ನಾನು ಸದ್ಯಕ್ಕೆ ಹಸೆಮಣೆ ಏರಲ್ಲ...
ನಟಿ ಕೀರ್ತಿ ಸುರೇಶ್ ಅವರು ಉದ್ಯಮಿಯೊಬ್ಬರ ಜೊತೆಗೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆಯೇ? -ಇದು ಅವರ ಅಭಿಮಾನಿಗಳಿಗೆ ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ. ಇದಕ್ಕೆ ಆಕೆಯೇ ಈಗ ಉತ್ತರ ನೀಡಿದ್ದಾರೆ. ‘ನನ್ನ ಮದುವೆ ಬಗ್ಗೆ ಗಾಳಿಸುದ್ದಿ ಹಬ್ಬಿಸಿದವರು ಯಾರೆಂಬುದು ನನಗೆ ಗೊತ್ತಿಲ್ಲ. ಇದು ನನಗೂ ಅಚ್ಚರಿ ಮೂಡಿಸಿದೆ. ಮದುವೆಯ ವಿಚಾರವೇ ನನ್ನ ಮುಂದಿಲ್ಲ. ಸದ್ಯಕ್ಕೆ ನಾನು ಹಸೆಮಣೆ ಏರಲು ಸಿದ್ಧಳಿಲ್ಲ’ ಎಂದಿದ್ದಾರೆ ಕೀರ್ತಿ.Last Updated 7 ಏಪ್ರಿಲ್ 2020, 13:48 IST