ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್: ಇಸ್ರೇಲ್‌ನಿಂದ ಭಾರತಕ್ಕೆ ವೈದ್ಯಕೀಯ ಸಲಕರಣೆಗಳ ಪೂರೈಕೆ

Last Updated 28 ಜುಲೈ 2020, 6:21 IST
ಅಕ್ಷರ ಗಾತ್ರ

ಜೆರುಸಲೆಂ: ಕೊರೊನಾ ವೈರಸ್‌ ಅನ್ನು ನಿಯಂತ್ರಿಸಲು ದಕ್ಷಿಣ ಏಷ್ಯಾ ನೀಡಿದ ಸಹಾಯಕ್ಕೆ ಪ್ರತಿಯಾಗಿ ನಾವು ಭಾರತಕ್ಕೆ ಹೊಸ ತಂತ್ರಜ್ಞಾನದ ಸುಧಾರಿತ ವೈದ್ಯಕೀಯ ಉಪಕರಣಗಳನ್ನು ಪೂರೈಸಿದ್ದೇವೆ. ಈ ಮೂಲಕ ಭಾರತದೊಂದಿಗಿನ ಸಂಬಂಧವನ್ನು ಇನ್ನಷ್ಟು ವೃದ್ಧಿಗೊಳಿಸುತ್ತಿದ್ದೇವೆ ಎಂದು ಇಸ್ರೇಲ್‌ ತಿಳಿಸಿದೆ.

ಸಂಶೋಧಕರು, ರಕ್ಷಣಾ ತಜ್ಞರು ಮತ್ತು ಆಧುನಿಕ ವೈದ್ಯಕೀಯ ಸಲಕರಣೆಗಳನ್ನು ಹೊತ್ತು ತಂದ ಇಸ್ರೇಲ್‌ನ ವಿಶೇಷ ವಿಮಾನ ಸೋಮವಾರ ಭಾರತಕ್ಕೆ ಬಂದಿಳಿದಿದೆ.ಭಾರತ ಮತ್ತು ಇಸ್ರೇಲ್‌ ಸಂಶೋಧಕರು ಜೊತೆಗೂಡಿ ಕೋವಿಡ್‌ ಪತ್ತೆಗಾಗಿರ‍್ಯಾಪಿಡ್‌ ಪರೀಕ್ಷಾ ಕಿಟ್‌ ಅಭಿವೃದ್ಧಿಪಡಿಸಲಿದ್ದಾರೆ.

‘ಕೊರೊನಾವನ್ನು ನಿಯಂತ್ರಿಸಲು ಇಸ್ರೇಲ್‌ ಮತ್ತು ಭಾರತ ಪರಸ್ಪರ ಸಹಾಯ ಮಾಡುತ್ತಿವೆ. ಈ ಮೂಲಕ ತಮ್ಮ ಸಂಬಂಧವನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತಿವೆ. ಇಸ್ರೇಲ್‌ ಈ ಮೂಲಕ ಭಾರತ ನೀಡಿದ ಸಹಾಯಕ್ಕೆ ಧನ್ಯವಾದ ಹೇಳಿದೆ’ ಎಂದು ಏಷ್ಯಾ ಹಾಗೂ ಪೆಸಿಫಿಕ್ ವಿಭಾಗದ ಉಪ ನಿರ್ದೇಶಕ ಗ್ಲಿಲಾಡ್‌ ಕೊಹರಿನ್‌ ಹೇಳಿದ್ದಾರೆ.

ಏ.7 ರಂದು ಭಾರತವು ವೈದ್ಯಕೀಯ ಸಲಕರಣೆಗಳು ಮತ್ತುಹೈಡ್ರಾಕ್ಸಿಕ್ಲೋರೋಕ್ವಿನ್ ಸೇರಿದಂತೆ ಒಟ್ಟು5 ಟನ್‌ ಔಷಧಿಗಳನ್ನುಇಸ್ರೇಲ್‌ಗೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT