ಶುಕ್ರವಾರ, ಆಗಸ್ಟ್ 7, 2020
24 °C

ದಕ್ಷಿಣ ಜಪಾನ್‌ನಲ್ಲಿ ಪ್ರವಾಹ: 34 ಮಂದಿ ಸಾವು

ಎಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ದಕ್ಷಿಣ ಜಪಾನ್‌ನಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಪ್ರವಾಹ ಭೀತಿ ಎದುರಾಗಿದ್ದು, ಮಣ್ಣು ಕುಸಿತ ಸಂಭವಿಸಿದೆ. ಇದರಿಂದಾಗಿ ಈವರೆಗೆ 34 ಮಂದಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. 

ಕುಮಮೊಟೊ ಪ್ರಾಂತ್ಯದಲ್ಲಿ ಸಿಲುಕಿರುವ ಜನರನ್ನು ಹೆಲಿಕಾಪ್ಟರ್‌ ಮತ್ತು ದೋಣಿಗಳ ಮೂಲಕ ರಕ್ಷಿಸಲಾಗಿದೆ. 40,000ಕ್ಕೂ ಹೆಚ್ಚು ರಕ್ಷಣಾ ಪಡೆ, ಕರಾವಳಿ ಕಾವಲು ಪಡೆ ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.   

ಕುಮಾ ನದಿ ಪ್ರದೇಶವು ಸಂಪೂರ್ಣವಾಗಿ ಜಲಾವೃತವಾಗಿದ್ದು ಅಲ್ಲಿನ ಮನೆಗಳು, ಗಾಡಿಗಳು ಭಾಗಶಃ ಮುಳುಗಡೆಯಾಗಿವೆ. ಪ್ರವಾಹದಲ್ಲಿ ಕುಮಾ ಗ್ರಾಮದ 14 ನಿವಾಸಿಗಳು ಮೃತಪಟ್ಟಿರ ಬಹುದು ಎಂದು ಶಂಕಿಸಲಾಗಿದೆ. 

ಭಾನುವಾರ ಸಂಜೆ ತನಕ ಗ್ರಾಮದ 51 ನಿವಾಸಿಗಳನ್ನು ದೋಣಿಗಳ ಮೂಲಕ ರಕ್ಷಿಸಿ ಚಿಕಿತ್ಸೆ ನೀಡಲಾಗಿದೆ. ಉಳಿದ 30 ಮಂದಿ ಸ್ಥಳೀಯ ಆರೈಕೆ ಕೇಂದ್ರದಲ್ಲಿ ಸಿಲುಕಿದ್ದರು. ಸ್ಥಳೀಯ ರಿವರ್‌  ರ್‍ಯಾಫ್ಟಿಂಗ್‌ ತಂಡ ಶಿಗೆಮಿಟ್ಸು ಸಕೋಡಾನ ಸಹಾಯದೊಂದಿಗೆ ಆರೈಕೆ ಕೇಂದ್ರದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು