ಭಾನುವಾರ, ಜುಲೈ 25, 2021
28 °C

ಬ್ರಹ್ಮ ಹೆಸರನ್ನು ತೆಗೆದು ಹಾಕಲು ಬಿಯರ್ ತಯಾರಿಕಾ ಕಂಪನಿ ಮೇಲೆ ಒತ್ತಡ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Beer

ಬ್ರೆಜಿಲ್: 1800ರ ದಶಕದಿಂದ ಜನಪ್ರಿಯ ಬಿಯರ್‌ ಆಗಿರುವ 'ಬ್ರಹ್ಮ' ಹೆಸರನ್ನು ಬದಲಿಸಬೇಕು ಎಂದು ವಿವಿಧ ಧರ್ಮಗಳ ಪ್ರತಿನಿಧಿಗಳ ಒಕ್ಕೂಟ ವಿಶ್ವದ ಅತೀ ದೊಡ್ಡ ಬಿಯರ್ ಉತ್ಪಾದನಾ ಕಂಪನಿ ಮೇಲೆ ಒತ್ತಡ ಹೇರಿವೆ.

ಬ್ರೆಜಿಲ್‌ನಲ್ಲಿ ಜನಪ್ರಿಯವಾಗಿರುವ ಬ್ರಹ್ಮ ಬಿಯರ್ ಹೆಸರನ್ನು ಬದಲಿಸಬೇಕು ಎಂದು  ಕ್ರೈಸ್ತ, ಯೆಹೂದಿ, ಬೌದ್ಧ, ಹಿಂದೂ ಮತ್ತು ಜೈನ ಧರ್ಮದ ಪ್ರತಿನಿಧಿಗಳು ಬೆಲ್ಜಿಯಂ ಮೂಲದ ಅನ್‌ಹೆಸರ್- ಬುಷ್ ಇನ್ ಬಿವ್ (AB InBev) ಕಂಪನಿಗೆ ಒತ್ತಾಯಿಸಿದ್ದಾರೆ.

1888ರಲ್ಲಿ ಬ್ರೆಜಿಲ್‌ನ ಬಿಯರ್ ತಯಾರಿಕೆ ಕಂಪನಿಯಾಗಿದ್ದ ಕಂಪಾನಿಯ ಸೆರ್ವೆಜರಿಯಾ ಬ್ರಹ್ಮ, ಬ್ರಹ್ಮ ಬಿಯರ್ ತಯಾರಿಸಿತ್ತು. ಅದೇ ಕಂಪನಿಯನ್ನು ಎಬಿ ಇನ್‌ಬೆವ್ ಖರೀದಿಸಿತ್ತು. ಅತೀ ದೊಡ್ಡ ಮದ್ಯ ತಯಾರಿಕಾ ಕಂಪನಿಯಾದ ಎಬಿ ಇನ್‌ಬಿವ್, ಬಡ್ವೈಸರ್,  ಬಡ್ ಲೈಟ್, ಕೊರೊನಾ ಮತ್ತು ಸ್ಟೆಲ್ಲಾ ಅರ್ಟೊಯಿಸ್ ಸೇರಿದಂತೆ 500 ಬ್ರಾಂಡ್‌ಗಳನ್ನು ಹೊಂದಿದೆ.

ಬ್ರಹ್ಮ ಹೆಸರಲ್ಲಿ ಲಾರ್ಜರ್, ಡಬಲ್ ಮಾಲ್ಟ್, ವೀಟ್ ಬಿಯರ್ ಮತ್ತು ಚಾಕಲೇಟ್ ಸ್ಟಾಟ್ ಮೊದಲಾದ ವಿವಿಧ ರೀತಿಯ ಬಿಯರ್‌ಗಳು ಲಭ್ಯ ಇವೆ. 
ಹಳೇ ತಪ್ಪನ್ನು ತಿದ್ದಿಕೊಳ್ಳಲು ಇದು ಸಕಾಲ. 132 ವರ್ಷಗಳ ಕಾಲ ನಮ್ಮ ಹಿಂದೂ ಸಹೋದರ - ಸಹೋದರಿಯರ ನಂಬಿಕೆಯನ್ನು ಇದು ಘಾಸಿಗೊಳಿಸಿದೆ ಎಂದು ಧಾರ್ಮಿಕ ಒಕ್ಕೂಟದ ವಕ್ತಾರ  ರಾಜನ್ ಜೆಡ್  ಹೇಳಿರುವುದಾಗಿ ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು