ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ಬಳಕೆಗೆ ‘ಎಚ್‌ಪಿ ಸ್ಮಾರ್ಟ್‌ ಟ್ಯಾಂಕ್‌ 530’

Last Updated 16 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಎಚ್‌ಪಿ ಕಂಪನಿಯು ವೈಯಕ್ತಿಕ ಮತ್ತು ಉದ್ಯಮ ಬಳಕೆಗೆ ಅಗತ್ಯವಾದ ಹಲವು ಬಗೆಯ ಪ್ರಿಂಟರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಕೈಗೆಟಕುವ ಬೆಲೆಗೆ ಗುಣಮಟ್ಟದ ಪ್ರಿಂಟರ್‌ ನೀಡುವಲ್ಲಿ ಕಂಪನಿ ಹೆಚ್ಚು ಗಮನ ಹರಿಸುತ್ತಿದೆ. ಎಚ್‌ಪಿ ಸ್ಮಾರ್ಟ್‌ ಟ್ಯಾಂಕ್‌ 530 ವಯರ್‌ಲೆಸ್‌ ಆಲ್‌–ಇನ್‌–ಒನ್ ಪ್ರಿಂಟರ್‌ ಈ ಸಾಲಿಗೆ ಸೇರಿದೆ. ಇದರ ಬೆಲೆ ₹ 16,949.

ಮನೆಯಿಂದ ಕೆಲಸ ಮತ್ತು ಕಚೇರಿ ಕೆಲಸಗಳಿಗೆ ಉಪಯೋಗ ಆಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.ವೈಯರ್‌ಲೆಸ್‌ ಪ್ರಿಂಟ್‌, ಕಾಪಿ, ಸ್ಕ್ಯಾನ್‌ ಮತ್ತು ಎಡಿಎಫ್‌ ಆಯ್ಕೆಗಳು ಇದರಲ್ಲಿವೆ. ಸೆನ್ಸರ್‌ ಆಧಾರದ ಮೇಲೆ ಇಂಕ್‌ ಟ್ಯಾಂಕ್‌ ಕಾರ್ಯನಿರ್ವಹಿಸುತ್ತದೆ. ಇಂಕ್‌ ಮುಗಿಯುವ ಮುನ್ನ ಬಳಕೆದಾರರನ್ನು ಎಚ್ಚರಿಸುತ್ತದೆ. ಅಲ್ಲದೆ, ಇಂಕ್‌ ಎಷ್ಟು ಪ್ರಮಾಣದಲ್ಲಿದೆ ಎನ್ನುವುದು ಹೊರಭಾಗಕ್ಕೆ ಕಾಣುವ ವ್ಯವಸ್ಥೆ ಇದರಲ್ಲಿದೆ. ರೀಫಿಲ್‌ ಸಹ ಸುಲಭ.

ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ ಜತೆ ಯುಎಸ್‌ಬಿ ಕೇಬಲ್ ಮೂಲಕ ಸಂಪರ್ಕಿಸುವ ಆಯ್ಕೆ ಇದೆಯಾದರೂ, ವೈಫೈ ಆಯ್ಕೆಹೆಚ್ಚು ಸುಲಭವಾಗಿದೆ. ಎಚ್‌ಪಿ ಸ್ಮಾರ್ಟ್‌ ಆ್ಯಪ್ ಮೂಲಕ ಪ್ರಿಂಟರ್‌ನೊಂದಿಗೆ ಸಂಪರ್ಕ ಸಾಧಿಸಲು ತುಸು ಕಷ್ಟಪಡಬೇಕಾಗುತ್ತದೆ. ಬ್ಲೂಟೂತ್‌ ಎಲ್‌ಇ, ಡ್ಯುಯಲ್‌ ವೈಫೈಗೂ ಬೆಂಬಲಿಸುತ್ತದೆ.

5.59 ಸಿಎಂ ಮೊನೊ ಟಚ್ ಸ್ಕ್ರೀನ್‌ ಇದ್ದು, ಇದರ ಸಂವೇದನೆ ತುಸು ನಿಧಾನವಾಗಿದೆ. ಪ್ರಿಂಟಿಂಗ್‌ ರೆಸಲ್ಯೂಷನ್‌ ಬ್ಲಾಕ್‌ ಆ್ಯಂಡ್ ವೈಟ್‌ಗೆ 1200 x 1200ಡಿಪಿಐ ಹಾಗೂ ಕಲರ್‌ಗೆ4800 x 1200ಡಿಪಿಐ ಇದೆ. ಸ್ಕ್ಯಾನ್‌ ರೆಸಲ್ಯೂಷನ್‌ 1200 x 1200 ಡಿಪಿಐ ಇದೆ. 6 ಸಾವಿರ ಪೇಜ್‌ವರೆಗೆ ಬ್ಲಾಕ್‌ ಮತ್ತು 8 ಸಾವಿರ ಪೇಜ್‌ವರೆಗೆ ಕಲರ್‌ ಪ್ರಿಂಟ್‌ ತೆಗೆಯಬಹುದು. ಪ್ರತಿ ಪೇಜ್‌ ಪ್ರಿಂಟ್ ಮಾಡಲು ಬ್ಲಾಕ್ ಪ್ರಿಂಟೌಟ್‌ಗೆ 10 ಪೈಸೆ ಮತ್ತು ಕಲರ್‌ ಪ್ರಿಂಟೌಟ್‌ಗೆ 21 ಪೈಸೆ ತಗಲುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇಂಟರ್‌ನೆಟ್‌ ನೆಟ್‌ವರ್ಕ್‌ ಇಲ್ಲದೆಯೇ ವೈಫೈ ಡೈರೆಕ್ಟ್‌ ಮೂಲಕ ಸ್ಮಾರ್ಟ್‌ಫೋನ್‌ನೊಂದಿಗೆ ಸಂಪರ್ಕಿಸಬಹುದಾಗಿದೆ.

ಒಟ್ಟಿನಲ್ಲಿ ಕಡಿಮೆ ಸ್ಥಳಾವಕಾಶ ಬೇಡುವ, ಮೊಬೈಲ್‌ ಮೂಲಕವೇ ತಕ್ಷಣಕ್ಕೆ ಪ್ರಿಂಟ್‌ ತೆಗೆಯುವ ಹಾಗೂ ಇಂಕ್‌ ರಿ–ಫಿಲ್ಲಿಂಗ್‌ ನಿರ್ವಹಣೆಯ ದೃಷ್ಟಿಯಿಂದ ವೈಯಕ್ತಿಕ ಬಳಕೆಗೆಇದು ಹೆಚ್ಚು ಉಪಯುಕ್ತವಾದ ಪ್ರಿಂಟರ್‌ ಎನ್ನಬಹುದು.

ಗುರುತಿಸಬಹುದಾದ ಅಂಶಗಳು

*ಮೊಬೈಲ್‌, ಟ್ಯಾಬ್ಲೆಟ್‌ ಮತ್ತು ಲ್ಯಾಪ್‌ಟಾಪ್‌ ಮೂಲಕ ಪ್ರಿಂಟ್‌, ಕಾಪಿ ಮತ್ತು ಸ್ಕ್ಯಾನ್‌ ಸುಲಭ

* ಮನೆಯಲ್ಲಿ ಇಡಲು ಕಡಿಮೆ ಜಾಗ ಸಾಕು

*ಎಚ್‌ಪಿ ಸ್ಮಾರ್ಟ್‌ ಆ್ಯಪ್‌ ಅಥವಾ ಇ–ಮೇಲ್‌ ಮೂಲಕ ಎಲ್ಲೇ ಇದ್ದರೂ ಪ್ರಿಂಟ್ ಮಾಡಬಹುದು

*ಆಟೊಮೆಟಿಕ್‌ ಡ್ಯುಪ್ಲೆಕ್ಸ್‌ ಪ್ರಿಂಟಿಂಗ್ ಸೌಲಭ್ಯ ಇಲ್ಲ

*ಪ್ರಿಂಟರ್‌ ಆನ್‌/ಆಫ್‌ ಆಗುವಾಗ ಹೆಚ್ಚಿನ ಸಮಯ ತೆಗೆದುಕೊಳ್ಳುವುದಲ್ಲದೇ ಶಬ್ದವೂ ಆಗುತ್ತದೆ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT