ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾಟ್ ಸಂದೇಶಗಳ ಮೇಲೆ ಕಣ್ಗಾವಲು

Last Updated 9 ಮೇ 2020, 2:35 IST
ಅಕ್ಷರ ಗಾತ್ರ

ವಾಟ್ಸ್ಆ್ಯಪ್‌ಗಿಂತ ಮೊದಲು ದೇಶದಲ್ಲೂ ಜನಪ್ರಿಯವಾಗಿದ್ದ ವಿ-ಚಾಟ್ ಎಂಬ ಸಂದೇಶ ಸಂವಹನ ಆ್ಯಪ್‌ಗೆ ಈಗ ಜಗತ್ತಿನಾದ್ಯಂತ ನೂರು ಕೋಟಿ ಬಳಕೆದಾರರಿದ್ದಾರೆ. ಚೀನಾ ಮೂಲದ ಈ ಆ್ಯಪ್, ಚೀನಾದ ಹೊರಗಿನ ಬಳಕೆದಾರರು ಹಂಚಿಕೊಳ್ಳುವ ಡಾಕ್ಯುಮೆಂಟ್‌ಗಳು ಮತ್ತು ಚಿತ್ರಗಳನ್ನು ಮಾನಿಟರ್ ಮಾಡುತ್ತಿದೆ ಎಂಬ ಅಂಶ ಬಯಲಾಗಿದೆ.

ಅಂತರಜಾಲ ದಿಗ್ಗಜ ಕಂಪನಿಯಾಗಿರುವ ಟೆನ್ಸೆಂಟ್ ಬೆಂಬಲಿತ ವಿಚಾಟ್, ತನ್ನ ಅಂತರರಾಷ್ಟ್ರೀಯ ಬಳಕೆದಾರರ ಮೇಲೆ ಗುಪ್ತವಾಗಿ ಹದ್ದಿನ ಕಣ್ಣಿರಿಸಿದ್ದು, ಜನರು ಹಂಚಿಕೊಳ್ಳುವ ಫೈಲ್‌ಗಳನ್ನು ತಪಾಸಣೆಗೊಳಪಡಿಸುತ್ತಿದೆ ಎಂದು ಇತ್ತೀಚೆಗೆ ವಾಟ್ಸ್ಆ್ಯಪ್‌ನಲ್ಲಿ ಪೆಗಾಸಸ್ ವೈರಸ್ ದಾಳಿ ಬಗ್ಗೆ ಎಚ್ಚರಿಕೆ ನೀಡಿದ್ದ ಸಂಶೋಧನಾ ತಂಡ ‘ಸಿಟಿಜನ್ ಲ್ಯಾಬ್’ ಅಧ್ಯಯನ ವರದಿಯೊಂದರಲ್ಲಿ ತಿಳಿಸಿದೆ.

ಚೀನಾದ ವಿಚಾಟ್ ಬಳಕೆದಾರರು ಹಂಚಿಕೊಳ್ಳುತ್ತಿರುವ ವಿಷಯ ಮತ್ತು ಫೈಲ್‌ಗಳನ್ನು ಈಗಾಗಲೇ ಸೆನ್ಸಾರ್ ಮಾಡಲಾಗುತ್ತಿದೆ. ಆದರೆ, ಚೀನಾ ಹೊರಗಿನ ದೇಶದವರ ವಿಷಯಗಳನ್ನು ಸದ್ಯಕ್ಕೆ ಮಾನಿಟರ್ ಮಾಡಲಾಗುತ್ತಿದೆಯಷ್ಟೇ ಎಂದು ವರದಿಯಲ್ಲಿ ತಿಳಿಸಲಾಗಿದೆ.

'ರಾಜಕೀಯವಾಗಿ ಸೂಕ್ಷ್ಮ' ಎನಿಸುವ ವಿಷಯಗಳನ್ನು ಚೀನಾದಲ್ಲಿ ಈಗಾಗಲೇ ಸೆನ್ಸಾರ್ ಮಾಡಲಾಗುತ್ತಿದೆ ಎಂದು ಟೊರಂಟೋ ಯುನಿವರ್ಸಿಟಿಯ ಸುರಕ್ಷತಾ ಸಂಶೋಧನಾ ತಂಡ 'ಸಿಟಿಜನ್ ಲ್ಯಾಬ್'ನ ಸಂಶೋಧಕರು ತಮ್ಮ 'ವಿ ಚಾಟ್, ದೇ ವಾಚ್' ಎಂಬ ಅಧ್ಯಯನ ವರದಿಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT