ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹೃತ ತೈಲ ಟ್ಯಾಂಕರ್ ಹೊತ್ತ ಹಡಗು‌ ಇರಾನ್‌ ವಶದಲ್ಲಿ: ಐಎಲ್‌ಒ

Last Updated 19 ಜುಲೈ 2020, 12:58 IST
ಅಕ್ಷರ ಗಾತ್ರ

ದುಬೈ: ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದ ಕಚ್ಚಾತೈಲ ಇರುವ ಟ್ಯಾಂಕರ್‌ ಹೊತ್ತ ಹಡಗನ್ನು ಅರಬ್‌ ಸಂಯುಕ್ತ ಸಂಸ್ಥಾನಗಳ (ಯುಎಇ) ಬಳಿ ಅಪಹರಿಸಲಾಗಿತ್ತು. ಈ ಹಡಗು ಈಗ ಇರಾನ್‌ ವಶದಲ್ಲಿದೆ ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಭಾನುವಾರ ಹೇಳಿದೆ.

‘ಎಂ.ಟಿ ಗಲ್ಫ್‌ ಸ್ಕೈ’ ಹೆಸರಿನ ಹಡಗನ್ನು ಯುಎಇಯ ಖೋರ್ಫಾಕ್ಕಾನ್‌ ನಗರ ಬಳಿಯ ಕಡಲಿನಿಂದ ಜುಲೈ 5ರಂದು ಅಪಹರಿಸಲಾಗಿತ್ತು ಎಂದು ಹಡಗಿನ ಕ್ಯಾಪ್ಟನ್‌ ಹೇಳಿಕೆ ಉಲ್ಲೇಖಿಸಿ ಐಎಲ್‌ಒ ವರದಿ ಮಾಡಿದೆ.

‘ಈ ಹಡಗನ್ನು ಇರಾನ್‌ಗೆ ಒಯ್ಯಲಾಗಿದೆ. ಇದರಲ್ಲಿದ್ದ ಸಿಬ್ಬಂದಿ ಪೈಕಿ 28 ಜನ ಭಾರತೀಯರು ಇರಾನ್‌ನಲ್ಲಿ ಇಳಿದುಕೊಂಡಿದ್ದರು. ಪಾಸ್‌ಪೋರ್ಟ್‌ ಹೊಂದಿರದ ಇಬ್ಬರನ್ನು ಹೊರತುಪಡಿಸಿ ಉಳಿದವರು ಜುಲೈ 15ರಂದು ಭಾರತಕ್ಕೆ ತೆರಳಿದ್ದಾರೆ’ ಎಂದೂ ಸಂಘಟನೆ ಹೇಳಿದೆ.

ಆದರೆ, ಈ ಹಡಗನ್ನು ಅಪಹರಿಸಲಾಗಿದೆ ಎಂಬುದನ್ನು ಇರಾನ್‌ನ ಅಧಿಕಾರಿಗಳು ಹಾಗೂ ಸರ್ಕಾರಿ ಒಡೆತನದ ಮಾಧ್ಯಮ ಖಚಿತಪಡಿಸಿಲ್ಲ. ಈ ಬಗ್ಗೆ ಅಮೆರಿಕ ಸಹ ಇದುವರೆಗೆ ಯಾವುದೇ ಪ್ರತಿಕ್ರಿಯೆ ದಾಖಲಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT