‘ದಿ ವೈರ್’: ಪೊಲೀಸರ ಶೋಧದ ರೀತಿಗೆ ‘ಎಡಿಟರ್ಸ್ ಗಿಲ್ಡ್’ ಬೇಸರ
ನವದೆಹಲಿ (ಪಿಟಿಐ): ಬಿಜೆಪಿಯ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರ ದೂರು ಆಧರಿಸಿ ‘ದಿ ವೈರ್’ ಸುದ್ದಿ ಮಾಧ್ಯಮ ಕಚೇರಿ ಮತ್ತು ಸಂಪಾದಕರ ಮನೆಗಳಲ್ಲಿ ದೆಹಲಿ ಪೊಲೀಸರು ಶೋಧ ನಡೆಸಿದ ರೀತಿ ತೀವ್ರ ಬೇಸರ ತರಿಸಿದೆ ಎಂದು ‘ಎಡಿಟರ್ಸ್ ಗಿಲ್ಡ್’ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ.
ಪೊಲೀಸರು ವಿಚಾರಣೆ ಸಲುವಾಗಿ ವಿವಿಧ ಸ್ಥಳಗಳಲ್ಲಿ ತರಾತುರಿಯಲ್ಲಿ ಶೋಧ ನಡೆಸಿದ್ದಾರೆ. ಆದರೆ ಈ ವೇಳೆ ಅವರು ನಡೆದುಕೊಂಡ ರೀತಿ ಸಮಂಜಸಕರವಾಗಿಲ್ಲ ಎಂದು ಗಿಲ್ಡ್ ಹೇಳಿಕೆಯಲ್ಲಿ ತಿಳಿಸಿದೆ.Last Updated 2 ನವೆಂಬರ್ 2022, 19:45 IST