ಶನಿವಾರ, ಮೇ 15, 2021
25 °C

ಭಾರತದಲ್ಲಿ ಐಫೋನ್‌ ಎಸ್‌ಇ: ₹38,900 ವಿಶೇಷ ದರ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಐಫೋನ್‌ ಎಸ್‌ಇ

ಬೆಂಗಳೂರು: ಆ್ಯಪಲ್‌ ಕಂಪನಿಯ ಐಫೋನ್‌ ಮಾದರಿಗಳಲ್ಲಿ ಕೈಗೆಟುಕುವ ದರ ಹಾಗೂ ಸಮರ್ಥ ಸ್ಮಾರ್ಟ್‌ಫೋನ್‌ ಎಂದು ಜನಪ್ರಿಯಗೊಂಡಿರುವ 'ಐಫೋನ್‌ ಎಸ್‌ಇ' ಇನ್‌ಗ್ರಾಮ್‌ ಮೈಕ್ರೊ ಮೂಲಕ ಭಾರತದಲ್ಲಿ ಲಭ್ಯವಿದೆ. 

ಹೊಚ್ಚ ಹೊಸ ಐಫೋನ್‌ ಮಾದರಿಗಳಲ್ಲಿ ಬಳಕೆಯಾಗಿರುವ ಎ13 ಬಯೋನಿಕ್‌ ಚಿಪ್‌ನ್ನು ಐಫೋನ್‌ ಎಸ್‌ಇ ಒಳಗೊಂಡಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯಂತ ವೇಗವಾಗಿ ಕಾರ್ಯನಿರ್ವಹಣೆಗೆ ಈ ಚಿಪ್‌  ಸಹಕಾರಿಯಾಗಿದೆ. ಅತ್ಯುತ್ತಮ ಕಾರ್ಯ ಸಾಮರ್ಥ್ಯದೊಂದಿದೆ ದೀರ್ಘಾವಧಿ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. 

ನೀರು ಮತ್ತು ದೂಳು ಪ್ರತಿರೋಧಕ ಕೋಟಿಂಗ್‌, ಪೋರ್ಟ್ರೇಟ್‌ ಮೋಡ್‌ ಅನುಕೂಲಗಳೊಂದಿಗೆ ಒಂದೇ ಕ್ಯಾಮೆರಾ ಸೆನ್ಸರ್‌ ಇದೆ. ಭಾರತದಲ್ಲಿ 4,200ಕ್ಕೂ ಹೆಚ್ಚು ರಿಟೇಲ್‌ ಮಳಿಗೆಗಳಲ್ಲಿ ಐಫೋನ್‌ ಎಸ್‌ಇ ಖರೀದಿಗೆ ಸಿಗಲಿದೆ. 

ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ, ಆ ಬ್ಯಾಂಕ್‌ನ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಬಳಸಿ ಐಫೋನ್‌ ಎಸ್‌ಇ ಖರೀದಿಸಿದರೆ ₹3,600 ಕ್ಯಾಷ್‌ಬ್ಯಾಕ್‌ ಸಿಗಲಿದೆ. ಇದರಿಂದಾಗಿ ಐಫೋನ್‌ ಎಸ್‌ಇ ₹38,900 ವಿಶೇಷ ದರದಲ್ಲಿ ಗ್ರಾಹಕರನ್ನು ತಲುಪಲಿದೆ. ಹೆಚ್ಚಿನ ಮಾಹಿತಿಗಾಗಿ, www.indiaistore.com ವೆಬ್‌ಸೈಟ್‌ಗೆ ಭೇಟಿ ನೀಡಿ.

ಜಗತ್ತಿನಾದ್ಯಂತ ತಂತ್ರಜ್ಞಾನ ಸಂಬಂಧಿತ ಸೇವೆಗಳು, ಉತ್ಪನ್ನಗಳ ಪೂರೈಕೆ, ವ್ಯಾಪಾರ ಒಪ್ಪಂದಗಳನ್ನು ಇನ್‌ಗ್ರಾಂ ಮೈಕ್ರೊ ಸಂಸ್ಥೆ ನಡೆಸುತ್ತಿದೆ. ಇನ್‌ಗ್ರಾಂ ಕುರಿತಾದ ಇನ್ನಷ್ಟು ಮಾಹಿತಿ www.ingrammicro.com ವೆಬ್‌ಸೈಟ್‌ನಲ್ಲಿ ಲಭ್ಯವಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು