ಶನಿವಾರ, ಸೆಪ್ಟೆಂಬರ್ 25, 2021
29 °C

ಟೆಕ್‌ನೋ ಹೊಸ ಬಜೆಟ್ ಫೋನ್ Spark Go Plus ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Tecno Spark Go Plus

ನವದೆಹಲಿ: 2019ರಲ್ಲಿ ಫ್ಯಾಂಟಮ್, ಕ್ಯಾಮಾನ್ ಮತ್ತು ಸ್ಪಾರ್ಕ್ ಸರಣಿಯಲ್ಲಿ 9 ವೈವಿಧ್ಯಮಯ ಸಾಧನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದ ಟೆಕ್‌ನೋ, 2020ರ ಮೊದಲ ಸ್ಮಾರ್ಟ್‌ಫೋನ್ 'ಸ್ಪಾರ್ಕ್ ಗೋ ಪ್ಲಸ್' ಅನ್ನು ಗುರುವಾರ ಘೋಷಣೆ ಮಾಡಿದೆ. ಇದು ಕಳೆದ ವರ್ಷ ಅದ್ಭುತ ಮಾರಾಟ ಕಂಡ 'ಸ್ಪಾರ್ಕ್ ಗೋ' ಮಾದರಿಯ ಸುಧಾರಿತ ರೂಪವಾಗಿದ್ದು, ಆಂಡ್ರಾಯ್ಡ್ 9 ಆಧಾರಿತ ಹಾಯ್ ಕಾರ್ಯಾಚರಣಾ ವ್ಯವಸ್ಥೆ ಹೊಂದಿದೆ.

6.5 ಇಂಚಿನ HD ಡಿಸ್‌ಪ್ಲೇ ಜತೆಗೆ ಡಾಟ್ ನಾಚ್ ಸ್ಕ್ರೀನ್, ಬ್ಯೂಟೀ ಮೋಡ್, ಪೋರ್ಟ್ರೇಟ್ ಮೋಡ್ ಇರುವ, ಫ್ಲ್ಯಾಶ್ ಸಹಿತ 8 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಹಾಗೂ ಅಷ್ಟೇ ಸಾಮರ್ಥ್ಯದ ಪ್ರಧಾನ ಕ್ಯಾಮೆರಾ ಇದರಲ್ಲಿದೆ. ಹಿಂಭಾಗದಲ್ಲಿ ಡ್ಯುಯಲ್ ಫ್ಲ್ಯಾಶ್ ಕೂಡ ಇದೆ.

2GB RAM ಹಾಗೂ 32 GB ಆಂತರಿಕ ಮೆಮೊರಿ ಇದರಲ್ಲಿದ್ದು, 128 ಜಿಬಿವರೆಗೂ ವಿಸ್ತರಿಸಬಹುದು. ಇದರ ಬ್ಯಾಟರಿ ಗಾತ್ರ 4000mAh. ಹೀಲಿಯೊ ಎ22 ಕ್ವಾಡ್ ಕೋರ್ ಪ್ರೊಸೆಸರ್ ಮತ್ತು ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ ಇದ್ದರೆ, ಫೇಸ್ ಅನ್‌ಲಾಕ್ ವ್ಯವಸ್ಥೆಯೂ ಇದರಲ್ಲಿದೆ. ಹಿಂಭಾಗದ ಕವಚ ತೆರೆಯಬಹುದಾಗಿದ್ದು, ಅದರೊಳಗೆ ಎರಡು ನ್ಯಾನೋ ಸಿಮ್ ಕಾರ್ಡ್ (ಡ್ಯುಯಲ್ VoLTE) ಸ್ಲಾಟ್ ಮತ್ತು ಒಂದು ಮೆಮೊರಿ ಕಾರ್ಡ್ ಸ್ಲಾಟ್ ಇದೆ.

ಬಿಗ್ ಬಿ ಹೆಸರಿನಲ್ಲಿ ಮಾರುಕಟ್ಟೆಗೆ ಬಂದಿರುವ ಈ ಉತ್ಪನ್ನದ ಜತೆಗೆ 799 ರೂ. ಮೌಲ್ಯದ ಬ್ಲೂಟೂತ್ ಇಯರ್‌ಪೀಸ್ ಉಚಿತವಾಗಿ ದೊರೆಯುತ್ತಿದೆ. ಇಷ್ಟಲ್ಲದೆ 297 ರೂ. ಮೌಲ್ಯದ ಮೂರು ತಿಂಗಳ ಗಾನಾ ಚಂದಾದಾರಿಕೆಯ ಕೊಡುಗೆಯೂ ಇದೆ. ಇದಲ್ಲದೆ, ಎಂದಿನಂತೆಯೇ ಏಕಕಾಲದ ಸ್ಕ್ರೀನ್ ಬದಲಾವಣೆ ಮತ್ತು 12+1 ತಿಂಗಳ ವಿಸ್ತರಿತ ವಾರಂಟಿ ನೀಡಲಾಗುತ್ತಿದ್ದು, ಬೆಲೆ 6299 ರೂ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು