ಭಾನುವಾರ, ಆಗಸ್ಟ್ 1, 2021
27 °C

ಐಫೋನ್‌ 12 5ಜಿ ಮೊಬೈಲ್‌ಗೆ ಒಎಲ್ಇಡಿ ಡಿಸ್‌ಪ್ಲೇ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

Prajavani

ಮಾರುಕಟ್ಟೆಗೆ ಬರುವ ಮುಂಚೆಯೇ ಕುತೂಹಲ ಕೆರಳಿಸಿರುವ ಐಫೋನ್‌ 12 ಸರಣಿ ಮೊಬೈಲ್‌ಗಳ ಜತೆಗೆ 5ಜಿ ನೆಟ್‌ವರ್ಕ್‌ ಬೆಂಬಲಿಸುವ ಐಫೋನ್‌ 12 5ಜಿ ಮಾಡೆಲ್‌ ಕೂಡ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ವಿಶೇಷವೆಂದರೆ, ಐಫೋನ್‌ 12 5ಜಿ ಮಾಡೆಲ್‌ಗಳಿಗೆ ಒಎಲ್ಇಡಿ ಡಿಸ್‌ಪ್ಲೇ ಬಳಸುವ ಸುಳಿವನ್ನು ಆ್ಯಪಲ್‌ ಸಂಸ್ಥೆ ನೀಡಿದೆ. ಹಾಗಾಗಿ 5ಜಿ ಫೋನ್‌ಗಳ ಬೆಲೆ ಕೊಂಚ ದುಬಾರಿಯಾಗುವ ಸಾಧ್ಯತೆ ಇದೆ. ಐಫೋನ್‌ 12 ಸರಣಿಯ ನಾಲ್ಕು ಮಾಡೆಲ್‌ಗಳನ್ನು ಇದೇ ವರ್ಷ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಕಂಪನಿ ಹೇಳಿದೆ.

ಒಎಲ್‌ಇಡಿ ಡಿಸ್‌ಪ್ಲೇ ತಂತ್ರಜ್ಞಾನಕ್ಕೆ ಆ್ಯಪಲ್‌ ಕಂಪನಿ ಗಮನ ಹರಿಸಿದ ಕಾರಣ, ಐಫೋನ್‌ 12 ಹೊಸ ಸರಣಿಯಲ್ಲಿ ಮುಖದ ಚಹರೆ ಗುರುತಿಸುವ(ಫೇಸ್ ಐ.ಡಿ) ಫೀಚರ್ ಇರುವುದಿಲ್ಲ ಎಂದು ಹೇಳಲಾಗುತ್ತಿದೆ. ಮೊಬೈಲ್‌ ಬಳಕೆದಾರರ ಮುಖವನ್ನು ಗುರುತಿಸಿ ಲಾಕ್‌, ಅನ್‌ಲಾಕ್‌ ಮಾಡುವುದು ಫೇಸ್ ಐ.ಡಿ ಫೀಚರ್‌ ವೈಶಿಷ್ಟ್ಯವಾಗಿದೆ. ಐಫೋನ್‌ 12 ಸರಣಿ ಮೊಬೈಲ್‌ಗಳು ಫೇಸ್‌ ಐ.ಡಿ ಫೀಚರ್‌ ಜತೆ ಬರಬಹುದು ಎಂಬುವುದು ಐಫೋನ್‌ ಪ್ರಿಯರು ನಿರೀಕ್ಷೆಯಾಗಿತ್ತು.

ಆ್ಯಪಲ್‌ ಕಂಪನಿ ಹೊಸ ಸರಣಿಯ ಐಫೋನ್‌ ಸರಣಿಯಲ್ಲಿ ಎಲ್‌ಟಿಇ ತಂತ್ರಜ್ಞಾನ ಅಳವಡಿಸುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಐಫೋನ್ 12 ಸರಣಿಯ ಫೋನ್‌ಗಳು ಮೊದಲಿನಂತೆ ಎಲ್‌ಸಿಡಿ ಡಿಸ್‌ಪ್ಲೇ ಮತ್ತು ಎಲ್‌ಟಿಇ ಫೀಚರ್‌ನೊಂದಿಗೆ ಮಾರುಕಟ್ಟೆಗೆ ಬರಲಿವೆ.  

ಐಫೋನ್‌ಗಳಲ್ಲಿ ಬಳಸುವ ಎಲ್‌ಸಿಡಿ ಡಿಸ್‌ಪ್ಲೇಗಳಿಗಿಂತ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಬಳಸುವ ಎಎಮ್‌ಒಎಲ್‌ಇಡಿ (ಅಮೋಲ್ಡ್‌) ಡಿಸ್‌ಪ್ಲೇ ಹೆಚ್ಚು ಪರಿಣಾಮಕಾರಿ ಮತ್ತು ಅಗ್ಗವಾಗಿವೆ. ಒಎಲ್‌ಇಡಿ ಡಿಸ್‌ಪ್ಲೇ ಬಿಡಿಭಾಗಗಳನ್ನು ಸ್ಯಾಮ್ಸಂಗ್‌ ಬದಲು ಚೀನಾದ ಬಿಒಇ ಟೆಕ್‌ ಕಂಪನಿಯಿಂದ ಖರೀದಿಸಲು ಆ್ಯಪಲ್‌ ಚಿಂತನೆ ನಡೆಸಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು