ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್‌ನಿಂದ 5ಜಿ ಫೋನ್‌ ಅನಾವರಣ: ಪಿಕ್ಸೆಲ್‌ 5, ಪಿಕ್ಸೆಲ್‌ 4ಎ ಬಿಡುಗಡೆ

Last Updated 1 ಅಕ್ಟೋಬರ್ 2020, 8:32 IST
ಅಕ್ಷರ ಗಾತ್ರ

ವಾಷಿಂಗ್ಟನ್‌: 5ಜಿ ತಂತ್ರಜ್ಞಾನ ಸಾಮರ್ಥ್ಯ ಅಳವಡಿಸಿಕೊಂಡಿರುವ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಗೂಗಲ್‌ 'ಪಿಕ್ಸೆಲ್‌' ಬ್ರ್ಯಾಂಡ್‌ನ ಅಡಿಯಲ್ಲಿ ಬುಧವಾರ ಅನಾವರಣಗೊಳಿಸಿದೆ.

ಆ್ಯಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆ ಒಳಗೊಂಡಿರುವ 'ಪಿಕ್ಸೆಲ್‌ 5' ಮತ್ತು 'ಪಿಕ್ಸೆಲ್‌ 4ಎ' 5ಜಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಪಿಕ್ಸೆಲ್‌ 5 ಆರಂಭಿಕ ಬೆಲೆ 699 ಡಾಲರ್‌ (ಅಂದಾಜು ₹51,000) ಹಾಗೂ ಪಿಕ್ಸೆಲ್‌ 4ಎ ಬೆಲೆ 499 ಡಾಲರ್‌ (ಅಂದಾಜು ₹36,500) ನಿಗದಿಯಾಗಿದೆ.

ಅಕ್ಟೋಬರ್‌ 15ರಿಂದ ಹೊಸ ಗೂಗಲ್‌ ಫೋನ್‌ಗಳು ಖರೀದಿಗೆ ಸಿಗಲಿವೆ. '5ಜಿ ವೇಗ ಮತ್ತು ಗೂಗಲ್‌ನ ಮತ್ತಷ್ಟು ಅನುಕೂಲಕರ ಸೌಲಭ್ಯಗಳನ್ನು ಹೊಸ ಸ್ಮಾರ್ಟ್‌ಫೋನ್‌ಗಳು ಒಳಗೊಂಡಿವೆ' ಎಂದು ಗೂಗಲ್‌ ವೈಸ್‌ ಪ್ರೆಸಿಡೆಂಟ್‌ ಬ್ರಯಾನ್‌ ರಕೌಸ್ಕಿ ಹೇಳಿದ್ದಾರೆ.

5ಜಿ ಫೋನ್‌ಗಳ ಪೈಪೋಟಿಯಲ್ಲಿ ಆ್ಯಪಲ್‌ಗಿಂತಲೂ ಮುಂಚೆಯೇ ಗೂಗಲ್‌ ಹೊಸ ಫೋನ್‌ ಬಿಡುಗಡೆ ಮಾಡಿರುವುದು, ಆ್ಯಪಲ್‌ 5ಜಿ ಐಫೋನ್‌ನನ್ನು ಸ್ಪರ್ಧಾತ್ಮಕ ಬೆಲೆಗೆ ಅನಾವರಣಗೊಳಿಸುವ ಸಾಧ್ಯತೆ ಸೃಷ್ಟಿಸಿದೆ. ಅದ್ಭುತ ಕ್ಯಾಮೆರಾ ಮತ್ತು ಕೃತಕ ಬುದ್ಧಿಮತ್ತೆ (ಎಐ) ವ್ಯವಸ್ಥೆಯಿಂದಾಗಿ ಗೂಗಲ್‌ನ ಪಿಕ್ಸೆಲ್‌ ಗುರುತಿಸಿಕೊಂಡಿದೆ. ಆದರೆ, ಜಾಗತಿಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್‌, ಅಮೆರಿಕದ ಆ್ಯಪಲ್‌ ಹಾಗೂ ಚೀನಾದ ವಾವೇ (Huawei)ಫೋನ್‌ಗಳನ್ನು ಹಿಂದಿಡಲು ಸಾಧ್ಯವಾಗಿಲ್ಲ.

ಐಡಿಸಿ ಸಂಶೋಧನಾ ಸಂಸ್ಥೆಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಒಟ್ಟು ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಶೇ 16ರಷ್ಟು ಇಳಿಕೆಯಾಗಿದೆ. ವಾವೇ ಮಾರಾಟದಲ್ಲಿ ಮುಂದಿದ್ದು, ಸ್ಯಾಮ್‌ಸಂಗ್‌ ಎರಡನೇ ಸ್ಥಾನದಲ್ಲಿದೆ.

ಗೂಗಲ್‌ ಟಿವಿ ಪ್ಲಾಟ್‌ಫಾರ್ಮ್‌ ಸಹ ಪ್ರಕಟಿಸಲಾಗಿದ್ದು, ಅಮೆಜಾನ್‌ ಫೈರ್‌ ಟಿವಿಗೆ ಸ್ಪರ್ಧೆಯೊಡ್ಡಬಹುದಾಗಿದೆ. ಸಿನಿಮಾಗಳು, ಟಿವಿ ಶೋಗಳು, ಲೈವ್‌ ಟಿವಿ ಸೇರಿದಂತೆ ಇನ್ನಷ್ಟು ಕಾರ್ಯಕ್ರಮಗಳನ್ನು ಮೊಬೈಲ್‌ ಆ್ಯಪ್‌ಗಳ ಮೂಲಕ ಗೂಗಲ್‌ ಟಿವಿ ಒಟ್ಟುಗೂಡಿಸಲಿದೆ. ಗೂಗಲ್‌ ನೆಸ್ಟ್‌ ಆಡಿಯೊ ಸ್ಮಾರ್ಟ್‌ ಸ್ಪೀಕರ್‌ ಸಹ ಬಿಡುಗಡೆ ಮಾಡಿದೆ.

ಪಿಕ್ಸೆಲ್‌ 4ಎ–5ಜಿ ಸ್ಮಾರ್ಟ್‌ಫೋನ್‌ ಗುಣಲಕ್ಷಣಗಳು:

* ಡಿಸ್‌ಪ್ಲೇ: 6.2 ಇಂಚು; ಎಫ್‌ಎಚ್‌ಡಿ+ಒಎಲ್‌ಇಡಿ ಸ್ಕ್ರೀನ್‌
* ಸಾಮರ್ಥ್ಯ: 6ಜಿಬಿ ರ್‍ಯಾಮ್+128ಜಿಬಿ ಸಂಗ್ರಹ
* ಪ್ರೊಸೆಸರ್‌: ಕ್ವಾಲ್‌ಕಾಮ್‌ ಸ್ನ್ಯಾಪ್‌ಡ್ರ್ಯಾಗನ್‌ 765ಜಿ
* ಕ್ಯಾಮೆರಾ: 12ಎಂಪಿ ಡ್ಯೂಯಲ್‌ ಪಿಕ್ಸೆಲ್‌ + 16ಎಂಪಿ ಅಲ್ಟ್ರಾವೈಡ್‌; ಸೆಲ್ಫಿಗಾಗಿ 8ಎಂಪಿ ಲೆನ್ಸ್‌
* ಬ್ಯಾಟರಿ: 3885ಎಂಎಎಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT