ಕಡಪ: ತಮಿಳುನಾಡಿನ ಶಂಕಿತ ರಕ್ತ ಚಂದನ ಕಳ್ಳಸಾಗಣೆದಾರರು ಸಜೀವ ದಹನ
ಕಡಪಾ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಮೂರು ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ತಮಿಳುನಾಡು ಮೂಲದ ಐವರು ಶಂಕಿತ ರಕ್ತ ಚಂದನ ಕಳ್ಳಸಾಗಣೆದಾರರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳಸಾಗಣೆದಾರರು ತೆರಳುತ್ತಿದ್ದ ಎಸ್‌ಯುವಿ ವಾಹನವು ಎದುರಿನಿಂದ ಬರುತ್ತಿದ್ದ ಟಿಪ್ಪರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಂಧನ ತುಂಬಿದ್ದ ಟ್ಯಾಂಕ್‌ಗೆ ಬೆಂಕಿ ಹೊತ್ತಿಕೊಂಡು ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.Last Updated 2 ನವೆಂಬರ್ 2020, 14:39 IST