ಸೋಮವಾರ, ಜೂನ್ 21, 2021
30 °C

ಮೊಟೊರೊಲಾ ರೇಜರ್‌ ಬಿಡುಗಡೆ: ಎರಡು ಸ್ಕ್ರೀನ್‌ ಒಂದು ಫೋನ್‌, ಬೆಲೆ ₹1,24,999

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮೊಟೊರೊಲಾ ರೇಜರ್‌ ಮಡಚುವ ಫೋನ್‌

ಮೊಟೊರೊಲಾ ತನ್ನ ಮೊದಲ ಮಡಚಬಹುದಾದ ಸ್ಮಾರ್ಟ್‌ಫೋನ್‌ನ್ನು ಭಾರತದಲ್ಲಿ ಬಿಡುಗಡೆ ಮಾಡಿರುವುದಾಗಿ ಸೋಮವಾರ ಪ್ರಕಟಿಸಿದೆ. ಇಂದಿನಿಂದಲೇ ಫ್ಲಿಪ್‌ಕಾರ್ಟ್‌ ಮೂಲಕ ಪ್ರೀ ಬುಕ್ಕಿಂಗ್‌ ಲಭ್ಯವಿದ್ದು, ಏಪ್ರಿಲ್‌ 2ರಿಂದ ಫೋನ್‌ ಖರೀದಿಗೆ ಸಿಗಲಿದೆ. 

6.2 ಇಂಚು ಮಡಚಬಹುದಾದ ಪ್ಲಾಸ್ಟಿಕ್‌ ಒಎಲ್‌ಇಡಿ (pOLED) ಡಿಸ್‌ಪ್ಲೇ ಮತ್ತು ಫೋನ್‌ ಮಡಚಿದಾಗ ಮುಂಭಾಗದಲ್ಲಿ 2.7 ಇಂಚು ಗ್ಲಾಸ್‌ ಒಎಲ್‌ಇಡಿ (gOLED) ಕವರ್ ಸ್ಕ್ರೀನ್‌ ಹೊಂದಿದೆ. ಮುಖ್ಯ ಕ್ಯಾಮೆರಾ 16ಎಂಪಿ, ಡ್ಯೂಯಲ್‌ ಎಲ್‌ಇಡಿ ಫ್ಲ್ಯಾಷ್‌ ಹಾಗೂ ಸೆಲ್ಫಿಗಾಗಿ 5ಎಂಪಿ ಕ್ಯಾಮೆರಾ ಅಳವಡಿಸಲಾಗಿದೆ. 

ಬೆಲೆ ₹1,24,999 ನಿಗದಿಯಾಗಿದೆ. ಫೋನ್‌ ಖರೀದಿ ಮಾಡುವ ರಿಲಯನ್ಸ್‌ ಜಿಯೊ ಬಳಕೆದಾರರಿಗೆ ದುಪ್ಪಟ್ಟು ಡೇಟಾ ಸೌಲಭ್ಯ, ನಿಗದಿತ ಬ್ಯಾಂಕ್‌ಗಳ ಕಾರ್ಡ್‌ ಬಳಸಿ ಖರೀದಿ ಮಾಡುವವರಿಗೆ ₹10,000 ವರೆಗೂ ಕ್ಯಾಷ್‌ಬ್ಯಾಕ್‌, ಒಂದು ವರ್ಷದ ವರೆಗೂ ಉಚಿತ ಸರ್ವೀಸ್‌ ಹಾಗೂ ನಿಗದಿತ ಮೊತ್ತ ಪಾವತಿಸಿ ಒಂದು ಬಾರಿ ಸ್ಕ್ರೀನ್‌ ರೀಪ್ಲೇಸ್‌ಮೆಂಟ್‌ ಸೌಲಭ್ಯಗಳನ್ನು ಪಡೆಯಬಹುದು. 

6ಜಿಬಿ ರ್‍ಯಾಮ್‌ ಮತ್ತು 128ಜಿಬಿ ಸಂಗ್ರಹ ಸಾಮರ್ಥ್ಯ ಹೊಂದಿರುವ ರೇಜರ್‌ನಲ್ಲಿ ಕ್ವಾಲ್‌ಕಾಂ ಸ್ನ್ಯಾಪ್‌ಡ್ರ್ಯಾಗನ್‌ 710 ಪ್ರೊಸೆಸರ್‌ ಅಳವಡಿಸಲಾಗಿದೆ. 2,510 ಎಂಎಎಚ್‌ ಜೊತೆಗೆ 15 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವಿದೆ. ಫೋನ್‌ ಕೆಳಭಾಗದಲ್ಲಿ ಫಿಂಗರ್‌ಪ್ರಿಂಟ್‌ ಸೆನ್ಸರ್‌ ನೀಡಲಾಗಿದೆ. ಟೈಪ್‌–ಸಿ ಯುಎಸ್‌ಬಿ ಸಂಪರ್ಕ ವ್ಯವಸ್ಥೆ ಹೊಂದಿದೆ. 

ಫೋನ್‌ 205 ಗ್ರಾಂ ತೂಕವಿದ್ದು, ಫೋನ್‌ ಮಡಚಿದಾಗ 3.7 ಇಂಚು ಉದ್ದ, 2.8 ಇಂಚು ಅಗಲ ಹಾಗೂ 0.5 ಇಂಚು ದಪ್ಪ ಇದೆ. ಫೋನ್‌ ಕಪ್ಪು ಬಣ್ಣದಲ್ಲಿ ಲಭ್ಯವಿರಲಿದೆ ಹಾಗೂ ಇ–ಸಿಮ್‌ ಮಾತ್ರ ಬೆಂಬಲಿಸುತ್ತದೆ. ಫೋನ್‌ಗೆ ನ್ಯಾನೊ ಕೋಟಿಂಗ್‌ ರಕ್ಷಣೆ ಇರುವುದರಿಂದ ನೀರು ಅಥವಾ ಬೆವರು ಬಿದ್ದರೂ ತೊಂದರೆಯಾಗುವುದಿಲ್ಲ. ಫೋನ್‌ ಕಾರ್ಯಾಚರಣೆಗೆ ಆ್ಯಂಡ್ರಾಯ್ಡ್‌ 9 ಪೈ ಆಪರೇಟಿಂಗ್‌ ಸಿಸ್ಟಮ್‌ ವ್ಯವಸ್ಥೆ ಹೊಂದಿದೆ. 

ರೇಜರ್‌ ಫೋನ್‌ ಗುಣಲಕ್ಷಣಗಳು 

ಸಾಮರ್ಥ್ಯ: 6ಜಿಬಿ ರ್‍ಯಾಮ್‌, 128ಜಿಬಿ ಸಂಗ್ರಹ

ಪ್ರೊಸೆಸರ್‌: ಕ್ವಾಲ್‌ಕಾಂ ಸ್ನ್ಯಾಪ್‌ಡ್ರ್ಯಾಗನ್‌ 710 ಆಕ್ಟಾಕೋರ್‌ 

ಕ್ಯಾಮೆರಾ: 16ಎಂಪಿ ಮತ್ತು ಸೆಲ್ಫಿಗಾಗಿ 5ಎಂಪಿ 

ಬ್ಯಾಟರಿ: 2510 ಎಂಎಎಚ್‌, 15 ವ್ಯಾಟ್‌ ಟರ್ಬೊ ಚಾರ್ಜಿಂಗ್‌

ಡಿಸ್‌ಪ್ಲೇ: 6.2 ಇಂಚು ಮಡಚುವ ಪ್ಲಾಸ್ಟಿಕ್‌ ಎಲ್‌ಇಡಿ (POLED); ಹೊರಭಾಗದಲ್ಲಿ 2.7 ಇಂಚು ಗ್ಲಾಸ್‌ ಎಲ್‌ಇಡಿ (GOLED)

ಅಳತೆ: ಫೋನ್‌ ಮಡಚಿದ್ದಾಗ– 3.7 ಇಂಚು ಉದ್ದ, 2.8 ಇಂಚು ಅಗಲ ಹಾಗೂ 0.5 ಇಂಚು ದಪ್ಪ

ತೂಕ: 205 ಗ್ರಾಂ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು