ಬುಧವಾರ, ಆಗಸ್ಟ್ 4, 2021
24 °C

ಚೀನಾ ಜತೆ ಮಾತುಕತೆಗೆ ಒಲವಿಲ್ಲ ಎಂದ ಡೊನಾಲ್ಡ್ ಟ್ರಂಪ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Donald trump

ವಾಷಿಂಗ್ಟನ್: ಚೀನಾ ಜತೆ ವ್ಯಾಪಾರ ಒಪ್ಪಂದದ ಎರಡನೇ ಹಂತದ ಮಾತುಕತೆಗೆ ಒಲವಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿರುವ ಬೆನ್ನಲ್ಲೇ ಟ್ರಂಪ್ ಅವರು ಈ ಹೇಳಿಕೆ ನೀಡಿದ್ದಾರೆ.

‘ಚೀನಾ ಜತೆ ಮಾತುಕತೆಗೆ ನನಗೆ ಆಸಕ್ತಿಯಿಲ್ಲ. ನಾವು ಅದ್ಭುತ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವುದು ನಿಜ. ಆದರೆ, ಒಪ್ಪಂದ ಮಾಡಿಕೊಂಡ ಕೂಡಲೇ, ಅದಕ್ಕೆ ಸಹಿ ಹಾಕಿದ ಶಾಯಿ ಒಣಗುವುದಕ್ಕೂ ಮುನ್ನವೇ ಅವರು ನಮಗೆ ಮಾರಕ ಸೋಂಕಿನ ಹೊಡೆತ ನೀಡಿದರು’ ಎಂದು ಟ್ರಂಪ್ ಹೇಳಿದ್ದಾರೆ.

ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜನವರಿಯಲ್ಲಿ ಮೊದಲ ಹಂತದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದರು. ಎರಡು ಹಾಗೂ ಮೂರನೇ ಹಂತದ ಒಪ್ಪಂದಗಳ ಬಗ್ಗೆಯೂ ಮಾತುಕತೆಗಳು ನಡೆಯಲಿವೆ ಎನ್ನಲಾಗಿತ್ತು. ಆದರೆ ಎರಡನೇ ಹಂತದ ಒಪ್ಪಂದಕ್ಕೆ ಸಮಯ ನಿಗದಿಯಾಗಿರಲಿಲ್ಲ. ಕೊರೊನಾ ವೈರಸ್ ಸಾಂಕ್ರಾಮಿಕ ಜಗತ್ತನ್ನು ಆವರಿಸಿದ್ದರಿಂದಾಗಿ ವ್ಯಾಪಾರ ಮಾತುಕತೆಗಳು ನಿಂತುಹೋದವು.

ಈ ಮಧ್ಯೆ, ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ಹಕ್ಕು ಪ್ರತಿಪಾದನೆಯೂ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿಚಾರದಲ್ಲಿಯೂ ಚೀನಾ ವಿರುದ್ಧ ಅಮೆರಿಕ ಆಕ್ಷೇಪ ವ್ಯಕ್ತಪಡಿಸಿದೆ. ಚೀನಾ ಆ ಭಾಗದ ಮೇಲೆ ಹಕ್ಕು ಪ್ರತಿಪಾದಿಸಿರುವುದಕ್ಕೆ ಯಾವುದೇ ಕಾನೂನು ಆಧಾರವಿಲ್ಲ. ‘ಚೀನಾದ ಪರಭಕ್ಷಕ’ ನಿಲುವಿಗೆ 21ನೇ ಶತಮಾನದಲ್ಲಿ ಯಾವುದೇ ಸ್ಥಾನವಿಲ್ಲ ಎಂದೂ ಅಮೆರಿಕ ಮಂಗಳವಾರ ಹೇಳಿತ್ತು.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು