ಶನಿವಾರ, ಜೂಲೈ 4, 2020
22 °C

ರಕ್ಷಣಾ ಕ್ಷೇತ್ರದಲ್ಲಿ ಭಾರತ–ಅಮೆರಿಕ ಬಾಂಧವ‍್ಯ ವೃದ್ಧಿಗೆ ಮಸೂದೆ ಮಂಡನೆ

ಪಿಟಿಐ Updated:

ಅಕ್ಷರ ಗಾತ್ರ : | |

ಭಾರತ–ಅಮೆರಿಕ ಬಾಂಧವ್ಯ: ಪ್ರಾತಿನಿಧಿಕ ಚಿತ್ರ

ವಾಷಿಂಗ್ಟನ್‍: ರಕ್ಷಣಾ ಕ್ಷೇತ್ರದಲ್ಲಿ ಭಾರತ ಮತ್ತು ಅಮೆರಿಕದ ಬಾಂಧವ್ಯ ಬಲಪಡಿಸಲು ನೆರವಾಗುವ ಮಸೂದೆಯನ್ನು ಆಡಳಿತರೂಢ ರಿಪಬ್ಲಿಕನ್‍ ಮತ್ತು ವಿರೋಧಪಕ್ಷ ಡೆಮಾಕ್ರಾಟಿಕ್ ಪಕ್ಷದ ಸದಸ್ಯರು ಮಂಗಳವಾರ ಮಂಡಿಸಿದರು.

ಮುಖ್ಯವಾಗಿ, ಐದನೇ ಪೀಳಿಗೆಯ ಆಧುನಿಕ ಯುದ್ಧವಿಮಾನಗಳು ಹಾಗೂ ಸೇನಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಹಕಾರ ಹೊಂದಲು ಉದ್ದೇಶಿತ ಮಸೂದೆಯು ನೆರವಾಗಲಿದೆ.

ಎನ್‍ಡಿಎಎ 2021 ತಿದ್ದುಪಡಿ ಮಸೂದೆಯನ್ನು ಮಂಡಿಸಿದ ಸಂಸದರಾದ ಮಾರ್ಕ್ ವಾರ್ನರ್ ಮತ್ತು ಜಾನ್‍ ಕೊರಿನ್‍ ಅವರು ರಕ್ಷಣೆ ಮತ್ತು ಸಂಕೀರ್ಣ ಟೆಕ್ನಾಲಜೀಸ್‍ ಕ್ಷೇತ್ರದಲ್ಲಿ ಭಾರತ ಮತ್ತು ಅಮೆರಿಕ ಖಾಸಗಿ ವಲಯದ ಸಹಭಾಗಿತ್ವಕ್ಕೆ ಇರುವ ಸಾಧ್ಯತೆಗಳನ್ನು ವಿವರಿಸುವಂತೆ ರಕ್ಷಣಾ ಕಾರ್ಯದರ್ಶಿ ಮಾರ್ಕ್‌ ಎಸ್ಪೆರ್ ಅವರಿಗೆ ಕೋರಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು