ಬುಧವಾರ, ಆಗಸ್ಟ್ 4, 2021
22 °C

ವಿಮಾನದಲ್ಲಿ ಇಂಟರ್‌ನೆಟ್‌: ಯಶಸ್ವಿ ಹಾರಾಟ ನಡೆಸಿದ ಚೀನಾ ವಿಮಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ವಾಯುಮಾರ್ಗದಲ್ಲಿ ಸಂಚರಿಸುವಾಗಲೂ ಪ್ರಯಾಣಿಕರಿಗೆ ಇಂಟರ್‌ನೆಟ್‌ ಸೇವೆ ಇರುವ ವಿಮಾನ ಮಂಗಳವಾರ ಇಲ್ಲಿ ಯಶಸ್ವಿ ಹಾರಾಟ ನಡೆಸಿತು. ಚೀನಾ ಅಭಿವೃದ್ಧಿ ಪಡಿಸಿದ ವಿಶೇಷ ಸಾಧನವನ್ನು ವಿಮಾನದಲ್ಲಿ ಅಳವಡಿಸಲಾಗಿತ್ತು.

‘ಉಪಗ್ರಹ ಆಧಾರಿತ ಇಂಟರ್‌ನೆಟ್‌ ವ್ಯವಸ್ಥೆ’ಯನ್ನು ಹೊಂದಿದ್ದ ಕಿಂಗ್‌ಡಾವೊ ಏರ್‌ಲೈನ್ಸ್‌ನ ವಿಮಾನ (ಕ್ಯೂಡಬ್ಲ್ಯೂ771) ಕಿಂಗ್‌ಡಾವೊ ಲಿಯುಟಿಂಗ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಚೆಂಗ್ಡು ಶುಯಾಂಗ್‌ಲಿಯು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಇಳಿಯಿತು ಎಂದು ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದೆ.

ವಿಮಾನ 10,000 ಮೀಟರ್‌ ಎತ್ತರದಲ್ಲಿ ಹಾರಾಟ ನಡೆಸಿತ್ತು. ಈ ಅವಧಿಯಲ್ಲಿ ಪ್ರಯಾಣಿಕರಿಗೆ 100 ಎಂಬಿಪಿಎಸ್‌ ವೇಗದ ಇಂಟರ್‌ನೆಟ್‌ ಸಂಪರ್ಕ ಪಡೆಯಲು ಸಾಧ್ಯವಾಗಿತ್ತು. ಈ ಅವಧಿಯಲ್ಲಿ ನೇರ ಬ್ರಾಡ್‌ಕಾಸ್ಟ್‌ ಸಹ ಇತ್ತು. ಇದು ಚೀನಾದ ನಾಗರಿಕ ವಿಮಾನದಲ್ಲಿ ನಡೆಸಿದ ನೇರ ಬ್ರಾಡ್‌ಕಾಸ್ಟ್‌ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು ಎಂದು ಪತ್ರಿಕೆ ವರದಿ ಮಾಡಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು