ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Team Cauvery

ADVERTISEMENT

ಮಹಿಳಾ ಟ್ವೆಂಟಿ–20 ಲೀಗ್: ವೇದಾ ಅರ್ಧಶತಕ, ಟೀಂ ಕಾವೇರಿ ಶುಭಾರಂಭ

ಬೆಂಗಳೂರು: ಅಂತರರಾಷ್ಟ್ರೀಯ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರ ಅಮೋಘ ಅರ್ಧಶತಕದ ಬಲದಿಂದ ಟೀಮ್ ಕಾವೇರಿ ತಂಡವು ಭಾನುವಾರ ಆರಂಭವಾದ ಒಷಿಯನ್ ವೈಬ್ರೆನ್ಸ್‌ ಮಹಿಳಾ ಟ್ವೆಂಟಿ–20 ಕ್ರಿಕೆಟ್ ಲೀಗ್ (ಡಬ್ಲ್ಯುಸಿಎಲ್) ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಕಾವೇರಿ ತಂಡವು 8 ವಿಕೆಟ್‌ಗಳಿಂದ ಸಿಂಧು ತಂಡವನ್ನು ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಸಿಂಧು ತಂಡವು ಕರುಣಾ ಜೈನ್ (23 ರನ್) ಮತ್ತು ಆದಿಶ್ರೀ ಚೆಂಗಪ್ಪ (22 ರನ್) ಅವರ ಬ್ಯಾಟಿಂಗ್ ಬಲದಿಂದ 20 ಓವರ್‌ಗಳಲ್ಲಿ 108 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಕಾವೇರಿ ತಂಡವು ವೇದಾ (69 ರನ್) ಅವರ ಅಮೋಘ ಬ್ಯಾಟಿಂಗ್‌ನಿಂದಾಗಿ ಸುಲಭ ಜಯ ಸಾಧಿಸಿತು. 16.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 109 ರನ್‌ ಗಳಿಸಿತು.
Last Updated 4 ಆಗಸ್ಟ್ 2019, 19:57 IST
ಮಹಿಳಾ ಟ್ವೆಂಟಿ–20 ಲೀಗ್: ವೇದಾ ಅರ್ಧಶತಕ, ಟೀಂ ಕಾವೇರಿ ಶುಭಾರಂಭ
ADVERTISEMENT
ADVERTISEMENT
ADVERTISEMENT
ADVERTISEMENT