ದಾಖಲೆ ವೇಗದಲ್ಲಿ ಚಲಿಸಿದ ‘ಸುಪ್ರೀಂ’

ಭಾನುವಾರ, ಜೂನ್ 16, 2019
28 °C

ದಾಖಲೆ ವೇಗದಲ್ಲಿ ಚಲಿಸಿದ ‘ಸುಪ್ರೀಂ’

Published:
Updated:
Prajavani

ಟೊಕಿಯೊ: ಮುಂಬರುವ ಟೊಕಿಯೊ ಒಲಿಂಪಿಕ್ಸ್‌ಗಾಗಿ ಜಪಾನ್‌ ‘ಸುಪ್ರೀಂ’ ಬುಲೆಟ್‌ ರೈಲು ನಿರ್ಮಿಸಿದ್ದು, ಮಯ್‌ಬರಾ–ಕ್ಯೂಟೊ ನಗರಗಳ ನಡುವೆ ಗಂಟೆಗೆ 360 ಕಿ.ಮೀ ವೇಗದಲ್ಲಿ ಚಲಿಸಿ ಇದು ದಾಖಲೆ ಬರೆದಿದೆ.  

‘ಸುಪ್ರೀಂ’ ಸುಧಾರಿತ ಬುಲೆಟ್‌ ರೈಲು ಆಗಿದ್ದು, ಕಡಿಮೆ ವಿದ್ಯುತ್ ಬಳಸುವುದಲ್ಲದೆ, ಎಂಜಿನ್ ಮತ್ತು ಹೊರ ವಿನ್ಯಾಸದಲ್ಲಿ ಹಲವು ಬದಲಾವಣೆ ಮಾಡಲಾಗಿದೆ ಎಂದು ಜಪಾನ್‌ ಕೇಂದ್ರ ರೈಲ್ವೆ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.  

₹ 1,526 ಕೋಟಿ (2.2 ಶತಕೋಟಿ ಡಾಲರ್‌) ವೆಚ್ಚದಲ್ಲಿ ಹೊಸ ಬುಲೆಟ್‌ ರೈಲುಗಳನ್ನು ಜಪಾನ್‌ ತಯಾರಿಸುತ್ತಿದ್ದು, 2030ರ ವೇಳೆಗೆ ‘ಸುಪ್ರೀಂ’ ಹಾಗೂ ‘ಆಲ್ಫಾ–ಎಕ್ಸ್’ ಮಾದರಿಯ ಬುಲೆಟ್‌ ರೈಲುಗಳು ಕಾರ್ಯಾಚರಿಸಲಿವೆ ಎಂದು ಜಪಾನ್ ರೈಲ್ವೆ ಹೇಳಿದೆ.  

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 20

    Happy
  • 2

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !