ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಜಿ ಹೊಸ 5ಜಿ ಫೋನ್ ಭಾರತದಲ್ಲಿ ಬಿಡುಗಡೆ; 'ವಿಂಗ್' ಸ್ಕ್ರೀನ್‌ ಅನುಭವ

Last Updated 28 ಅಕ್ಟೋಬರ್ 2020, 9:46 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಎಲ್‌ಜಿ ಕಂಪನಿಯು ಅತ್ಯಾಧುನಿಕ ವಿಂಗ್‌ ಹಾಗೂ ವೆಲ್ವೆಟ್‌ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬುಧವಾರ ಭಾರತದಲ್ಲಿ ಬಿಡುಗಡೆ ಮಾಡಿದೆ. ಎರಡು ಪ್ಯಾನೆಲ್‌ಗಳಿರುವ ಎಲ್‌ಜಿ ವಿಂಗ್‌ ಮೊಬೈಲ್ ವಿನ್ಯಾಸದಿಂದಲೇ ಗಮನ ಸೆಳೆಯುತ್ತಿದೆ.

ವಿಂಗ್‌ ಮೊಬೈಲ್‌ಗಳಲ್ಲಿ ಒಂದರ ಮೇಲೆ ಮತ್ತೊಂದು ಸ್ಕ್ರೀನ್‌ ಇದ್ದು, ಮೇಲಿನ ಸ್ಕ್ರೀನ್‌ 90 ಡಿಗ್ರಿಯಷ್ಟು ತಿರುಗಿಸಬಹುದು. ಮೇಲೆ ಅಡ್ಡಲಾಗಿ ದೊಡ್ಡ ಡಿಸ್‌ಪ್ಲೇ ಮತ್ತು ಕಳಗಡೆ ಪುಟ್ಟ ಸ್ಕ್ರೀನ್‌ ಇರುವುದರಿಂದ ಒಂದೇ ಸಮಯದಲ್ಲಿ ಹಲವು ಕಾರ್ಯಗಳನ್ನು ನಿರ್ವಹಿಸಬಹುದಾಗಿದೆ. ಮೇಲಿನ ಡಿಸ್‌ಪ್ಲೇ 6.8 ಇಂಚು ಫುಲ್‌ ಎಚ್‌ಡಿ+ ಪಿ–ಒಎಲ್‌ಇಡಿ ಪ್ಯಾನೆಲ್‌ ಆಗಿದ್ದು, ಕೆಳಗೆ 3.9 ಇಂಚು ಜಿ–ಒಎಲ್‌ಇಡಿ ಡಿಸ್‌ಪ್ಲೇ ಇದೆ.

ವಿಡಿಯೊ ನೋಡುತ್ತಲೇ ಚಾಟ್‌ ಮಾಡುವುದು, ಜಿಪಿಎಸ್‌ ಮ್ಯಾಪ್‌ ನೋಡುತ್ತಲೇ ಕರೆಯನ್ನೂ ಸ್ವೀಕರಿಸುವುದು, ಒಮ್ಮೆಗೆ ಹಿಂದೆ ಮತ್ತು ಮುಂದಿನ ಕ್ಯಾಮೆರಾಗಳಲ್ಲಿ ರೆಕಾರ್ಡ್‌ ಮಾಡುವುದು ಸಾಧ್ಯವಿದೆ. ದೂಳು ಮತ್ತು ನೀರಿನಿಂದ ರಕ್ಷಣೆ ಪಡೆಯುವ ವ್ಯವಸ್ಥೆಯನ್ನೂ ಫೋನ್‌ ಒಳಗೊಂಡಿದೆ.

ಆ್ಯಂಡ್ರಾಯ್ಡ್‌ 10 ಆಧಾರಿತ ಎಲ್‌ಜಿ ಕ್ಯು ಒಎಸ್‌ ವ್ಯವಸ್ಥೆ, ಕ್ವಾಲ್‌ಕಾಮ್‌ ಸ್ನ್ಯಾಪ್‌ಡ್ರ್ಯಾಗನ್‌ 765ಜಿ ಆಕ್ಟಾ–ಕೋರ್‌ ಪ್ರೊಸೆಸರ್‌, 8ಜಿಬಿ ರ್‍ಯಾಮ್‌, 256ಜಿಬಿ ಸಂಗ್ರಹ ಸಾಮರ್ಥ್ಯ (2ಟಿಬಿ ವರೆಗೂ ವಿಸ್ತರಿಸಬಹುದು), ಸ್ನ್ಯಾಪ್‌ಗ್ರ್ಯಾಗನ್‌ ಎಕ್ಸ್‌52 5ಜಿ ಮೊಡೆಮ್‌, ಹಿಂಬದಿಯಲ್ಲಿ 64ಎಂಪಿ+13ಎಂಪಿ (ಅಲ್ಟ್ರಾ ವೈಡ್‌–ಆ್ಯಂಗಲ್‌)+12ಎಂಪಿ ಕ್ಯಾಮೆರಾಗಳಿವೆ ಹಾಗೂ ಗಿಂಬಲ್‌ ಮೋಷನ್‌ ವ್ಯವಸ್ಥೆಯನ್ನೂ ನೀಡಲಾಗಿದೆ. ಸೆಲ್ಫಿಗಾಗಿ 32ಎಂಪಿ ಕ್ಯಾಮೆರಾ ಇದೆ. 4,000ಎಂಎಎಚ್‌ ಬ್ಯಾಟರಿ ಮತ್ತು ಕ್ವಿಕ್‌ ಚಾರ್ಜಿಂಗ್‌, ವೈರ್‌ಲೆಸ್‌ ಚಾರ್ಜಿಂಗ್‌ ವ್ಯವಸ್ಥೆ ಇದೆ.

ಎಲ್‌ಜಿ ವಿಂಗ್‌ 5ಜಿ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, 5–10 ಜಿಬಿಪಿಎಸ್‌ ವರೆಗಿನ ವೇಗದ ಇಂಟರ್‌ನೆಟ್‌ ಸಂಪರ್ಕ ಪಡೆಯುವುದು ಸಾಧ್ಯವಿದೆ. ನವೆಂಬರ್‌ 9ರಿಂದ ಈ ಫೋನ್‌ ಖರೀದಿಗೆ ಸಿಗಲಿದೆ, ಇದಕ್ಕೆ ₹69,990 ಬೆಲೆ ನಿಗದಿಯಾಗಿದೆ.

ಎಲ್‌ಜಿ ವೆಲ್ವೆಟ್‌ (G Velvet)

6.8 ಇಂಚು ಫುಲ್‌ ಎಚ್‌ಡಿ+ ಒಎಲ್‌ಇಡಿ ಡಿಸ್‌ಪ್ಲೇ, ಇನ್‌–ಸ್ಕ್ರೀನ್‌ ಫಿಂಗರ್‌ಪ್ರಿಂಟ್‌ ಸೆನ್ಸರ್‌ ಇದೆ. 3ಡಿ ಆರ್ಕ್‌ ವಿನ್ಯಾಸವಿದೆ, ಫೋನ್‌ 5 ಅಡಿ ಆಳದ ನೀರಿನಲ್ಲಿ 30 ನಿಮಿಷದ ವರೆಗೂ ಹಾನಿಯಾಗದೆ ಉಳಿಯಬಹುದಾಗಿದೆ.

ಸ್ಯಾಪ್‌ಡ್ರ್ಯಾಗನ್‌ 845 ಆಕ್ಟಾ–ಕೋರ್‌ ಚಿಪ್‌ಸೆಟ್‌, ಆ್ಯಂಡ್ರಾಯ್ಡ್‌ 10 ಒಎಸ್‌, 8ಜಿಬಿ ರ್‍ಯಾಮ್‌, 128ಜಿಬಿ ಸಂಗ್ರಹ ಸಾಮರ್ಥ್ಯ (1ಟಿಬಿ ವರೆಗೂ ವಿಸ್ತರಿಸಬಹುದು) ಹಾಗೂ 4,300ಎಂಎಎಚ್‌ ಬ್ಯಾಟರಿ ಇದೆ.

ಎಲ್‌ಜಿ ವೆಲ್ವೆಟ್‌

ಕ್ಯಾಮೆರಾ: ಹಿಂಬದಿಯಲ್ಲಿ 48ಎಂಪಿ+8ಎಂಪಿ ಅಲ್ಟ್ರಾ ವೈಡ್‌ ಲೆನ್ಸ್‌+5ಎಂಪಿ ಡೆಪ್ತ್‌ ಸೆನ್ಸರ್‌ ಮತ್ತು ಎಲ್‌ಇಡಿ ಫ್ಲ್ಯಾಷ್‌ ಇದೆ. ಮುಂದೆ ಸೆಲ್ಫಿಗಾಗಿ 16ಎಂಪಿ ಲೆನ್ಸ್‌ ಇದೆ.

ಈ ಫೋನ್‌ ಬೆಲೆ ₹36,990 ನಿಗದಿಯಾಗಿದೆ. ಎರಡು ಸ್ಕ್ರೀನ್‌ ಬಳಕೆಯ ಅನುಭವ ಪಡೆಯಲು ಎಲ್‌ಜಿ ಫೋನ್‌ ಜೊತೆಗೆ ಪ್ರತ್ಯೇಕ ಪ್ಯಾನೆಲ್‌ ನೀಡುವ ವ್ಯವಸ್ಥೆಯನ್ನೂ ತಂದಿದ್ದು, ಆ ಸ್ಕ್ರೀನ್‌ ಕೂಡ ಪಡೆಯಬೇಕಾದರೆ ಒಟ್ಟು ₹49,990 ಪಾವತಿಸಬೇಕು. ಅಕ್ಟೋಬರ್‌ 30ರಿಂದ ಫೋನ್‌ ಖರೀದಿಗೆ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT