ಬುಧವಾರ, ಆಗಸ್ಟ್ 4, 2021
26 °C

ಹಾಂಗ್ ಕಾಂಗ್, ಜಪಾನ್‌ನಲ್ಲಿ ಚಿನ್ನ ಖರೀದಿಗೆ ಮುಗಿಬಿದ್ದ ಗ್ರಾಹಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ರಾಯಿಟರ್ಸ್): ಭಾರತದಲ್ಲಿ ಕೊರೊನಾ ಸೋಂಕಿನಿಂದ ಎಲ್ಲಾ ಚಟುವಟಿಕೆಗಳು ಕಡಿಮೆಯಾಗುತ್ತಿದ್ದರೆ, ಚೀನಾದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಅಲ್ಲದೆ, ಅತ್ತ ಸಿಂಗಪೂರ್ ಹಾಗೂ ಜಪಾನ್‌ನಲ್ಲಿ ಚಿನ್ನದ ಮೇಲಿನ ಹೂಡಿಕೆ ವಹಿವಾಟು ಹೆಚ್ಚಾಗಿವೆ.

ಭಾರತದಲ್ಲಿ ಚಿನ್ನಕ್ಕೆ ಬುಧವಾರ 10 ಗ್ರಾಂಗೆ 48,982 ರೂಪಾಯಿಗಳ ($ 655.63) ದಾಖಲೆ ಮಾರಾಟವಾಗಿದೆ. ಚೀನಾದಲ್ಲಿ ಕಳೆದ ವಾರ ಔನ್ಸ್‌‌ಗೆ $10ಗಳಿಂದ $ 20ಗಳಿದ್ದು, ರಿಯಾಯಿತಿ ನೀಡಿ ಮಾರಾಟ ಮಾಡುವುದು ಕಂಡುಬಂದಿದೆ. ಅಲ್ಲದೆ, ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.

ಚೀನಾದಲ್ಲಿ ಎಲ್ಲಾ ವ್ಯವಹಾರಗಳು ಕುಸಿದಿವೆ. ಆದರೂ, ಶಾಂಘೈನಲ್ಲಿ ಸ್ವಲ್ಪ ವ್ಯಾಪಾರ ಮಾತ್ರ ಇದೆ ಎಂದು ಚಿನ್ನದ ವ್ಯಾಪಾರಗಳ ಮುಖ್ಯಸ್ಥ ಪೀಟರ್ ಫಂಗ್ ಹೇಳಿದ್ದಾರೆ. ಆದರೂ ಚಿನ್ನದ ಬೆಲೆ ಎಂಟು ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ತಲುಪಿದೆ. ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆಗಳು ಈ ವಾರ ಎಂಟು ವರ್ಷಗಳ ಗರಿಷ್ಠ ಬೆಲೆಗೆ ತಲುಪಿದೆ.

ಉದ್ಯೋಗ ಕಳೆದುಕೊಂಡ ಜನರು ತಮ್ಮ ಚಿನ್ನವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಹಾಂಗ್ ಕಾಂಗ್ ಮೂಲದ ಲೋಹಗಳ ವಿಶ್ಲೇಷಕ ಸ್ಯಾಮ್ಸನ್ ಲಿ ಅಭಿಪ್ರಾಯಪಟ್ಟಿದ್ದಾರೆ.

ಹಾಂಗ್ ಕಾಂಗ್‌‌ನಲ್ಲಿ ಔನ್ಸ್‌ಗೆ  $ 0.50 ರಿಯಾಯಿತಿಯನ್ನು ನೀಡಿ ಮಾರಾಟ ಮಾಡಲಾಗುತ್ತಿದೆ. ಆಭರಣ ಮಳಿಗೆಗಳು ಪುನರಾರಂಭಗೊಂಡಿವೆ, ಆದರೆ ಚಿನ್ನಕ್ಕೆ ಬೆಲೆ ಏರಿದ್ದರಿಂದ ಚಿಲ್ಲರೆ ಖರೀದಿದಾರರು ಚಿನ್ನವನ್ನು ಖರೀದಿ ಮಾಡುತ್ತಿಲ್ಲ ಎಂದು ಮುಂಬೈ ಮೂಲದ ಚಿನ್ನದ ಸಗಟು ವ್ಯಾಪಾರಿ ಅಶೋಕ್ ಜೈನ್ ಅಭಿಪ್ರಾಯಪಟ್ಟಿದ್ದಾರೆ.

ಕೊರೊನ ಸೋಂಕು ತಡೆಯಲು ಲಾಕ್‌ಡೌನ್ ಜಾರಿ ಮಾಡಿರುವುದರಿಂದ ಭಾರತದಲ್ಲಿ ಚಿನ್ನದ ಆಮದು ಜೂನ್‌ ತಿಂಗಳಲ್ಲಿ ಶೇ86ರಷ್ಟು ಕುಸಿದಿದೆ. ಕಳೆದ ವಾರಕ್ಕೆ ಹೋಲಿಸಿದರೆ ನಾವು ಈ ವಾರ ಹೆಚ್ಚಿನ ವ್ಯಾಪಾರ ನಡೆಸಿದ್ದೇವೆ. ಆದರೆ ಈ ಎಲ್ಲಾ ವಹಿವಾಟುಗಳಲ್ಲಿ ಶೇ. 70ರಷ್ಟು ಗ್ರಾಹಕರು ನಮ್ಮ ಬಳಿ ವ್ಯಾಪಾರ ಮಾಡಿದ್ದಾರೆ ಎಂದು ಸಿಂಗಾಪುರ ಮೂಲದ ವ್ಯಾಪಾರಿ ಬ್ರಿಯಾನ್ ಲ್ಯಾನ್ ಹೇಳಿದ್ದಾರೆ.

ಜಪಾನಿನಲ್ಲಿ ಹೂಡಿಕೆ ಹೆಚ್ಚಿರುವುದರಿಂದ ಪ್ರತಿ ಔನ್ಸ್‌ಗೆ ಬೆಲೆ ಏರಿಸಲಾಗಿದೆ. ಯೆನ್‌ನಲ್ಲಿನ ಚಿಲ್ಲರೆ ಬೆಲೆಗಳು ಗಗನಕ್ಕೇರುತ್ತಿರುವುದರಿಂದ, ಜನರು ಈಗ ಹೂಡಿಕೆಯಾಗಿ ಚಿನ್ನದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ ಎಂದು ಟೋಕಿಯೊ ಮೂಲದ ಚಿಲ್ಲರೆ ವ್ಯಾಪಾರಿ ಟೋಕುರಿಕಿ ಹೊಂಟೆನ್‌ನ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು