ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Microsoft: ನೂತನ ಸರ್ಫೇಸ್ 9 ಪ್ರೊ ಲ್ಯಾಪ್‌ಟಾಪ್ ಬಿಡುಗಡೆ

ಮೈಕ್ರೋಸಾಫ್ಟ್ ನೂತನ ಸರ್ಫೇಸ್ ಲ್ಯಾಪ್‌ಟಾಪ್ ಬಿಡುಗಡೆ
Last Updated 13 ಅಕ್ಟೋಬರ್ 2022, 13:53 IST
ಅಕ್ಷರ ಗಾತ್ರ

ಬೆಂಗಳೂರು: ಮೈಕ್ರೋಸಾಫ್ಟ್ ನೂತನ ಸರ್ಫೇಸ್ ಸರಣಿಯ ಲ್ಯಾಪ್‌ಟಾಪ್ ಪರಿಚಯಿಸಿದೆ.

ಮೈಕ್ರೋಸಾಫ್ಟ್ ಇಗ್ನೈಟ್ 2022 ಈವೆಂಟ್‌ನಲ್ಲಿ ಹೊಸ ಸರಣಿಯ ಲ್ಯಾಪ್‌ಟಾಪ್‌ಗಳನ್ನು ಅನಾವರಣಗೊಳಿಸಲಾಗಿದೆ.

ಮೈಕ್ರೋಸಾಫ್ಟ್, ಸರ್ಫೇಸ್ 9 ಪ್ರೊ, ಲ್ಯಾಪ್‌ಟಾಪ್ 5 ಸರಣಿ ಮತ್ತು ಸರ್ಫೇಸ್ ಸ್ಟುಡಿಯೊ 2 ಪ್ಲಸ್ ಹೊಸದಾಗಿ ಪರಿಚಯಿಸಲ್ಪಟ್ಟಿದೆ.

ಭಾರತದಲ್ಲಿ ಮಾರುಕಟ್ಟೆಗೆ ಬಿಡುಗಡೆ ಕುರಿತು ಕಂಪನಿ ಮಾಹಿತಿ ಬಹಿರಂಗಪಡಿಸಿಲ್ಲ. ಹೊಸ ಸರ್ಫೇಸ್ ಮಾದರಿಯ ಆರಂಭಿಕ ದರ ಅಂದಾಜು ₹82,200 ಇರಲಿದೆ ಎನ್ನಲಾಗಿದೆ.

ಮೈಕ್ರೋಸಾಫ್ಟ್‌ನ ಜನಪ್ರಿಯ ಸರ್ಫೇಸ್ 9 ಪ್ರೊ, 13 ಇಂಚಿನ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ, 12th Gen ಇಂಟೆಲ್ ಕೋರ್ i5-1235U / Core i7-1255U ಪ್ರೊಸೆಸರ್ ಮತ್ತು ಇಂಟೆಲ್ ಐರಿಸ್ Xe GPU ಬೆಂಬಲಿತ Windows 11 ಹೋಮ್ OS ಜತೆಗೆ 8GB/16GB/32GB RAM, 128GB/256GB/512GB/1TB SSD, 10MP ಆಟೋಫೋಕಸ್ ಕ್ಯಾಮೆರಾ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT