ಶನಿವಾರ, ಸೆಪ್ಟೆಂಬರ್ 18, 2021
28 °C
ಮತ್ತೆ ಜಮ್ಮು ಮತ್ತು ಕಾಶ್ಮೀರದ ಕ್ಯಾತೆ ತೆಗೆದ ಪಾಕಿಸ್ತಾನ

ಎಲ್‌ಒಸಿಗೆ ಭೇಟಿ ನೀಡಿದ ಪಾಕಿಸ್ತಾನದ ವಿದೇಶಾಂಗ, ರಕ್ಷಣಾ ಸಚಿವರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್‌: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರ ರದ್ದುಗೊಳಿಸಿ ಒಂದು ವರ್ಷ ಪೂರ್ಣವಾಗುತ್ತಿರುವ ಸಂದರ್ಭದಲ್ಲೇ, ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹ್ಮೂದ್‌ ಖುರೇಷಿ ಮತ್ತು ರಕ್ಷಣಾ ಸಚಿವ ಪರ್ವೇಜ್‌ ಖಟಕ್‌ ಸೋಮವಾರ ಗಡಿ ನಿಯಂತ್ರಣಾ ರೇಖೆ (ಎಲ್‌ಒಸಿ) ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಭೇಟಿ ವೇಳೆ ಗಡಿಯಲ್ಲಿ ಪ್ರಸ್ತುತ ಇರುವ ಸ್ಥಿತಿಯ ಬಗ್ಗೆ ಹಿರಿಯ ಸೇನಾ ಅಧಿಕಾರಿಗಳು ಅವರಿಗೆ ವಿವರಣೆ ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಕಾಶ್ಮೀರದ ಜನತೆ ಜೊತೆ ನಾವಿದ್ದೇವೆ: ಪ್ರಧಾನಿಯವರ ರಾಷ್ಟ್ರೀಯ ಭದ್ರತೆ ವಿಶೇಷ ಸಹಾಯಕ ಮೊಯೀದ್‌ ಯೂಸಫ್‌ ಜೊತೆಗೂಡಿ ಇಬ್ಬರು ಸಚಿವರು ಚಿರಿ ಕೋಟ್‌ ಸೆಕ್ಟರ್‌ಗೆ ಭೇಟಿ ನೀಡಿದ್ದಾರೆ. ಎಲ್‌ಒಸಿ ಭೇಟಿಗೂ ಮುನ್ನ ವಿಡಿಯೊ ಮೂಲಕ ಸಂದೇಶ ನೀಡಿದ್ದ ಖುರೇಷಿ, ‘ಕಾಶ್ಮೀರದ ಜನತೆಯ ಜೊತೆಗೆ ನಾವಿದ್ದೇವೆ ಎನ್ನುವ ಒಗ್ಗಟ್ಟು ಪ್ರದರ್ಶಿಸಲು ರಕ್ಷಣಾ ಸಚಿವರ ಜೊತೆಗೂಡಿ ಎಲ್ಒಸಿಗೆ ಭೇಟಿ ನೀಡುತ್ತಿದ್ದೇನೆ’ ಎಂದು ಉಲ್ಲೇಖಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು