತ್ತು ವಿಧಿಸಿದೆ. ಅದೇನಂದರೆ ಗ್ರಾಹಕರು ಕಡ್ಡಾಯವಾಗಿ ಕನಿಷ್ಠ 2,059 ರೂಪಾಯಿ ಮೌಲ್ಯದ ಮಾವು ಖರೀದಿಸಲೇಬೇಕು. ಇದನ್ನು ಒಪ್ಪಿ ನೂರಾರು ಗ್ರಾಹಕರು ಈ ಲ್ಯಾಂಬೋರ್ಗಿನಿ ಕಾರಲ್ಲಿ ಕೂತು ಸಿಟಿಯಲ್ಲಿ ರೌಂಡ್ ಹೊಡೆಯುತ್ತಿದ್ದಾರೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು