ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಂಗ್‌ನಲ್ಲಿ ಕೋವಿಡ್ ಟ್ರ್ಯಾಕರ್

Last Updated 13 ಮೇ 2020, 19:30 IST
ಅಕ್ಷರ ಗಾತ್ರ

ಸಾಂಕ್ರಾಮಿಕ ಕೊರೊನಾ ವೈರಸ್‌ ಸೋಂಕು ಕುರಿತಾದ ಇತ್ತೀಚಿನ ಸುದ್ದಿಗಳನ್ನು ತಿಳಿಯಲು ಸಹಕಾರಿಯಾಗುವಂತೆ ಮೈಕ್ರೊಸಾಫ್ಟ್‌ ಕಂಪನಿಯ‌ ಬಿಂಗ್ ಸರ್ಚ್ ಎಂಜಿನ್‌ನಲ್ಲಿ ಕೋವಿಡ್‌–19 ಟ್ರ್ಯಾಕರ್ ಲಭ್ಯವಿದೆ. ಜಗತ್ತಿನ ಎಲ್ಲೆಡೆಯಿಂದ ಕೋವಿಡ್ ಕುರಿತು ವಿಶ್ವಾಸಾರ್ಹ ಮಾಹಿತಿಯನ್ನು ಇದು ಒದಗಿಸುತ್ತಿದೆ.

ದೇಶದ ಜನರಿಗೆ ಈ ಪಿಡುಗಿನ ಬಗ್ಗೆ ಪ್ರಮುಖ ಮಾಹಿತಿಗಳನ್ನು ಸ್ಥಳೀಯ ಭಾಷೆಯಲ್ಲಿ ಒದಗಿಸುವ ನಿಟ್ಟಿನಲ್ಲಿ ಈ ಟ್ರ್ಯಾಕರ್‌ ಈಗ ಕನ್ನಡ ಸೇರಿದಂತೆಒಂಬತ್ತು ಭಾರತೀಯ ಭಾಷೆಗಳಲ್ಲಿ ಮಾಹಿತಿ ಒದಗಿಸುತ್ತಿದೆ.

ಬಿಂಗ್ ಕೋವಿಡ್–19 ಟ್ರ್ಯಾಕರ್‌ ಈಗ ಸುದ್ದಿಯ ಮತ್ತು ಅಧಿಕೃತ ಸರ್ಕಾರಿ ಮಾಹಿತಿಯ ಒಂದು ಏಕೀಕೃತ ಮೂಲವಾಗಿದೆ. ವಿಶ್ವಮಟ್ಟ ಮತ್ತು ಭಾರತದಲ್ಲಿ (www.bing.com/covid/local/india) ರಾಜ್ಯ ಮತ್ತು ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳು, ಚೇತರಿಕೆ ಹಾಗೂ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ, ಅಂಕಿ–ಅಂಶಗಳನ್ನು ತಿಳಿಯಬಹುದು.

ಒಂದೇ ಜಾಗದಲ್ಲಿ ತಮ್ಮ ಪ್ರೀತಿಪಾತ್ರರು ಇರುವ ಸ್ಥಳಗಳಲ್ಲಿ ಅಂಕಿ–ಅಂಶಗಳ ಅಪ್‌ಡೇಟ್‌ ನೋಡಲು ಆ ಸ್ಥಳಗಳನ್ನು ಸೇವ್ ಮಾಡಬಹುದು.ಟ್ರ್ಯಾಕರ್‌, ಸಹಾಯವಾಣಿ ಸಂಖ್ಯೆಗಳು ಮತ್ತು ಪರೀಕ್ಷೆ ಕೇಂದ್ರಗಳ ಬಗ್ಗೆ ಮಾಹಿತಿಯೂ ಇಲ್ಲಿರುತ್ತದೆ. ಇದರಲ್ಲಿ ಭಾರತ ಸರ್ಕಾರ, ಐಸಿಎಂಆರ್ ಮಾಹಿತಿಗಳೂ ಸೇರಿವೆ. ಇದಲ್ಲದೆ, ಬಳಕೆದಾರರು ಇತ್ತೀಚಿನ ಸುದ್ದಿಗಳನ್ನೂ ಪಡೆಯಬಹುದು. ರಾಷ್ಟ್ರೀಯ ಮತ್ತು ಸ್ಥಳೀಯ ಸುದ್ದಿಗಳು, ಅಲ್ಲಿನ ಪರಿಸ್ಥಿತಿ, ಅಗ್ರ ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಾಧ್ಯಮಗಳಿಂದ ಲೈವ್ ಫೀಡ್‌ಗಳನ್ನೂ ಪಡೆಯಬಹುದು. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT