ಸೋಮವಾರ, ಆಗಸ್ಟ್ 10, 2020
23 °C
ಅಮೆರಿಕ–ಚೀನಾ ನಡುವೆ ಕೊರೊನಾ ತಂದಿಟ್ಟ ಹಗೆತನ

ಕಾನ್ಸುಲೆಟ್‌ ಕಚೇರಿಗಳ ಬಂದ್‌: ಅಮೆರಿಕ–ಚೀನಾಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು!

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕ ಮತ್ತು ಚೀನಾ ಪರಸ್ಪರ ಕಾನ್ಸುಲೆಟ್‌ ಕಚೇರಿಗಳನ್ನು ಬಂದ್‌ ಮಾಡಿರುವುದು ಸಾಂಕೇತಿಕ ಪ್ರತಿಭಟನೆ ಎನಿಸಿದರೂ, ಆ ದೇಶಗಳಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕೊರೊನಾ ಸೋಂಕು ಪ್ರಸರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಚೀನಾ ನಡುವೆ ಆರಂಭವಾದ ಆರೋಪ–ಪ್ರತ್ಯಾರೋಪ, ಪರಸ್ಪರರ ಕಾನ್ಸುಲೆಟ್‌ ಕಚೇರಿಗಳನ್ನು ಬಂದ್‌ ಮಾಡುವ ಹಂತಕ್ಕೆ ಹೋಗಿದೆ. ಅಲ್ಲದೇ, ತಮ್ಮ ದೇಶಕ್ಕೆ ಸಂಬಂಧಿಸಿದ ಮುಖ್ಯ ವಿದ್ಯಮಾನಗಳತ್ತ ಗಮನ ನೀಡಲು ಈ ರಾಷ್ಟ್ರಗಳಿಗೆ ಸಾಧ್ಯವಾಗುತ್ತಿಲ್ಲ. ಅದರಲ್ಲೂ ಗೂಢಚಾರ ಚಟುವಟುಕೆಗಳಿಗೆ ಹಿನ್ನಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಚೀನಾದ ನೈರುತ್ಯ ಪ್ರಾಂತ್ಯದ ಚೆಂಗ್ಡು ನಗರದಲ್ಲಿದ್ದ ತನ್ನ ಕಾನ್ಸುಲೆಟ್‌ ಕಚೇರಿಯನ್ನು ಅಮೆರಿಕ ಬಂದ್‌ ಮಾಡಿದೆ. ಈ ಪ್ರಾಂತ್ಯದಲ್ಲಿರುವ ಟಿಬೆಟ್‌ ಮೂಲದ ಬೌದ್ಧರಿಗೆ ಅಮೆರಿಕ ಸ್ಪಂದಿಸಲು ಸಾಧ್ಯವಾಗುತ್ತಿತ್ತು. ಟಿಬೆಟ್‌ ಸ್ವಾಯತ್ತಕ್ಕೆ ಸಂಬಂಧಿಸಿಯೂ ಅಮೆರಿಕ ಧ್ವನಿ ಎತ್ತುತ್ತಿತ್ತು. ಆದರೆ, ಈಗ ಇದು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತದೆ.  

ಹ್ಯೂಸ್ಟನ್‌ನಲ್ಲಿನ ಕಾನ್ಸುಲೆಟ್‌ ಕಚೇರಿ ಮುಚ್ಚಿದ್ದು ಸಹ ಚೀನಾಕ್ಕೆ ಹಿನ್ನಡೆ ಎನಿಸಿದ್ದು, ಎಷ್ಟರ ಮಟ್ಟಿಗೆ ಇದರಿಂದ ಚೀನಾಕ್ಕೆ ನಷ್ಟವಾಗಲಿದೆ ಎಂಬುದು ಗೊತ್ತಾಗಲು ಸಮಯಬೇಕು ಎಂದು ರಾಜಕೀಯ ತಜ್ಞರು ಅಭಿಪ್ರಾಯಪಡುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು