ಬೆಂಗಳೂರು: ಪ್ರತಿಷ್ಠಿತ ಆ್ಯಪಲ್ ಸಂಸ್ಥೆಯು ತನ್ನ ವಾರ್ಷಿಕ ಸಭೆಯಲ್ಲಿ ಐಫೋನ್ 17 ಸರಣಿಯ ಫೋನ್ಗಳು, ಆ್ಯಪಲ್ ವಾಚ್ ಸರಣಿ 11, ವಾಚ್ ಅಲ್ಟ್ರಾ 3, ವಾಚ್ SE ಮತ್ತು ಏರ್ಪಾಡ್ಸ್ ಪ್ರೊ 3 ಬಿಡುಗಡೆ ಮಾಡಿದೆ.

ಈ ವರ್ಷದ ಹೊಸ ಐಫೋನ್ ಶ್ರೇಣಿಯಲ್ಲಿ ಐಫೋನ್ 17, ಐಫೋನ್ 17 ಏರ್, ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಸೇರಿವೆ.

ಐಫೋನ್ ಏರ್ ಮಾದರಿಯು ಹೊಸ ಎಂಟ್ರಿಯಾಗಿದ್ದು, ಹಿಂದಿನ ಪ್ಲಸ್ ಮಾದರಿಗಳಿಗೆ ಪರ್ಯಾಯವಾಗಿದೆ. ಇದು ಅತ್ಯಂತ ತೆಳು ಮತ್ತು ಹಗುರವಾದ ಮಾದರಿಯಾಗಿದೆ. ಐಫೋನ್ 17 ಸರಣಿಗಳಲ್ಲಿ ಅತ್ಯಂತ ಪ್ರಮುಖ ತಂತ್ರಜ್ಞಾನದ ಅಪ್ಗ್ರೇಡ್ಗಳನ್ನು ಕಾಣಬಹುದಾಗಿದೆ. ಪ್ರೊ ಮಾದರಿಗಳು ಇನ್ನಷ್ಟು ವರ್ಧಿತ ವೈಶಿಷ್ಟ್ಯಗಳನ್ನು ಹೊಂದಿರುತ್ತವೆ. ಹೊಸ ಐಫೋನ್ಗಳ ಪೂರ್ವ-ಆರ್ಡರ್ಗಳು ಸೆಪ್ಟೆಂಬರ್ 12ರಂದು ಪ್ರಾರಂಭವಾಗಲಿದ್ದು, ಲಭ್ಯತೆಯು ಸೆಪ್ಟೆಂಬರ್ 19 ಗ್ರಾಹಕರ ಕೈಸೇರಲಿವೆ.

ಆ್ಯಪಲ್ ಐಫೋನ್ 17

ಐಫೋನ್ 17ನಲ್ಲಿ ದೊಡ್ಡ ಹೈಲೆಟ್ ಎಂದರೆ ಪ್ರೋಮೋಶನ್ ಡಿಸ್ಪ್ಲೆ. ಅಂದರೆ, ಇದು 120 ಎಚ್ಜೆಡ್ ರಿಫ್ರೆಶ್ ರೇಟ್ ಸ್ಕ್ರೀನ್ ಹೊಂದಿದೆ. ಪ್ರೊ ಸರಣಿಯಂತೆ ಇದೂ ಸಹ ಕೊಂಚ ಉದ್ದವಾಗಿದ್ದು, 6.3 ಇಂಚು ಇದೆ. ಸೂಪರ್ ರೆಟಿನಾ ಎಚ್ಡಿಆರ್ ಸ್ಕ್ರೀನ್, ಹೊಸದಾದ ಸೆರಾಮಿಕ್ ಶೀಲ್ಡ್–2ನಿಂದ ರಕ್ಷಣೆ ಹೊಂದಿದೆ. ಇದು ಹೆಚ್ಚು ಗಟ್ಟಿಯಾಗಿದ್ದು, ಮೂರು ಪಟ್ಟು ಉತ್ತಮ ಸ್ಕ್ರ್ಯಾಚ್ ನಿರೋಧಕತೆಯನ್ನು ಹೊಂದಿದೆ ಎಂದು ವರದಿ ತಿಳಿಸಿದೆ.

ಐಫೋನ್ 17, A19 ಚಿಪ್ನಿಂದ ಚಾಲಿತವಾಗಿದ್ದು, ಈಗ ಮೂಲ ಮಾದರಿ 256 ಜಿಬಿ ಸಂಗ್ರಹಣಾ ಸಾಮರ್ಥ್ಯದಿಂದ ಪ್ರಾರಂಭವಾಗುತ್ತಿದೆ. ಇದು ಹಿಂದಿನ ಮಾದರಿಗಳಿಗಿಂತ ಎರಡು ಪಟ್ಟು ಎಂಟ್ರಿ ಸ್ಟೋರೇಜ್ ಅನ್ನು ಒದಗಿಸುತ್ತದೆ. ಹೊಸ ಸೆಂಟರ್ ಸ್ಟೇಜ್ ಫ್ರಂಟ್ ಕ್ಯಾಮೆರಾ, ಆಪ್ಟಿಕಲ್-ಗುಣಮಟ್ಟದ 2x ಟೆಲಿಫೋಟೊ ಹೊಂದಿರುವ 48MP ಫ್ಯೂಷನ್ ಮುಖ್ಯ ಕ್ಯಾಮೆರಾ ಮತ್ತು ಮ್ಯಾಕ್ರೊ ಛಾಯಾಗ್ರಹಣವನ್ನು ಬೆಂಬಲಿಸುವ ಹೊಸ 48MP ಫ್ಯೂಷನ್ ಅಲ್ಟ್ರಾ ವೈಡ್ ಕ್ಯಾಮೆರಾವನ್ನು ಹೊಂದಿದೆ.

ಐಫೋನ್ 17 ಐದು ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ: ಬ್ಕ್ಯಾಕ್, ಲ್ಯಾವೆಂಡರ್, ಮಿಸ್ಟ್ ಬ್ಲ್ಯೂ, ಸೇಜ್ ಮತ್ತು ವೈಟ್. ಇದರ ಬೆಲೆ 799 ಅಮೆರಿಕ ಡಾನರ್ನಿಂದ ಪ್ರಾರಂಭವಾಗುತ್ತದೆ.

ಆ್ಯಪಲ್ ಐಫೋನ್ 17 ಏರ್

ಐಫೋನ್ 17 ಏರ್ ಇದುವರೆಗಿನ ಅತ್ಯಂತ ತೆಳುವಾದ ಐಫೋನ್ ಮಾತ್ರವಲ್ಲದೆ ವಿಶ್ವದ ಅತ್ಯಂತ ತೆಳುವಾದ ಸ್ಲಾಬ್-ಶೈಲಿಯ ಫೋನ್ ಆಗಿದೆ. Galaxy S25 ಎಡ್ಜ್ ಮತ್ತು 5.6ಎಂಎಂ ಫ್ರೇಮ್ನೊಂದಿಗೆ 5.8ಎಂಎಂ ಫಾರ್ಮ್ ಫ್ಯಾಕ್ಟರ್ ಹೊಂದಿದೆ. ಸಾಧನದ ಹಿಂಭಾಗವು ಸೆರಾಮಿಕ್ ಶೀಲ್ಡ್ ಅನ್ನು ಹೊಂದಿದೆ, ಮುಂಭಾಗದಲ್ಲಿ ಸೆರಾಮಿಕ್ ಶೀಲ್ಡ್ 2 ಇದೆ. ಏರ್ ಮಾದರಿಯು 120Hzವರೆಗಿನ ಪ್ರೋಮೋಷನ್ನೊಂದಿಗೆ ಸೂಪರ್ ರೆಟಿನಾ XDR ಡಿಸ್ಪ್ಲೇಯನ್ನು ಸಹ ಹೊಂದಿದೆ.

ಡಿಸ್ಪ್ಲೇ ಗಾತ್ರ 6.5 ಇಂಚುಗಳಾಗಿದ್ದು. ಹೊಸ ತೆಳುವಾದ ಮತ್ತು ತಿಳಿ ಟೈಟಾನಿಯಂ ಐಫೋನ್ A19 Pro, N1 ಮತ್ತು C1X ಚಿಪ್ಗಳನ್ನು ಹೊಂದಿದೆ. ಈ ಸಾಧನವು ಹಿಂಭಾಗದಲ್ಲಿ ಒಂದೇ 48MP ಫ್ಯೂಷನ್ ಮುಖ್ಯ ಕ್ಯಾಮೆರಾ ಮತ್ತು 18MP ಸೆಂಟರ್ ಸ್ಟೇಜ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಐಫೋನ್ 17 ಏರ್ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ: ಸ್ಪೇಸ್ ಬ್ಲ್ಯಾಕ್, ಕ್ಲೌಡ್ ವೈಟ್, ಲೈಟ್ ಗೋಲ್ಡ್ ಮತ್ತು ಸ್ಕೈ ಬ್ಲೂ. 256 ಜಿಬಿ ಸಂಗ್ರಹಣಾ ಸಾಮರ್ಥ್ಯದ ಈ ಮಾದರಿಯ ಐಫೋನ್ ಅಮೆರಿಕದಲ್ಲಿ 999 ಡಾಲರ್ನಿಂದ ಪ್ರಾರಂಭವಾಗುತ್ತದೆ.

ಆ್ಯಪಲ್ ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್

ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಆ್ಯಪಲ್ ವಿನ್ಯಾಸಗೊಳಿಸಿದ ವಾಪೌರ್ ಚೇಂಬರ್ನೊಂದಿಗೆ ಹೊಸ A19 ಪ್ರೊ ಚಿಪ್ ಅನ್ನು ಹೊಂದಿವೆ. ಎರಡೂ ಫೋನ್ಗಳು ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಬ್ಯಾಟರಿ ಬಾಳಿಕೆಯಲ್ಲಿ ಬಹಳ ಅಪ್ಗ್ರೇಡ್ ಅನ್ನು ನೀಡುತ್ತವೆ ಎಂದು ತಂತ್ರಜ್ಞಾನ ದೈತ್ಯ ಸಂಸ್ಥೆ ಆಆ್ಯಪಲ್ ಹೇಳಿದೆ. ಎರಡೂ ಸಾಧನಗಳು ಮುಖ್ಯ ಕ್ಯಾಮೆರಾ ಸೇರಿ ಹಿಂಭಾಗದಲ್ಲಿ ಮೂರು 48MP ಫ್ಯೂಷನ್ ಕ್ಯಾಮೆರಾಗಳನ್ನು ಹೊಂದಿವೆ, ಇದರಲ್ಲಿ ಅಲ್ಟ್ರಾ ವೈಡ್ ಮತ್ತು ಪ್ರೊ ಮಾದರಿಗಳಲ್ಲಿ 8x ಜೂಮ್ ಅನ್ನು ಸಕ್ರಿಯಗೊಳಿಸುವ ಹೊಚ್ಚ ಹೊಸ ಟೆಲಿಫೋಟೊ ಸಹ ಇದೆ. 18MP ಸೆಂಟರ್ ಸ್ಟೇಜ್ ಫ್ರಂಟ್ ಕ್ಯಾಮೆರಾವನ್ನು ಸಹ ಹೊಂದಿವೆ.

ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಚಲನಚಿತ್ರ ನಿರ್ಮಾಪಕರು ಮತ್ತು ಕಂಟೆಂಟ್ ಕ್ರಿಯೇಟರ್ಗಳಿಗಾಗಿ ನಿರ್ಮಿಸಲಾದ ಇಂಡಸ್ಟ್ರೀ ಫಸ್ಟ್ ವಿಡಿಯೊ ವೈಶಿಷ್ಟ್ಯಗಳನ್ನು ಹೊಂದಿವೆ. ಇದರಲ್ಲಿ ಪ್ರೊರೆಸ್ ರಾ, ಆ್ಯಪಲ್ ಲಾಗ್ 2 ಮತ್ತು ಜೆನ್ಲಾಕ್ ಸೇರಿವೆ. ಎರಡೂ ಮಾದರಿಯ ಐಫೋನ್ಗಳು ಹಿಂಭಾಗದಲ್ಲಿ ಸೆರಾಮಿಕ್ ಶೀಲ್ಡ್ ಮತ್ತು ಮುಂಭಾಗದಲ್ಲಿ ಸೆರಾಮಿಕ್ ಶೀಲ್ಡ್ 2 ಅನ್ನು ಸಹ ಹೊಂದಿವೆ.

ಎರಡೂ ಮಾದರಿಗಳು ಮೂರು ಬಣ್ಣದ ಆಯ್ಕೆಗಳಲ್ಲಿ ಬರುತ್ತವೆ: ಡೀಪ್ ನೀಲಿ, ಕಾಸ್ಮಿಕ್ ಆರೆಂಜ್ ಮತ್ತು ಸಿಲ್ವರ್. 256ಜಿಬಿಯ ಮೂಲ ಮಾದರಿಯ ಐಫೋನ್ 17 ಪ್ರೊo 1,099 ಅಮೆರಿಕ ಡಾಲರ್ನಿಂದ ಪ್ರಾರಂಭವಾಗುತ್ತದೆ, 256ಜಿಬಿ ಸ್ಓರೇಜ್ ಸಾಮರ್ಥ್ಯದ ಮೂಲ ಮಾದರಿಯ ಐಫೋನ್ 17 ಪ್ರೊ ಮ್ಯಾಕ್ಸ್ 1,199 ಅಮೆರಿಕ ಡಾಲರ್ನಿಂದ ಪ್ರಾರಂಭವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.