ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಸ್ಮಾರ್ಟ್‌ವಾಚ್ ಮಾರುಕಟ್ಟೆಗೆ ಭಾರತವೇ ಅತಿದೊಡ್ಡ ವೇದಿಕೆ: ವರದಿ

ಮೂರನೇ ತ್ರೈಮಾಸಿಕ ವರದಿ ಆಧರಿಸಿ ಕೌಂಟರ್‌ಪಾಯಿಂಟ್ ಹೇಳಿಕೆ ಬಿಡುಗಡೆ ಮಾಡಿದೆ.
Last Updated 30 ನವೆಂಬರ್ 2022, 12:28 IST
ಅಕ್ಷರ ಗಾತ್ರ

ಬೆಂಗಳೂರು: ಜಾಗತಿಕ ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ಭಾರತ ಅತಿದೊಡ್ಡ ವೇದಿಕೆಯಾಗಿ ಹೊರಹೊಮ್ಮಿದೆ ಎಂದು ಕೌಂಟರ್‌ಪಾಯಿಂಟ್ ವರದಿ ಹೇಳಿದೆ.

ಮೂರನೇ ತ್ರೈಮಾಸಿಕ ವರದಿಯನ್ನು ಆಧರಿಸಿ ಕೌಂಟರ್‌ಪಾಯಿಂಟ್ ಈ ಹೇಳಿಕೆ ಬಿಡುಗಡೆ ಮಾಡಿದೆ.

ಒಟ್ಟು ಉತ್ಪಾದನೆಯಾದ ಸ್ಮಾರ್ಟ್‌ವಾಚ್‌ಗಳ ಪೈಕಿ, ಶೇ 30ರಷ್ಟು ಸ್ಮಾರ್ಟ್‌ವಾಚ್ ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ.

ಆ ಪೈಕಿ, ನಾಯ್ಸ್, ಫೈರ್‌–ಬೋಲ್ಟ್, ಬೋಟ್ ಅತಿಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗಿದೆ.

ಪ್ರೀಮಿಯಂ ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ಆ್ಯಪಲ್ ಮುಂದಿದ್ದರೆ, ಸ್ಯಾಮ್‌ಸಂಗ್ ಎರಡನೇ ಸ್ಥಾನದಲ್ಲಿದೆ. ಉಳಿದಂತೆ, ಹುವೈ, ಅಮೇಝ್‌ಫಿಟ್ ಮತ್ತು ಗಾರ್ಮಿನ್ ಸ್ಮಾರ್ಟ್‌ವಾಚ್ ಕೂಡ ಕಳೆದ ವರ್ಷಕ್ಕೆ ಹೋಲಿಸಿದರೆ, ಹೆಚ್ಚಿನ ಮಾರಾಟ ಪ್ರಗತಿ ದಾಖಲಿಸಿದೆ.

ಚೀನಾದಲ್ಲಿನ ಕಠಿಣ ಕೋವಿಡ್ ನಿರ್ಬಂಧಗಳಿಂದಾಗಿ ಎಲೆಕ್ಟ್ರಾನಿಕ್ಸ್ ಮತ್ತು ಗ್ಯಾಜೆಟ್ ಮಾರಾಟದ ಮೇಲೆ ಪರಿಣಾಮ ಬೀರಿದ್ದು, ಭಾರತ ಮೊದಲ ಸ್ಥಾನ ಪಡೆಯಲು ಕಾರಣ ಎಂದು ಕೌಂಟರ್‌ಪಾಯಿಂಟ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT