ಮಂಗಳವಾರ, ಆಗಸ್ಟ್ 11, 2020
26 °C

ಅಮೆರಿಕದ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್ ಪ್ರತಿಮೆಗೆ ಬೆಂಕಿ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಅಮೆರಿಕದ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್‌ ಅವರ ಮರದ ಪ್ರತಿಮೆಗೆ ಬೆಂಕಿ ಹಚ್ಚಿ ವಿರೂಪಗೊಳಿಸಿರುವ ಘಟನೆ ತಡವಾಗಿ ವರದಿಯಾಗಿದೆ.

ಮೆಲನಿಯಾ ಟ್ರಂಪ್‌ ಅವರು ಹುಟ್ಟೂರು ಸ್ಲೊವೇನಿಯಾದಲ್ಲಿ ಈ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು. ಜುಲೈ 4ರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಯಂದೇ ( ಜುಲೈ 4) ಪ್ರತಿಮೆಗೆ ಬೆಂಕಿ ಹಚ್ಚಲಾಗಿದೆ.

ಪೊಲೀಸರು ಮಾಹಿತಿ ನೀಡಿದ ಕೂಡಲೇ ವಿರೂಪಗೊಂಡಿದ್ದ ಪ್ರತಿಮೆಯನ್ನು ತೆಗೆಯಲಾಗಿದೆ ಎಂದು ಪ್ರತಿಮೆಯನ್ನು ನಿರ್ಮಾಣ ಮಾಡಿದ್ದ ಜರ್ಮನಿ ಮೂಲದ ಅಮೆರಿಕ ಕಲಾವಿದ ಬ್ರ್ಯಾಡ್‌ ಡೌನಿ ತಿಳಿಸಿದ್ದಾರೆ.

ಅವರು ಪ್ರತಿಮೆಯನ್ನು ಯಾಕೆ ವಿರೂಪಗೊಳಿಸಿದರು ಎಂದು ನಾನು ಕೇಳಲು ಬಯಸುತ್ತೇನೆ. ಅಮೆರಿಕದಲ್ಲಿ ಜನಾಂಗೀಯ ದ್ವೇಷದ ಕಿಡಿಯನ್ನು ಶಮನಗೊಳಿಸಲು ತ್ವರತವಾಗಿ ಮಾತುಕತೆ ನಡೆಸಲು ಇದು ಸಕಾಲವಾಗಿದೆ. ವಲಸಿಗರ ಪ್ರತಿನಿಧಿಯಾಗಿರುವ ಮೆಲನಿಯಾ ಟ್ರಂಪ್‌ ಅವರ ಪ್ರತಿಮೆಯನ್ನು ವಿರೂಪಗೊಳಿಸಿರುವುದು ಸರಿ ಅಲ್ಲ ಎಂದು ಅವರು ಹೇಳಿದ್ದಾರೆ.

ಅಮೆರಿಕದಲ್ಲಿ ಜನಾಂಗೀಯ ದ್ವೇಷದ ಕಿಡಿ ಹಬ್ಬಿದ್ದು ಪ್ರತಿಭಟನಾಕಾರರು ಕೊಲಂಬಸ್‌ ಸೇರಿದಂತೆ ಹಲವರ ಪ್ರತಿಮೆಗಳನ್ನು ಭಗ್ನಗೊಳಿಸುತ್ತಿದ್ದಾರೆ. ದೇಶದಲ್ಲಿ ಐತಿಹಾಸಿಕ ಸ್ಮಾರಕಗಳು ಹಾಗೂ ಪ್ರತಿಮೆಗಳನ್ನು ವಿರೂಪಗೊಳಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದಾಗಿ ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

ಮೆಲನಿಯಾ ಮೂಲತಹ ಸ್ಲೊವೇನಿಯಾ ದೇಶದವರು. ಇಲ್ಲಿನ ಸೆವ್ನಿಂಕಾ ಪಟ್ಟಣದಲ್ಲಿ ಮೆಲನಿಯಾ ಅವರ ಮರದ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಮೆಲನಿಯಾ ಇದೇ ಪಟ್ಟಣದಲ್ಲಿ ಹುಟ್ಟಿದ್ದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು