ಶನಿವಾರ, ಮೇ 8, 2021
19 °C

ಮೈಕ್ರೊಮ್ಯಾಕ್ಸ್‌ 'ಇನ್‌ 1' ಸ್ಮಾರ್ಟ್‌ಫೋನ್‌: ನಾಳೆಯಿಂದ ಮಾರಾಟ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮೈಕ್ರೊಮ್ಯಾಕ್ಸ್‌ ಇನ್ ಸ್ಮಾರ್ಟ್‌ಫೋನ್‌

ನವದೆಹಲಿ: ದೇಶೀಯ ಮೊಬೈಲ್‌ ಬ್ರ್ಯಾಂಡ್‌ ಮೈಕ್ರೊಮ್ಯಾಕ್ಸ್‌ನ ಹೊಸ ಸ್ಮಾರ್ಟ್‌ಫೋನ್‌ 'ಇನ್‌ 1' ಶುಕ್ರವಾರದಿಂದ ಖರೀದಿಗೆ ಸಿಗಲಿದೆ.

ಮೀಡಿಯಾಟೆಕ್‌ ಹೀಲಿಯೊ ಜಿ80 ಪ್ರೊಸೆಸರ್‌, 48ಎಂಪಿ ಎಐ ಮೂರು ಕ್ಯಾಮೆರಾ, 8ಎಂಪಿ ಸೆಲ್ಫಿ ಕ್ಯಾಮೆರಾ ಹಾಗೂ ಅಲ್ಟ್ರಾಬ್ರೈಟ್‌ 6.67 ಇಂಚು ಎಫ್ಎಚ್‌ಡಿ+ಪಂಚ್‌ ಹೋಲ್‌ ಡಿಸ್‌ಪ್ಲೇ ಇರುವ ಫೋನ್‌ನ ಆರಂಭಿಕ ಬೆಲೆ ₹ 9,999 ನಿಗದಿಯಾಗಿದೆ. 4ಜಿಬಿ ರ್‍ಯಾಮ್‌, 64ಜಿಬಿ ಸಂಗ್ರಹ ಮತ್ತು 6ಜಿಬಿ ರ್‍ಯಾಮ್, 128ಜಿಬಿ ಸಂಗ್ರಹ ಸಾಮರ್ಥ್ಯದ ಮಾದರಿಗಳಲ್ಲಿ ಫೋನ್‌ ಲಭ್ಯವಿದೆ. 6ಜಿಬಿ ರ್‍ಯಾಮ್‌ ಇರುವ ಫೋನ್ ಬೆಲೆ ₹11,499 ಇದೆ.

ಮೈಕ್ರೊಮ್ಯಾಕ್ಸ್‌ನ micromaxinfo.com ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಮಾರ್ಚ್‌ 26ರ ಮಧ್ಯಾಹ್ನ 12ರಿಂದ ಫೋನ್‌ ಖರೀದಿಸಬಹುದಾಗಿದೆ. ಪ್ರಸ್ತುತ ನಿಗದಿಯಾಗಿರುವ ಬೆಲೆ ಆರಂಭಿಕ ಕೊಡುಗೆಯಾಗಿದೆ ಎಂದು ಕಂಪನಿ ಪ್ರಕಟಿಸಿದೆ.

ಮೈಕ್ರೊಮ್ಯಾಕ್ಸ್‌ ಇನ್‌ 1 ಫೋನ್‌ನಲ್ಲಿ 5000ಎಂಎಎಚ್‌ ಬ್ಯಾಟರಿ ಅಳವಡಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು