ಭಾನುವಾರ, ಏಪ್ರಿಲ್ 2, 2023
32 °C
ಆ್ಯಪಲ್ ಉತ್ಪನ್ನಗಳಿಗೆ ಭಾರತದಲ್ಲಿ ಆಫರ್ ಘೋಷಿಸಿದ ಕಂಪನಿ

Apple | ಐಫೋನ್, ಮ್ಯಾಕ್, ಐಪ್ಯಾಡ್‌ಗೆ ವಿಶೇಷ ಡಿಸ್ಕೌಂಟ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರೀಮಿಯಂ ಗ್ಯಾಜೆಟ್ ಬ್ರ್ಯಾಂಡ್ ಆ್ಯಪಲ್, ದೇಶದಲ್ಲಿ ಆ್ಯಪಲ್ ಉತ್ಪನ್ನಗಳ ಮೇಲೆ ವಿಶೇಷ ಡಿಸ್ಕೌಂಟ್ ಪ್ರಕಟಿಸಿದೆ. ಆ್ಯಪಲ್ ಆನ್‌ಲೈನ್ ಸ್ಟೋರ್‌ನಲ್ಲಿ ಮಾತ್ರ ಈ ಆಫರ್ ಇರಲಿವೆ.

ಐಫೋನ್ ಆಫರ್
ಆ್ಯಪಲ್ ಐಫೋನ್ 14 ಸರಣಿ ಖರೀದಿಸುವ ಗ್ರಾಹಕರಿಗೆ ₹7,000 ವರೆಗೆ ಇನ್‌ಸ್ಟಂಟ್ ಡಿಸ್ಕೌಂಟ್ ಲಭ್ಯವಾಗಲಿದೆ. ಐಫೋನ್ 14, 14 ಪ್ಲಸ್ ಮತ್ತು ಐಫೋನ್ 14 ಪ್ರೊ ಹಾಗೂ ಐಫೋನ್ 14 ಪ್ರೊ ಮ್ಯಾಕ್ಸ್ ಖರೀದಿಸುವ ಗ್ರಾಹಕರು, ಈ ಕೊಡುಗೆಗಳ ಪ್ರಯೋಜನ ಪಡೆಯಲಿದ್ದಾರೆ.

ಉಳಿದಂತೆ, ಐಫೋನ್ ಅಪ್‌ಗ್ರೇಡ್ ಪ್ಲ್ಯಾನ್ ಆಯ್ದುಕೊಳ್ಳುವ ಗ್ರಾಹಕರಿಗೆ ₹12,000 ವರೆಗೆ ಇನ್‌ಸ್ಟಂಟ್ ಸೇವಿಂಗ್ಸ್, ಮತ್ತು ಹಳೆಯ ಐಫೋನ್ ಎಕ್ಸ್‌ಚೇಂಜ್‌ಗೆ ಹೆಚ್ಚುವರಿ ₹5,000ವರೆಗೆ ಡಿಸ್ಕೌಂಟ್ ಕೊಡುಗೆಗಳು ದೊರೆಯಲಿವೆ ಎಂದು ಆ್ಯಪಲ್ ಹೇಳಿದೆ.

ಐಪ್ಯಾಡ್ ಖರೀದಿಗೆ ವಿವಿಧ ಮಾದರಿಗೆ ಅನುಗುಣವಾಗಿ, ₹5,000 ವರೆಗೆ ಡಿಸ್ಕೌಂಟ್ ಪ್ರಯೋಜನ ದೊರೆಯಲಿದೆ. ಆ್ಯಪಲ್ ಆನ್‌ಲೈನ್ ಸ್ಟೋರ್‌ನಲ್ಲಿ ಈ ಕೊಡುಗೆ ಲಭ್ಯ ಎಂದು ಕಂಪನಿ ತಿಳಿಸಿದೆ.

ಉಳಿದಂತೆ, ಆ್ಯಪಲ್ ಮ್ಯಾಕ್‌ಬುಕ್ ಏರ್ ಮತ್ತು ಮ್ಯಾಕ್‌ಬುಕ್ ಪ್ರೊ ಖರೀದಿಗೂ ಇನ್‌ಸ್ಟಂಟ್ ಡಿಸ್ಕೌಂಟ್, ಎಚ್‌ಡಿಎಫ್‌ಸಿ ಕ್ಯಾಶ್‌ಬ್ಯಾಕ್ ಪ್ರಯೋಜನ ಕೊಡುಗೆಗಳು ಲಭ್ಯವಾಗಲಿದೆ. ಆ್ಯಪಲ್ ವಾಚ್, ಏರ್‌ಪಾಡ್ಸ್ ಖರೀದಿಗೂ ಆಫರ್ ಇದೆ ಆ್ಯಪಲ್ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು