ಬುಧವಾರ, ಆಗಸ್ಟ್ 12, 2020
27 °C

ಮಾನವನಂಥ ತುಟಿ, ಹಲ್ಲುಗಳನ್ನು ಹೊಂದಿರುವ ಮೀನು ಪತ್ತೆ 

ಏಜನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ:  ಈ ಮೀನುಗಳನ್ನು ಟ್ರಿಗರ್ ಫಿಶ್ ಎಂದು ಕರೆಯಲಾಗುತ್ತದೆ. ಅವುಗಳು 'ಮಾನವನ ರೀತಿಯ' ಹಲ್ಲು ಮತ್ತು ತುಟಿಗಳಿಗೆ ಸುಪ್ರಸಿದ್ಧ.  

ಮಲೇಷ್ಯಾದಲ್ಲಿ ಈ ಮೀನು ಸಿಕ್ಕಿದೆ ಎಂದು ಹೇಳಲಾಗುತ್ತಿದ್ದು, ಅದರ ಚಿತ್ರಗಳು ಸದ್ಯ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. 

ತೀರ ಅಪರೂಪದ ಈ ಮೀನಿನ ಚಿತ್ರ ಸಾಮಾಜಿಕ ತಾಣಗಳಿಗೆ ಪ್ರವೇಶಿಸಿದ್ದೇ ತಡ, ಜನ ಮುಗಿ ಬಿದ್ದು ಶೇರ್‌ ಮಾಡಿದ್ದಾರೆ. ಹೀಗಾಗಿ ಮೀನಿನ ಚಿತ್ರಗಳು ವೈರಲ್‌ ಆಗಿವೆ. ಮೀನಿನ ರೂಪ ಕಂಡ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.  ಇನ್ನುಳಿದಂತೆ ಈ ಮೀನು ಮಲೇಷ್ಯಾದ ಯಾವ ಭಾಗದಲ್ಲಿ ಪತ್ತೆಯಾಗಿದೆ, ಎಂದು ಪತ್ತೆಯಾಗಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. 

ಹಿಂದೂ ಮಹಾಸಾಗರವೇ ಆವಸ ಸ್ಥಾನ 

ಟ್ರಿಗರ್ ಫಿಶ್‌ಗಳು ಬಾಲಿಸ್ಟಿಡೇ ಜಾತಿಗೆ ಸೇರಿದ ಮೀನುಗಳಾಗಿವೆ. ಇದರಲ್ಲಿ 40 ಪ್ರಬೇಧಗಳಿವೆ ಎಂದು ಹೇಳಲಾಗಿದೆ. ಅವು ವಿಶ್ವದಾದ್ಯಂತ ಉಷ್ಣವಲಯದ ಸಾಗರಗಳಲ್ಲಿ ವಾಸಿಸುತ್ತವೆ, ಹಿಂದೂ ಮಹಾಸಾಗರದಲ್ಲಿ ಇವು ಹೆಚ್ಚಾಗಿ ಕಂಡು ಬರುತ್ತವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು